ಗೋಕಾಕ:ನಮ್ಮ ದೇಶಕ್ಕೆ ಶಿಕ್ಷಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿಲ : ಎಂ.ಡಿ.ಚುನಮರಿ
ನಮ್ಮ ದೇಶಕ್ಕೆ ಶಿಕ್ಷಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿಲ : ಎಂ.ಡಿ.ಚುನಮರಿ
ಗೋಕಾಕ ಅ 4 : ನಮ್ಮ ದೇಶಕ್ಕೆ ಶಿಕ್ಷಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿಲ, ಸ್ವತಂತ್ರಕ್ಕೂ ಪೂರ್ವದಲ್ಲಿ ನಳಂದ ಸೇರಿದಂತೆ 18 ವಿಶ್ವ ವಿದ್ಯಾಲಯಗಳು ಕಾರ್ಯನಿರ್ವಹಿಸಿದ್ದವು ಎಂದು ಸ್ಥಳೀಯ ಕೆಎಲ್ಇ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಡಿ.ಚುನಮರಿ ಹೇಳಿದರು
ರವಿವಾರದಂದು ನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಗೋಕಾಕ ಹಾಗೂ ಸಿ.ಎಸ್.ಅಂಗಡಿ ಪ್ರೌಢಶಾಲೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ “ಶಿಕ್ಷಕರ ಸಹಮಿಲನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಿ.ಶ 425ರಿಂದ 1197ರ ವರೆಗೆ ನಳಂದ ವಿಶ್ವ ವಿದ್ಯಾಲಯವು ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದು, 90 ಲಕ್ಷ ಪುಸ್ತಕಗಳ ಗ್ರಂಥಾಲಯವನ್ನು ಹೊಂದಿದ್ದು, ದೇಶ ವಿದೇಶಗಳಲ್ಲಿ ಪ್ರಖ್ಯಾತವಾಗಿದೆ. ನಮ್ಮ ದೇಶ ಯೋಗ, ಬಾಹ್ಯಾಕಾಶ, ವಿಜ್ಞಾನ, ಶಿಕ್ಷಣ ಕ್ಷೇತ್ರಗಳಲ್ಲಿ ಹಲವಾರು ಕೊಡುಗೆಗಳನ್ನು ನೀಡಿದೆ.ವಿಶ್ವ ಗುರುವಾಗುವ ಗುರಿಯೊಂದಿಗೆ ಎಲ್ಲಾ ಕ್ಷೇತ್ರಗಳು ಸನ್ನದ್ಧವಾಗುತ್ತಿದ್ದು, ಈ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೊಣ ಎಂದರು.
ಭಾಷಾ ಕೌಶಲ್ಯ ಕುರಿತು ಮಾತನಾಡಿದ ಬೆಂಗಳೂರಿನ ನ್ಯಾಶನಲ್ ಹೈಸ್ಕೂಲ್ ನ ಪ್ರಾಶಂಪಾಲ್ ವಿ.ರಾಜಾ ಗುರುಗಳು ಮಕ್ಕಳಿಗೆ ಪ್ರೋತ್ಸಾಹಿಸಿ ಅವರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಬೇಕು.ಶಿಕ್ಷಕರು ಮಕ್ಕಳಲ್ಲಿ ಆಶಾ ಭಾವನೆ ಮೂಡಿಸುವ ನಿಟ್ಟಿನಲ್ಲಿ ಪಾಠವನ್ನು ಭೋಧಿಸಬೇಕು
ಶಿಕ್ಷಣದ ಜೊತೆಗೆ ಮಗುವಿನಲ್ಲಿ ನಾಯಕತ್ವ ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಅಂದಾಗ ಮಾತ್ರ ಮಕ್ಕಳು ಮುಂದೆ ಉತ್ತಮ ನಾಯಕರಾಗಲು ಸಾಧ್ಯ.ಕನ್ನಡ ಒಂದು ಭಾಷೆಯಷ್ಟೇ ಅಲ್ಲ ನಮ್ಮನ್ನು ಅಪ್ಪಿ ಮುದ್ದಿಸುವ ತಾಯಿ ಇದ್ದಂತೆ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು . ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ರೀತಿಯಲ್ಲಿ ಪಾಠ ಮಾಡಬೇಕು ಇದು ಶಿಕ್ಷಕರ ಆದ್ಯ ಕರ್ತವ್ಯ ಕೂಡ. ಆಗಬೇಕು.
ಪ್ರಸ್ತುತ ದಿನಗಳಲ್ಲಿ ಗೂಗಲ್ ಗುರು ಬಂದಿದೆ ಇದನ್ನು ಅರಿತು ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.ಮಕ್ಕಳಲ್ಲಿ
ಭಾಷಾ ಕೌಶಲ್ಯವನ್ನು ಬೆಳೆಸಬೇಕು ಅಂದಾಗ ಮಕ್ಕಳಲ್ಲಿ ಕನ್ನಡ ಭಾಷೆ ಬಗ್ಗೆ ಅಭಿಮಾನ ಬರಲು ಸಾಧ್ಯ ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು.
ಮಕ್ಕಳಲ್ಲಿ ಹೊಸ,ಹೊಸ ತಂತ್ರಗಳಿಂದ ಕಲಿಸುವ ಮೂಲಕ ಮಗವಿನಲ್ಲಿ ಆತ್ಮ ವಿಶ್ವಾಸವನ್ನು ತುಂಬಬೇಕು
ಮಕ್ಕಳಿಗೆ ಶಿಕ್ಷಕರ ಮಾತು ವೇಧವಾಕ್ಯವಾಗಿರುತ್ತದೆ ಅದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಮಕ್ಕಳಿಗೆ ಪಾಠ ಕಲಿಸಬೇಕು.
ಒಬ್ಬ ಶಿಕ್ಷಕ ಬದಲಾದರೆ ವಿದ್ಯಾರ್ಥಿಗಳ ಭವಿಷ್ಯವೇ ಬದಲಾಗುತ್ತದೆ. ಎಲ್ಲಾ ಮಕ್ಕಳಿಗೆ ಒಂದೇ ತರ ಪಾಠ ಹೇಳದೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಕರು ಪಾಠ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಇಒ ಜಿ.ಬಿ.ಬಳಗಾರ ವಹಿಸಿದ್ದರು.
ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ವಿಭಾಗ ಸಂಯೋಜಕ ಶ್ರೀನಿವಾಸ ಪಾಟೀಲ, ಸಂಪನ್ಮೂಲ ವ್ಯಕ್ತಿ ಕಿರಣರಾಮ್ ಇದ್ದರು.
ಮುಖ್ಯೋಪಾಧ್ಯಾಯ ಜಿ.ಎಂ.ಬಿರಾದಾರ ಸ್ವಾಗತಿಸಿದರು, ಶಿಕ್ಷಕಿ ಎಂ. ಎಂ.ಮಿರ್ಜಿ ನಿರೂಪಿಸಿದರು, ಎಂ.ಜೆ.ಕಾಮಗೌಡರ ವಂದಿಸಿದರು.