RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ವಾಲ್ಮೀಕಿ ಹಗರಣ : ನಿಷಪಕ್ಷಪಾತ ತನಿಖೆ ನಡೆಸುವಂತೆ ನಾನು ಮತ್ತು ಶಾಸಕ ಯತ್ನಾಳ ಬಳ್ಳಾರಿ ವರೆಗೆ ಪಾದಯಾತ್ರೆ: ಶಾಸಕ ರಮೇಶ

ಗೋಕಾಕ:ವಾಲ್ಮೀಕಿ ಹಗರಣ : ನಿಷಪಕ್ಷಪಾತ ತನಿಖೆ ನಡೆಸುವಂತೆ ನಾನು ಮತ್ತು ಶಾಸಕ ಯತ್ನಾಳ ಬಳ್ಳಾರಿ ವರೆಗೆ ಪಾದಯಾತ್ರೆ: ಶಾಸಕ ರಮೇಶ 

ವಾಲ್ಮೀಕಿ ಹಗರಣ : ನಿಷಪಕ್ಷಪಾತ ತನಿಖೆ ನಡೆಸುವಂತೆ ನಾನು ಮತ್ತು ಶಾಸಕ ಯತ್ನಾಳ ಬಳ್ಳಾರಿ ವರೆಗೆ ಪಾದಯಾತ್ರೆ: ಶಾಸಕ ರಮೇಶ

ಗೋಕಾಕ ಜು 28 : ವಾಲ್ಮೀಕಿ ಹಗರಣ ರಾಜ್ಯದ ಅತ್ಯಂತ ದೊಡ್ಡ ಹಗರಣವಾಗಿದ್ದು, ಅದನ್ನು ನಿಷಪಕ್ಷಪಾತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ನಾನು ಮತ್ತು ವಿಜಯಪುರ ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರು ಕುಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದೇವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ರವಿವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಒಂದಿಲ್ಲೊಂದು ಹಗರಣಗಳು ಸಂಭವಿಸುತ್ತಲೇ ಇವೆ. ಅದರಲ್ಲಿ ಅತ್ಯಂತ ದೊಡ್ಡ ಹಗರಣ ವಾಲ್ಮೀಕಿ ಹಗರಣವಾಗಿದ್ದು, ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ,ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ದೊಡ್ಡ ಮಟ್ಟದಲ್ಲಿ ಹಗರಣ ನಡೆಸಲಾಗಿದ್ದು, ಇದನ್ನು ಪ್ರತಿಭಟಸಿ ನಾನು ಮತ್ತು ಶಾಸಕ ಬಸವರಾಜ ಯತ್ನಾಳ ಅವರು ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದ್ದು, ಆದಷ್ಟು ಬೇಗ ಹೈಕಮಾಂಡ್ ಅನುಮತಿ ಪಡೆದು ದಿನಾಂಕ ಪ್ರಕಟಿಸಲಾಗುವುದು ಎಂದ ಅವರು ಮುಡಾ ಹಗರಣವು ಸಹ ದೊಡ್ಡ ಹಗರಣವೇ ಪಕ್ಷದ ತಿರ್ಮಾಣಕ್ಕೆ ನಾನು ಬದ್ದವಾಗಿದ್ದೇನೆ ಎಂದು ಹೇಳಿದರು.

ಮಹಾನಾಯಕ ಇನ್ಮುಂದೆ ಸಿ.ಡಿ.ಶಿವು : ಪದೇಪದೇ ಮಹಾನಾಯಕ ಎಂದು ಸಂಭೋಧಿಸಿದರೆ ಮಹಾ ನಾಯಕರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಭಾವಿಸಿ ನಾನು ಮತ್ತು ಎಚ್.ಡಿ.ಕುಮಾರಸ್ವಾಮಿ ಮಹಾನಾಯಕನಿಗೆ ಮರು ನಾಮಕರಣ ಮಾಡಿದ್ದು, ಇನ್ಮುಂದೆ ಅವನು ಮಾಹಾನಾಯಕ ಅಲ್ಲ ಬದಲಾಗಿ ಅವನು ಸಿ.ಡಿ.ಶಿವು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ರಮೇಶ ಜಾರಕಿಹೊಳಿ ಟಾಂಗ್ ನೀಡಿದರು.

ರಾಜ್ಯಾಧ್ಯಕ್ಷ ಸ್ಥಾನವನ್ನು ನಾವು ಇನ್ನು ಒಪ್ಪಿಲ್ಲ : ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನಾವು ಇನ್ನು ಒಪ್ಪಿಲ್ಲ ನಮಗೆನಿದ್ದರೂ ಹೈಕಮಾಂಡ್ , ಹೈಕಮಾಂಡ್ ಅಪ್ಪಣೆ ಮೇರೆಗೆ ನಾನು ಕಾರ್ಯನಿರ್ವಹಿಸುತ್ತೇನೆ ವಿನಹ ರಾಜ್ಯನಾಯಕರ ಅಪ್ಪಣೆ ಮೇರೆಗೆ ಅಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಪರೋಕ್ಷವಾಗಿ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.

Related posts: