RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಪ್ರವಾಹ ಇಳಿಮುಖ : ಚಿಕ್ಕೋಳಿ ಸೇತುವೆ ಬೆಳ್ಳಿಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತ

ಗೋಕಾಕ:ಪ್ರವಾಹ ಇಳಿಮುಖ : ಚಿಕ್ಕೋಳಿ ಸೇತುವೆ ಬೆಳ್ಳಿಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತ 

ಪ್ರವಾಹ ಇಳಿಮುಖ : ಚಿಕ್ಕೋಳಿ ಸೇತುವೆ ಬೆಳ್ಳಿಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತ


ಗೋಕಾಕ ಜು 29 : ಕಳೆದ ಎರೆಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಗೋಕಾಕ ನಗರಕ್ಕೆ ಎದುರಾಗಿದ್ದ ಪ್ರವಾಹ ಸ್ವಲ್ಪ ಕಡಿಮೆಯಾಗಿದ್ದು, ಮುಳುಗಡೆಯಾಗಿದ್ದ ನಗರದ ಚಿಕ್ಕೋಳಿ ಸೇತುವೆ ಸೋಮವಾರ ಬೆಳ್ಳಿಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತವಾಗಿದೆ

ಘಟಪ್ರಭಾ ನದಿ ಅಪಾಯಮಟ್ಟ ಮಿರಿ ಹರಿದ ಪರಿಣಾಮ ನಗರದ ಹಳೆ ದನಗಳ ಪೇಠೆ ,ಉಪ್ಪಾರ ಓಣಿ, ಡೋರ ಗಲ್ಲಿ, ದಾಳಂಬ್ರಿ ತೋಟ, ಕುಂಬಾರ ಓಣಿ, ಸೇರಿದಂತೆ ಇತರ ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ನುಗ್ಗಿದ ನೀರಿನ ಪ್ರಮಾಣ ಸೋಮವಾರದಂದು ಸ್ವಲ್ಪ ಕಡಿಮೆಯಾಗಿದ್ದು, ಗೋಕಾಕ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ.

200 ಕ್ಕೂ ಹೆಚ್ಚು ಕುಟುಂಬಗಳು ಇನ್ನು ಕಾಳಜಿ ಕೆಂದ್ರಗಳಲ್ಲಿಯೆ ಆಶ್ರಯ ಪಡೆದಿದ್ದು, ನೀರು ಸಂಪೂರ್ಣ ಕಡಿಮೆಯಾಗುವವರೆಗೆ ಯಾರು ಮನೆಗಳಿಗೆ ಹೋಗಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ತಹಶೀಲ್ದಾರ್ ಡಾ.ಮೋಹನ ಭಸ್ಮೆ ಪ್ರವಾಹ ಪೀಡಿತ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಕಾಳಜಿ ಕೇಂದ್ರದಲ್ಲಿ ತಾಲೂಕು ಆಡಳಿತ ವತಿಯಿಂದ ಜನರಿಗೆ ಮೂಲಭೂತ ಸೌಕರ್ಯಗಳೊಂದಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಅವರ ಆರೈಕೆ ಇಂದು ಮುಂದುವರೆದಿದೆ.

ಅತ್ಯಂತ ಹಳೆ ಕಾಲದಲ್ಲಿ ನಿರ್ಮಿಸಿದ ಚಿಕ್ಕೋಳಿ ಸೇತುವೆ ಮೇಲೆ ನೀರು ನಿಂತ ಪರಿಣಾಮ ಸೇತುವೆ ದಡದ ಭಾಗದಲ್ಲಿ ಸಣ್ಣ ಪ್ರಮಾಣದ ಹಾನಿ ಸಂಭವಿಸಿದ್ದು, ಸೋಮವಾರ ಬೆಳಿಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಚಿಕ್ಕೋಳಿ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಸೇತುವೆ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಚಿಕ್ಕೋಳಿ ಸೇತುವೆಯ ದುರುಸ್ಥಿಗೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲೇ ಚಿಕ್ಕೋಳಿ ಸೇತುವೆಯ ಕಾಮಗಾರಿ ಪ್ರಾರಂಭವಾಗಲಿದೆ.

ಇನ್ನೂ ಸಂಚಾರಕ್ಕೆ ಮುಕ್ತವಾಗದ ಲೋಳಸೂರ ಸೇತುವೆ : ಕಳೆದ ಎರೆಡು ದಿನಗಳಿಂದ ಮಳೆ ಪ್ರಮಾಣ ಕಡಮೆಯಾಗಿದ್ದರು ಸಹ ಲೋಳಸೂರ ಸೇತುವೆ ಮೇಲಿನ ನೀರು ಕಡಿಮೆಯಾಗಿಲ್ಲ. ಸೇತುವೆ ಮೇಲೆ ಯಾರು ತೆರಳದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ. ಮಳೆ ಪ್ರಮಾಣ ಹೀಗೆ ಕಡಿಮೆಯಾದರೆ ಇನ್ನು ಎರೆಡು ದಿನಗಳವರೆಗೆ ಲೋಳಸೂರ ಸೇತುವೆ ಮೇಲಿನ ನೀರು ಕಡಿಮೆಯಾಗುವ ನಿರೀಕ್ಷೆ ಇದೆ.

Related posts: