RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಪ್ರವಾಹ ಹಿನ್ನೆಲೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕರ ಬೇಟಿ : ಗೋಕಾಕ-ಶಿಂಗಳಾಪುರ ಹೊಸ ಸೇತುವೆ ಎತ್ತರಕ್ಕೆ ಏರಿಸಲು ಕ್ರಮ : ರಮೇಶ ಜಾರಕಿಹೊಳಿ

ಗೋಕಾಕ:ಪ್ರವಾಹ ಹಿನ್ನೆಲೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕರ ಬೇಟಿ : ಗೋಕಾಕ-ಶಿಂಗಳಾಪುರ ಹೊಸ ಸೇತುವೆ ಎತ್ತರಕ್ಕೆ ಏರಿಸಲು ಕ್ರಮ : ರಮೇಶ ಜಾರಕಿಹೊಳಿ 

ಪ್ರವಾಹ ಹಿನ್ನೆಲೆ : ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಸಕರ ಬೇಟಿ : ಗೋಕಾಕ-ಶಿಂಗಳಾಪುರ ಹೊಸ ಸೇತುವೆ ಎತ್ತರಕ್ಕೆ ಏರಿಸಲು ಕ್ರಮ : ರಮೇಶ ಜಾರಕಿಹೊಳಿ


ಗೋಕಾಕ ಜು 28 : ಎಡಬಿಡದೆ ಸತತವಾಗಿ ಸುರಿಯುತ್ತಿರುವ ಮಹಾ ಮಳೆಯಿಂದ ಗೋಕಾಕ ನಗರ ಭಾಗಶಃ ಜಲಾವೃತ್ತವಾಗಿದ್ದು, ರವಿವಾರದಂದು ಶಾಸಕ ರಮೇಶ ಜಾರಕಿಹೊಳಿ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಧೈರ್ಯ ಹೇಳಿದರು.

ನಗರದ ಚಿಕ್ಕೋಳಿ, ಗೋಕಾಕ-ಶಿಂಗಳಾಪುರ ಹೊಸ ಸೇತುವೆ, ಮಟನ್ ಮಾರ್ಕೆಟ್, ಕುಂಬಾರ ಓಣಿ, ಲೋಳಸೂರ ಸೇತುವೆ ಹಾಗೂ ನಗರದಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಗಳಿಗೆ ಬೇಟಿ ನೀಡಿ ಸಂತ್ರಸ್ತರಿಗೆ ವಿತರಿಸುತ್ತಿರುವ ಆಹಾರ, ದಿನಬಳಕೆಯ ವಸ್ತುಗಳ ಬಗ್ಗೆ , ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ತಮ್ಮ ಗೃಹ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಪ್ರವಾಹ ಪರಿಸ್ಥಿತಿಯನ್ನು ತಾಲೂಕು ಆಡಳಿತ ವತಿಯಿಂದ ಅತ್ಯಂತ ಜಾಗೃಕತೆಯಿಂದ ನಿರ್ವಹಿಸಲಾಗಿದೆ . ಈಗಾಗಲೇ ಸಂತ್ರಸ್ತರಿಗಾಗಿ ನಗರದಲ್ಲಿ 2 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 200 ಕುಟುಂಬಗಳು ಇದರಲ್ಲಿ ಆಶ್ರಯ ಪಡೆದುಕೊಂಡಿದ್ದು, ತಾಲೂಕು ಆಡಳಿತ ವತಿಯಿಂದ ಅವರಿಗೆ ಉತ್ತಮ ಗುಣಮಟ್ಟದ ಆಹಾರ, ಹೊದಿಕೆ , ದಿನಬಳಕೆಯ ವಸ್ತುಗಳನ್ನು ವಿತರಿಸಲಾಗಿದ್ದು, ಅವರ ಆರೋಗ್ಯ ತಪಾಸಣೆಗೆ ದಿನದ 24 ಘಂಟೆಗಳ ಕಾಲ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕಾಳಜಿ ಕೇಂದ್ರದಲ್ಲಿ ಯಾವುದೇ ತೊಂದರೆಯಾಗದಂತೆ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಲಾಗುತ್ತಿದೆ ಎಂದ ಅವರು ಬರುವ ಎರೆಡು ದಿನಗಳಲ್ಲಿ ಪ್ರವಾಹ ಸ್ವಲ್ಪ ಬತ್ತುವ ನಿರೀಕ್ಷೆಯಿದ್ದು, ಯಾರು ಕೂಡಾ ಭಯ ಪಡಬಾರದು ಎಂದು ಹೇಳಿದರು.
ನಗರದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಗೋಕಾಕ-ಶಿಂಗಳಾಪುರ ಹೊಸ ಸೇತುವೆಯನ್ನು ಪ್ರವಾಹದ ನೀರು ಆವರಿಸುತ್ತದೆ ಎಂದು ನಾವು ಊಹಿಸಿರಲಿಲ್ಲ , ದುರ್ದೈವವಶಾತ ಸೇತುವೆಯ ಪಕ್ಕದಲ್ಲಿ ಶಿಂಗಳಾಪುರ ಭಾಗದಲ್ಲಿ ನೀರು ನುಗ್ಗಿದೆ. ಅದನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಪ್ರವಾಹ ಕಡಿಮೆಯಾದ ಮೇಲೆ ತುರ್ತಾಗಿ ಅದನ್ನು ಇನ್ನಷ್ಟು ಎತ್ತಕ್ಕೆ ಏರಿಸಿ ನೀರು ನುಗ್ಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ನಿರಾಶ್ರಿತರಿಗೆ ಶಾಶ್ವತ ವಸತಿ ಕಲ್ಪಿಸಲು ಕ್ರಮ : ಪದೇ ಪದೇ ಮುಳುಗಡೆಯಾಗುತ್ತಿರುವ ಗೋಕಾಕ ಭಾಗದ ನಿರಾಶ್ರಿತರಿಗೆ ಶಾಶ್ವತವಾಗಿ ಪುನರ್ವಸತಿ ಕಲ್ಪಿಸಲು ಎತ್ತರದ ಪ್ರದೇಶದಲ್ಲಿ ಜಾಗೆಯನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈಗಾಗಲೇ ಹಲವರಿಗೆ ಪುನರ್ವಸತಿ ಕಲ್ಪಿಸಿದರು ಭಾಗಶಃ ಜನರು ತಮ್ಮ ಹಳೆ ಪೂರ್ವಜರ ಮನೆಗಳನ್ನು ಬಿಟ್ಟು ಬರಲು ಹಿಂದೆಟ್ಟು ಹಾಕುತ್ತಿದ್ದಾರೆ. ಅವರ ಮನವಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.


ಸಂದರ್ಭದಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ, ಡಿ.ವಾಯ್.ಎಸ್.ಪಿ ಡಿ.ಮುಲ್ಲಾ, ಜಿಲ್ಲಾ ಪರಿಶಷ್ಟ ವರ್ಗಗಳ ಕಲ್ಯಾಣಾಧಿಕಾರಿ ನೋಡಲ್ ಅಧಿಕಾರಿ ಬಸವರಾಜ ಕುರಿಹೂಲಿ, ನಗರಸಭೆ ಪೌರಾಯುಕ್ತ ರಮೇಶ ಜಾಧವ್, ಸಿಪಿಐ ಗೋಪಾಲ ರಾಠೋಡ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ , ಪಿ.ಎಸ್.ಐ ಕೆ.ವಾಲಿಕರ , ಡಾ.ಮೋಹನ ಕಮತ್ ಸೇರಿದಂತೆ ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು.

Related posts: