ಗೋಕಾಕ:ಕನ್ನಡ ನಾಡು ಕಾವೇರಿಯಿಂದ ಹಿಡಿದು ಗೋದಾವರಿ ವರೆಗೆ ಹಬ್ಬಿತ್ತು, ಇದಕ್ಕೆ ಮಹಾರಾಷ್ಟ್ರದಲ್ಲಿ ಸಿಕ್ಕ ಅರ್ಧದಷ್ಟು ಕನ್ನಡ ಶಾಸನಗಳೆ ಸಾಕ್ಷಿ : ಡಾ.ಗುರುಪಾದ ಮರಿಗುದ್ದಿ
ಕನ್ನಡ ನಾಡು ಕಾವೇರಿಯಿಂದ ಹಿಡಿದು ಗೋದಾವರಿ ವರೆಗೆ ಹಬ್ಬಿತ್ತು, ಇದಕ್ಕೆ ಮಹಾರಾಷ್ಟ್ರದಲ್ಲಿ ಸಿಕ್ಕ ಅರ್ಧದಷ್ಟು ಕನ್ನಡ ಶಾಸನಗಳೆ ಸಾಕ್ಷಿ : ಡಾ.ಗುರುಪಾದ ಮರಿಗುದ್ದಿ
ಗೋಕಾಕ ಜು 28 : ಕನ್ನಡ ನಾಡು ಕಾವೇರಿಯಿಂದ ಹಿಡಿದು ಗೋದಾವರಿ ವರೆಗೆ ಹಬ್ಬಿತ್ತು, ಇದಕ್ಕೆ ಮಹಾರಾಷ್ಟ್ರದಲ್ಲಿ ಸಿಕ್ಕ ಅರ್ಧದಷ್ಟು ಶಾಸನಗಳು ಕನ್ನಡದಲ್ಲಿ ದೊರೆತ್ತಿರುವುದು ಸಾಕ್ಷಿ ಎಂದು ಡಾ.ಗುರುಪಾದ ಮರಿಗುದ್ದಿ ಹೇಳಿದರು.
ರವಿವಾರದಂದು ಅಂಕಲಗಿ ಪಟ್ಟಣದಲ್ಲಿ ಸಪ್ತಪದಿ ಕಲ್ಯಾಣ ಮಂಟಪದ ಬಸವರಾಜ ಕಟ್ಟಿಮನಿ ಪ್ರಧಾನ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋಕಾಕ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ ಗೋಕಾಕ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಉಳಿಯಬೇಕೆಂದರೆ ಕನ್ನಡ ಶಾಲೆಗಳನ್ನು ನಾವು ಉಳಿಸಿ, ಬೆಳಸಬೇಕು, ಈಗಾಗಲೇ ಸರಕಾರ, ಸಾಹಿತ್ಯ ಪರಿಷತ್ ಸೇರಿದಂತೆ ಇತರ ಸಂಘಟನೆಗಳು ಕನ್ನಡವನ್ನು ಉಳಿಸಿ, ಬೆಳೆಸುವಲ್ಲಿ ಮಹತ್ವದ ಪಾತ್ರವಿಹಿಸಿವೆ.
ಕುಂದರನಾಡಿನ ಕಂದ ಬಸವರಾಜ ಕಟ್ಟಿಮನಿ ಅವರು ಹುಟ್ಟಿ ಬೆಳೆದ ನಾಡಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರುವುದು ಅತ್ಯಂತ ಸಂತೋಷದ ಸಂಗತಿಯೋಗಿದ್ದು, ಅವರ ಸಾಹಿತ್ಯ ದಿಂದ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಿದೆ ಎಂದರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಘಟಪ್ರಭಾ ಗುಬ್ಬಲಗುಡ್ಡದ ಕೆಂಪಯ್ಯ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಬಸವಾದಿ ಶಿವ ಶರಣರು ಬರೆದ ವಚನಗಳ ಮೂಲಕ ಕನ್ನಡ ಭಾಷೆ ಉಳಿದಿದೆ, ಸಂಸ್ಕಾರ ನೀಡುವ ಭಾಷೆ ಕನ್ನಡ. ಕನ್ನಡ ಭಾಷೆ ಗೋಷ್ಠಿಗಳಿಗೆ ಮಾತ್ರ ಸೀಮಿತವಾಗಿಡದೆ. ಮಕ್ಕಳನ್ನು ಕನ್ನಡ ಭಾಷೆಯನ್ನು ಕಲಿಸಬೇಕು. ಕನ್ನಡ ಭಾಷೆಯಲ್ಲಿ ಇರುವ ಪುಸ್ತಕಗಳನ್ನು ಅನ್ಯ ಭಾಷೆಯಲ್ಲಿ ಅನುವಾದ ಕನ್ನಡದ ಸಾಹಿತ್ಯ ಪರಿಷತ್ ಆದಿಯಾಗಿ ಬೇರೆ ಸಂಘಟನೆಗಳು ಮಾಡಬೇಕು. ಕನ್ನಡ ಭಾಷೆಗೆ ಬಹಳಷ್ಟು ಶಕ್ತಿ ಇದೆ ಕನ್ನಡ ಭಾಷೆಯನ್ನು ಉಳಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದ ಅವರು ಈ ಸಮ್ಮೇಳನ ರಾಜ್ಯ ಮಟ್ಟದ ಸಮ್ಮೇಳನದಂತೆ ಸುವರ್ಣಾರಕ್ಷದಲ್ಲಿ ಬರೆದಿಡುವಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಮ್ಮೇಳನದಲ್ಲಿ ಗೋಕಾಕ ತಾಲೂಕಿನಲ್ಲಿ ಕನ್ನಡ ಸಂಸ್ಕೃತಿ ಭವನ ನಿರ್ಮಾಣ, ಶತಮಾನ ಕಂಡ ಕನ್ನಡದ ಶಾಲೆಗಳನ್ನು ಅಭಿವೃದ್ಧಿ ಗೋಳಿಸುವುದು, ಕೇಂದ್ರ ಸರಕಾದ ನೀಟ್, ಮತ್ತು ಜೆಡ್ಬ್ಯೂ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅನುಮತಿ ನೀಡಬೇಕು ಎಂಬ ಮೂರು ನಿರ್ಣಯಗಳನ್ನು ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಶಿವಲಿಂಗಪ್ಪಾ ಭಾವಿಕಟ್ಟಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಭೀಮಗೌಡ ಪೋಲಿಸ್ ಗೌಡರ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಭಾರತಿ ಮದಬಾವಿ, ಸಿ.ಎಸ್,ನಾಯಿಕ, ವಿಶ್ವನಾಥ್ ಕಡಕೋಳ, ಶಾಮಾನಂದ ಪೂಜಾರಿ, ಮಹಾಂತೇಶ ತಾವಂಶಿ, ಶ್ರೀಮತಿ ಹೇಮಾ ಅಲ್ಲನ್ನವರ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಭರಮಪ್ಪ ತೋಳಿ, ಬಾಳಗೌಡ ಪಾಟೀಲ, ಬಸವರಾಜ ಕೊಳವಿ, ಲಕ್ಕಣ್ಣಾ ಪೂಜಾರಿ ಉಪಸ್ಥಿತರಿದ್ದರು.