ಗೋಕಾಕ:ನೀರು ಇಳಿಮುಖ : ನಗರದ ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ: ಚಿಕ್ಕೋಳಿ ಮತ್ತು ಲೋಳಸೂರ ಸೇತುವೆ ಯಥಾಸ್ಥಿತ
ನೀರು ಇಳಿಮುಖ : ನಗರದ ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ: ಚಿಕ್ಕೋಳಿ ಮತ್ತು ಲೋಳಸೂರ ಸೇತುವೆ ಯಥಾಸ್ಥಿತ
ಗೋಕಾಕ ಜು 30 : ಘಟಪ್ರಭಾ ನದಿಗೆ ಹೋರಹರಿವು ಕಡಿಮೆಯಾಗಿರುವ ಪರಿಣಾಮ ನಗರಕ್ಕೆ ಆವರಿಸಿದೆ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಪ್ಥವಾಹ ಪೀಡಿತ ಪ್ರದೇಶಗಳ ಜನರು ಇನ್ನು ನಗರದ ಕಾಳಜಿ ಕೇಂದ್ರಗಳಲ್ಲಿಯೇ ಆಶ್ರಯ ಪಡೆದಿದ್ದಾರೆ.
ಮಂಗಳವಾರದಂದು ನಗರದಲ್ಲಿ ನುಗ್ಗಿದ ನೀರು ಇಳಿಮುಖವಾಗಿರುವ ಕಾರಣ ಇಲ್ಲಿನ ಮಟನ್ ಮಾರ್ಕೆಟ್, ಮೀನು ಮೀನು ಮಾರುಕಟ್ಟೆ ಮತ್ತು ಬೋಜಗರ ಗಲ್ಲಿಗಳಲ್ಲಿ ನುಗ್ಗಿದ ನೀರು ಭಾಗಶಃ ಕಡಿಮೆಯಾಗಿರುವ ಕಾರಣ ಆ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಅಂಗಡಿ,ಮನೆಗಳು ಸ್ವಚ್ಛತೆ ಮಾಡುವ ದೃಶ್ಯಗಳು ಕಂಡುಬಂದವು.
ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ : ನಗರದ ಮೀನು ಮಾರುಕಟ್ಟೆಯಲ್ಲಿ ಇಂದು ಭರ್ಜರಿ ವ್ಯಾಪಾರ ನಡೆಯಿತು. ಹಿಡಕಲ್ ಜಲಾಶಯದಿಂದ ನೀರು ಹರಿಬಿಟ್ಟಿರುವ ಪರಿಣಾಮ ಘಟಪ್ರಭಾ ನದಿಯ ಹರಿದು ಬಂದ ಮೀನುಗಳನ್ನು ಮೀನುಗಾರರು ಹಿಡಕಲ್ ಜಲಾಯಶ ಹತ್ತಿರ ತೆರಳಿ ಬಗ್ಗೆ ಬಗೆಯ ಮೀನುಗಳನ್ನು ತಮ್ಮ ಬಲೆಗೆ ಕೆಡವಿ ತಂದು ನಗರದಲ್ಲಿ ಭರ್ಜರಿ ವ್ಯಾಪಾರ ನಡೆಸಿದರು. ಕಳೆದ ಮೂರ್ನಾಲ್ಕು ದಿನಗಳಿಂದ ಮೀನು ಮಾರುಕಟ್ಟೆ ದಾಟಿ ನೀರು ನುಗ್ಗಿದ್ದ ಪರಿಣಾಮ ಮೀನು ವ್ಯಾಪಾರ ಸ್ಥಗಿತಗೊಳಿಸಲಾಗಿತ್ತು, ಸೋಮವಾರದಿಂದ ನೀರು ಇಳಿಮುಖವಾಗಿದ್ದರಿಂದ ಮೀನು ಮಾರುಕಟ್ಟೆಗೆ ತೆರಳಿದ ಮೀನುಗಾರರು ಇಂದು ವ್ಯಾಪಾರ ವಹಿವಾಟು ನಡೆಸಿದರು. ನೀರು ಇಳಿಮುಖವಾಗಿದನ್ನು ನೋಡಲು ಬರುತ್ತಿರುವ ಜನರು ಮೀನು ಮಾರುಕಟ್ಟೆಗೆ ತಂದ ಮೀನುಗಳನ್ನು ಖರೀದಿಸಿ ಸಂತಸ ಪಟ್ಟರು.
ಇನ್ನು ನಗರದ ಚಿಕ್ಕೋಳಿ ಮತ್ತು ಲೋಳಸೂರ ಸೇತುವೆಗಳು ಯಥಾಸ್ಥಿತಿಯಾಗಿದ್ದು, ಚಿಕ್ಕೋಳಿ ಸೇತುವೆಯ ಮೇಲೆ ದ್ವಿಚಕ್ರ ವಾಹನಗಳು ಮಾತ್ರ ಸಂಚಾರ ಮಾಡುತ್ತಿದ್ದು, ಲೋಳಸೂರ ಸೇತುವೆ ಇನ್ನು ಸಂಚಾರಕ್ಕೆ ಮುಕ್ತವಾಗಿಲ್ಲ.