RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ :ಖ್ಯಾತ ಗಾಯಕ ದಿವಂಗತ ಮಹ್ಮದ್ ರಫಿ ಅವರು ಇಂದಿಗೂ ಕೋಟ್ಯಾಂತರ ಜನರ ಮನದಲ್ಲಿ ಅಜರಾಮರರಾಗಿದ್ದಾರೆ : ಎಸ್.ಎಂ ಪೀರಜಾದೆ

ಗೋಕಾಕ :ಖ್ಯಾತ ಗಾಯಕ ದಿವಂಗತ ಮಹ್ಮದ್ ರಫಿ ಅವರು ಇಂದಿಗೂ ಕೋಟ್ಯಾಂತರ ಜನರ ಮನದಲ್ಲಿ ಅಜರಾಮರರಾಗಿದ್ದಾರೆ : ಎಸ್.ಎಂ ಪೀರಜಾದೆ 

ಖ್ಯಾತ ಗಾಯಕ ದಿವಂಗತ ಮಹ್ಮದ್ ರಫಿ ಅವರು ಇಂದಿಗೂ ಕೋಟ್ಯಾಂತರ ಜನರ ಮನದಲ್ಲಿ ಅಜರಾಮರರಾಗಿದ್ದಾರೆ : ಎಸ್.ಎಂ ಪೀರಜಾದೆ

ಗೋಕಾಕ ಅ 1 : ಇಂಪಾದ ಗಾಯನದ ಮೂಲಕ ವಿಶ್ವದ ಜನರ ಮನ ತಣಿಸಿದ ಖ್ಯಾತ ಗಾಯಕ ದಿವಂಗತ ಮಹ್ಮದ್ ರಫಿ ಅವರು ಇಂದಿಗೂ ಕೋಟ್ಯಾಂತರ ಜನರ ಮನದಲ್ಲಿ ಅಜರಾಮರರಾಗಿದ್ದಾರೆ. ಅವರು ನಮ್ಮ ಆಸ್ತಿ ಎಂದು ಅಬ್ದುಲ್ ಕಲಾಂ ಕಾಲೇಜಿನ ಉಪನ್ಯಾಸಕ ಎಸ್.ಎಂ ಪೀರಜಾದೆ ಹೇಳಿದರು.

ಬುಧವಾರದಂದು ನಗರದಲ್ಲಿ ಇಲ್ಲಿನ ಗುಂಪು ಕಲಾವಿದರ ಬಳಗ ಹಮ್ಮಿಕೊಂಡ ಮೊಹಮ್ಮದ್ ರಫೀ ಅವರ 44ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ರಫೀ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶಕಂಡ ಅಪ್ರತಿಮ ಗಾಯಕರಲ್ಲಿ ಒಬ್ಬರಾದ ದಿ.ಮಹ್ಮದ್ ರಫಿ ಅವರು ಮಾಧುರ್ಯ ಭರಿತ ಹಾಡುಗಳಿಂದ ಇಂದಿಗೂ ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಈ ಮೂಲಕ ನಮ್ಮ ದೇಶ ಕಂಡ ಮಹಾನ್ ಗಾಯಕ ಇವರಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ನಗರದ ಖ್ಯಾತ ಕಲಾವಿದ ಜಿ.ಕೆ ಕಾಡೇಶಕುಮಾರ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತ್ತು.

ಈ ಸಂದರ್ಭದಲ್ಲಿ ರಜನಿ ಜಿರಗ್ಯಾಳ, ಡಾ.ಅಶೋಕ ಜಿರಗ್ಯಾಳ, ಗಿರೀಶ್ ಝಂವರ, ಬಸವರಾಜ ಮಠಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: