RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಸದ ಶೆಟ್ಟರ್ ಭೇಟಿ

ಗೋಕಾಕ:ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಸದ ಶೆಟ್ಟರ್ ಭೇಟಿ 

ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಸದ ಶೆಟ್ಟರ್ ಭೇಟಿ

ಗೋಕಾಕ ಅ 3 : ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಶನಿವಾರದಂದು ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಬೇಟಿನೀಡಿ ಪರಿಶೀಲನೆ ನಡೆಸಿ, ಕಾಳಜಿ ಕೇಂದ್ರಕ್ಕೆ ಭೇಟಿನೀಡಿ ಸ್ವಾಂತಾನ ಹೇಳಿದರು.

ನಗರದ ಲೋಳಸೂರ, ಸೇತುವೆ, ಶಿಂಳಾಪೂರ ಸೇತುವೆ, ಚಿಕ್ಕೋಳಿ ಸೇತುವೆಗೆ ಭೇಟಿ ನೀಡಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಘಟಪ್ರಭಾ ನದಿಗೆ ಬಂದ ಪ್ರವಾಹದಿಂದ ನಗರದಲ್ಲಿ ನೀರು ನುಗ್ಗಿ ಸ್ವಲ್ಪ ಮಟ್ಟಿಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹ ಪೀಡಿತ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ತಾಲೂಕು ಆಡಳಿತದಿಂದ ಮುತುವರ್ಜಿ ವಹಿಸಿ ಕಾರ್ಯಮಾಡಲಾಗುತ್ತಿದೆ.
ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮತ್ತೆ ನೀರು ಬರದಂತೆ ಶಾಶ್ವತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅವರೊಂದಿದೆ ಚರ್ಚಿಸಲಾಗಿದ್ದು, ಆದಷ್ಟು ಬೇಗ ಅದನ್ನು ಅನುಷ್ಠಾನ ಗೋಳಿಸಲಾಗುವುದು. ಈಗಾಗಲೇ ಹಲವು ಸರಕಾರಗಳು ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸಿದರು ಸಹ ಯಾರು ಅಲ್ಲಿ ಶಾಶ್ವತವಾಗಿ ವಾಸಲಾಗಿಲ್ಲ ಬದಲಾಗಿ ಪ್ರವಾಹ ಬತ್ತಿದ ಕೂಡಲೇ ಮತ್ತೆ ಅದೇ ಜಾಗದಲ್ಲಿ ವಾಸಿಸುವದರಿಂದ ಶಾಶ್ವತ ಪುನರ್ವಸತಿ ಕಷ್ಟ ಸಾಧ್ಯ ಅದರ ಬದಲಾಗಿ ಆ ಪ್ರದೇಶದಲ್ಲಿ ನೀರು ನುಗ್ಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ಲೋಳಸೂರ ಮತ್ತು ಚಿಕ್ಕೋಳಿ ಸೇತುವೆಗಳು ಮುಳುಗಡೆಯಾಗದಂತೆ ಎತ್ತರಕ್ಕೆ ಏರಿಸಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ನೇರ ಆರೋಪಿಗಳು : ಮುಡಾ ಜಾಗೆ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಅವರ ನೇರ ಆರೋಪಿಗಳು ಮುಖ್ಯಮಂತ್ರಿ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಒತ್ತಾಯಿಸಿದರು. ಮುಡಾ ಹಗರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಪಕ್ಷದವರು ಸಮಾವೇಶಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕ್ರಮವನ್ನು ಟೀಕಿಸಿದರು. ವಾಲ್ಮೀಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಮೇಶ್ ಹಾಗೂ ಶಾಸಕ ಯತ್ನಾಳ ಅವರು ಪ್ರತ್ಯೇಕ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್ ಇಬ್ಬರು ಶಾಸಕರುಗಳು ಹೈಕಮಾಂಡ್ ಒಪ್ಪಿಗೆ ಕೇಳಿದ್ದಾರೆ. ಅವರು ಒಪ್ಪಿಗೆ ಕೊಟ್ಟ ಮೇಲೆ ಮುಂದಿನ ನಡೆ ಎಂದರು. ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪಿಕೊಂಡಿಲ್ಲ ಎಂದ ಕೇಳಿದ ಪ್ರಶ್ನೆಗೆ ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಜಾರಿಕೊಂಡರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಮೋಹನ ಭಸ್ಮೆ, ಡಿ.ವಾಯ.ಎಸ್.ಪಿ ಡಿ.ಎಚ್.ಮುಲ್ಲಾ, ಸಿಪಿಐ ಗೋಪಾಲ ರಾಠೋಡ, ಇಇಓ ಉದಯಕುಮಾರ್ ಕಾಂಬ್ಳೆ, ಪೌರಾಯುಕ್ತ ರಮೇಶ ಜಾಧವ್, ಎಸ್.ಪಿ.ವರಾಳೆ, ಮುಖಂಡರುಗಳಾದ ಭೀಮಗೌಡ ಪೊಲೀಸ್ ಗೌಡರ, ಸುರೇಶ ಸನದಿ, ರಾಜೇಂದ್ರ ಗೌಡಪ್ಪಗೋಳ, ಎಸ್.ವ್ಹಿ.ದೇಮಶೆಟ್ಟಿ, ಮಹಾಂತೇಶ ತಾವಂಶಿ, ಅಬ್ಬಾಸ್ ದೇಸಾಯಿ, ಜಯಾನಂದ ಹುಣ್ಣಚ್ಯಾಳಿ, ಬಸವರಾಜ ಆರೆನ್ನವರ ಸೇರಿದಂತೆ ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು

Related posts: