RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ : ಮುಳುಗಡೆಯಾಗುವ ಜಿಲ್ಲೆಯ ಎಲ್ಲಾ ಸೇತುವೆಗಳು ಎತ್ತರಕ್ಕೆರಿಸಲು ಕ್ರಮ : ಸಿದ್ದರಾಮಯ್ಯ.

ಗೋಕಾಕ:ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ : ಮುಳುಗಡೆಯಾಗುವ ಜಿಲ್ಲೆಯ ಎಲ್ಲಾ ಸೇತುವೆಗಳು ಎತ್ತರಕ್ಕೆರಿಸಲು ಕ್ರಮ : ಸಿದ್ದರಾಮಯ್ಯ. 

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ : ಮುಳುಗಡೆಯಾಗುವ ಜಿಲ್ಲೆಯ ಎಲ್ಲಾ ಸೇತುವೆಗಳು ಎತ್ತರಕ್ಕೆರಿಸಲು ಕ್ರಮ : ಸಿದ್ದರಾಮಯ್ಯ


ಗೋಕಾಕ ಅ 5 : ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿನೀಡಿ ಪರಿಶೀಲನೆ ನಡೆಸಿ ಪ್ರವಾಹ ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಪ್ರವಾಹದಿಂದ ಹಾನಿಗೊಳಗಾದ ಲೋಳಸೂರ ಸೇತುವೆ, ಹಳೆದನಗಳ ಪೇಠೆ, ಗೋಕಾಕ ಫಾಲ್ಸ್ , ಕಾಳಜಿ ಕೇಂದ್ರಕ್ಕೆ ಬೇಟಿನೀಡಿದ ಅವರು ಪ್ರವಾಹೋತ್ತರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರವಾಹದಿಂದ ಜಿಲ್ಲೆಯಲ್ಲಿ ಆದ ಬೇಳೆ ಹಾನಿ, ಮನೆಗಳ ಹಾನಿ, ರಸ್ತೆಗಳ ಹಾನಿ, ವಿದ್ಯುತ್ ಕಂಬಗಳ ಹಾನಿ ಸೇರಿದಂತೆ ಇತರೆ ಹಾನಿಗಳನ್ನು ಸರ್ವೇ ಮಾಡಿ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.ಈಗಾಗಲೇ ಕಂದಾಯ ಇಲಾಖೆಯಿಂದ 120 ಕೋಟಿ ರೂ ಪ್ರವಾಹ ಪರಿಹಾರಕ್ಕೆ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಮುಖಾಂತರ ಎಲ್ಲಾ ತಹಶೀಲ್ದಾರಗಳಿಗೆ ಆದೇಶ ತಲುಪಿದೆ ಆದ್ಯತೆ ಮೇರೆ ಪರಿಹಾರ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈಗಾಗಲೇ 8 ಕೋಟಿ ರೂ ದುಡ್ಡು ಇದೆ ಎಂದ ಅವರು ಜಿಲ್ಲೆಯಲ್ಲಿ ಕೆಳಹಂತದಲ್ಲಿರುವ ಎಲ್ಲಾ ಸೇತುವೆಗಳನ್ನು ಗುರುತಿಸಿ ನೀರು ಬಂದು ಮುಳುಗಡೆಯಾಗದಂತೆ ಎತ್ತರಕ್ಕೆ ಏರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಜಿಲ್ಲೆಯಲ್ಲಿ ವಾಡಿಕೆಕ್ಕಿಂತ 63% ಪ್ರತಿಶತ ಹೆಚ್ಚು ಮಳೆಯಾಗಿದ್ದರಿಂದ 6 ಜನ ಮೃತಪಟ್ಟಿದ್ದು ಅವರಿಗೆ ತಲಾ 5 ಲಕ್ಷ ಪರಿಹಾರ ಹಾಗೂ 12 ಜಾನುವಾರುಗಳು ಮೃತಪಟ್ಟಿದ್ದು ಅವುಗಳಿಗೂ ತಲಾ 37,500 ರೂ ಪರಿಹಾರ ನೀಡಲಾಗಿದೆ. 48 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಅವುಗಳಿಗೆ 1.ಲಕ್ಷ 20 ಸಾವಿರ ರೂ ನಗದು ಹಾಗೂ ಮನೆಯನ್ನು ಸರಕಾರದಿಂದ ಕಟ್ಟಿಕೊಡಲಾಗುವುದು. 950 ಮನೆಗಳು ಭಾಗಶಃ ಹಾನಿಯಾಗಿದ್ದು, ಅವುಗಳ ಹಾಗೂ ಬೆಳೆಹಾನಿಯ ಬಗ್ಗೆ ಸರ್ವೆ ನಡೆಸಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.

 

 

ಕಾಳಜಿ ಕೇಂದ್ರದಕ್ಕೆ ಬಿಡುಗಡೆಯಾದ ಹಣ ದುರ್ಬಳಕೆಯಾದರೆ ಕ್ರಮ : ಪ್ರವಾಹ ಸಂತ್ರಸ್ತರಿಗೆ ತೆರೆಯಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಬಿಡುಗಡೆಯಾಗಿರುವ ಹಣವನ್ನು ಯಾರೆ ಅಧಿಕಾರಿಗಳು ದುರ್ಬಳಕೆ ಮಾಡಿರುವುದು ಕಂಡು ಬಂದರೆ ಅವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತರಾಟೆ : ನಗರದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ವಾಸ ಇರುವ ಕೋಣೆಯಲ್ಲಿ ಸರಿಯಾಗಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು ಸ್ಥಳದಲ್ಲಿ ಇದ್ದ ಹೆಸ್ಕಾಂ ಇಲಾಖೆಯ ಉನ್ನತ ಅಧಿಕಾರಿಗಳನ್ನು ಕರೆದು ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ತರಾಟೆಗೆ ತಗೆದುಕೊಂಡು ಘಟನೆ ಜರುಗಿತ್ತು.

ಸಿಎಂ ಕಣ್ವೆ ವಾಹನಕ್ಕೆ ಅಡ್ಡ ಬಂದ ಗೂಳಿ : ನಗರದ ಹಳೆದನಗಳ ಪೇಠೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಹಿಂದಿರುವ ಸಮಯದಲ್ಲಿ ವಾಹನಗಳ ಶಬ್ಬಕ್ಕೆ ಬೆದರಿದ ಗೂಳಿಯೊಂದು ಸಿಎಂ ಸಿದ್ದರಾಮಯ್ಯ ಅವರ ಕಣ್ವೆ ವಾಹನಕ್ಕೆ ಅಡ್ಡಬಂದ ವಾಹನಕ್ಕೆ ಅಪ್ಪಳಿಸಲು ಜಸ್ಟ್ ಮೀಸ್ ಘಟನೆ ನಗರದ ಹಳೆ ದನಗಳ ಪೇಠೆಯಲ್ಲಿ ಜರುಗಿತ್ತು.

ಸುಳ್ಳನ್ನು ಸತ್ಯ ಮಾಡುವುದರಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್ ನವರ ನಿಸ್ಸಿಮರು : ಸರಕಾರದ ಬಳಿ ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಹಣವಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.ಅವರಿಂದ ಏನು ಮಾಡಲು ಸಾಧ್ಯವಿಲ್ಲ. ಸುಳ್ಳನ್ನೆ ಸತ್ಯಮಾಡುವ ಕೆಲಸ ಅವರದ್ದು, ಅದೇ ಟ್ರೇನಿಂಗ್ ಆಗಿದ ಅವರದ್ದು ಎಂದ ಅವರು ಜಿಲ್ಲೆ ವಿಭಜನೆ ಮಾಡಿದರೆ ದುಡ್ಡು ಹಂಚಿಕೆಯಲ್ಲಿ ತೊಂದರೆ ಆಗುವುದಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಸರಕಾರದ ಬಳಿ ದುಡ್ಡು ಸಾಕಷ್ಟಿದೆ ಯಾವುದೇ ತೊಂದರೆ ಆಗುವುದಿಲ್ಲ. ಈಗಾಗಲೇ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ 8 ಕೋಟಿ ರೂ ಹಣ ಇದೆ ಆದ್ಯತೆ ಮೆರೆಗೆ ಅವರು ಬಿಡುಗಡೆ ಮಾಡುತ್ತಾರೆ ಎಂದು ಜಾರಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಸರಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲನಿ ರಜನಿಶ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಶಾಸಕರುಗಳಾದ ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ, ಆಸೀಫ್ (ರಾಜು) ಸೇಠ್, ವಿಶ್ವಾಸ ವೈದ್ಯ, ಬಾಳಾಸಾಹೇಬ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಯುವ ನಾಯಕ ರಾಹುಲ್ ಜಾರಕಿಹೊಳಿ, ತಹಶೀಲ್ದಾರ್ ಡಾ.ಮೋಹ ಭಸ್ಮೆ, ಡಿ.ವಾಯ್.ಎಸ್.ಪಿ ಡಿ.ಎಚ್ ಮುಲ್ಲಾ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Related posts: