ಖಾನಾಪುರ :ಲಿಂಗನಮಠ ಗ್ರಾಮದ ಮಹಿಳೆಯ ದೇಹದಾನ
ಲಿಂಗನಮಠ ಗ್ರಾಮದ ಮಹಿಳೆಯ ದೇಹದಾನ
ಖಾನಾಪುರ ಅ 21 : ತಾಲೂಕಿನ ಲಿಂಗನಮಠ ಗ್ರಾಮದ ಮಹಿಳೆ ದಿವಂಗತ ಶ್ರೀಮತಿ ಶಿವಲೀಲಾ ರವೀಂದ್ರ ಬಾಗೇವಾಡಿ (49) ಶನಿವಾರ ಬೇಳಗಿನ ಜಾವ ನಿಧನರಾದರು.
ಇವಳು ಲಿಂಗನಮಠ ಗ್ರಾಮದ ಕೆಳಗಿನ ಓಣಿಯಲ್ಲಿ ವಾಸಿಸುತ್ತಿದ್ದರು, ಮೃತರಿಗೆ ಪತಿ ಹಾಗೂ ಮೂರು ಗಂಡು ಮಕ್ಕಳಿದ್ದಾರೆ. ಮೃತರ ಇಚ್ಛೆಯಂತೆ ಪತಿ ಹಾಗೂ ಮಕ್ಕಳು ಸೇರಿಕೊಂಡು ಡಾ.ರಾಮಣ್ಣನವರ ಚಾರೀಟೇಬಲ್ ಟ್ರಸ್ಟ ವತಿಯಿಂದ ದೇಹವನ್ನು ಬಿಮ್ಸ್ ಬೆಳಗಾವಿ ವೈಧ್ಯಕೀಯ ವಿಜ್ನಾನ ಸಂಸ್ಥೆ, ಜಿಲ್ಲಾ ಆಸ್ಪತ್ರೆ ಅಂಗ ರಚನಾಶಾಸ್ತ್ರ ವಿಭಾಗಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನೆಗೆ ಅನುಕೂಲವಾಗಲೆಂದು ಮೃತಳ ದೇಹ ದಾನವಾಗಿ ನೀಡಲಾಯಿತು.
Related posts:
Posted in: Others