ಗೋಕಾಕ:ಮುಂದಿನ 10 ವರ್ಷಗಳವರೆಗೆ ಸಿದ್ದರಾಮಯ್ಯ ಅವರೇ ಸಿಎಂ : ವಿಧಾನ ಪರಿಷತ್ ಸದಸ್ಯ ಲಖನ್
ಮುಂದಿನ 10 ವರ್ಷಗಳವರೆಗೆ ಸಿದ್ದರಾಮಯ್ಯ ಅವರೇ ಸಿಎಂ : ವಿಧಾನ ಪರಿಷತ್ ಸದಸ್ಯ ಲಖನ್
ಗೋಕಾಕ ಅ 5 : ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗುವ ಪ್ರಶ್ನೆಯೆ ಇಲ್ಲ ಮುಂದಿನ 10 ವರ್ಷಗಳವರೆಗೆ ಅವರೇ ಸಿಎಂ ಎಂದು ಪಕ್ಷೇತರ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಸೋಮವಾರದಂದು ನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರವಾಹ ಪರಿಸ್ಥಿತಿಯನ್ನು ಅಳಲೋಕಿಸಲು ನಗರಕ್ಕೆ ಬಂದ ಸಂದರ್ಭದಲ್ಲಿ ಉಪಸ್ಥಿತರಿದ್ದ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಮುಡಾ ಹಗರಣದಲ್ಲಿ ಸುಮ್ಮನೆ ಸಿಎಂ ಅವರ ಹೆಸರು ಕೆಡಿಸಲಾಗುತ್ತಿದೆ. ಅವರ ಜಾಗೆ ಹೋಗಿದೆ ಬದಲಾಗಿ ಅವರಿಗೆ ಬೇರೆ ಜಾಗೆ ಕೊಡಲಾಗಿದೆ ಅದೇ ದೊಡ್ಡದಾಗಿ ಮಾಡಿ ಅದರಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದ ಅವರು ಸಿಎಂ ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿದ್ದು, ಭ್ರಷ್ಟಾಚಾರ ರಹಿತ ಆಡಳಿತವನ್ನು ಮಾಡಿತ್ತಿದ್ದಾರೆ ಅವರಿಗೆ ಯಾವುದೆ ಒಂದು ಕಳಂಕ ಇಲ್ಲ ಅವರು ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ ಎಂದರು.
ಪ್ರತಿ ತಿಂಗಳ 6,800 ಕೋಟಿ ಹಣವನ್ನು ಭಾಗ್ಯಗಳ ಮೂಲಕ ಸಾರ್ವಜನಿಕರಿಗೆ ಹಣ ನೀಡುತ್ತಿದ್ದಾರೆ. ಅದನ್ನು ಸರಿದುಗಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಸಾಗುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರ ಸಾಧ್ಯ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕುತ್ತಿರುವವರು ಯಾರು ಅಂತಾ ಹೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಿಎಂ ಸಿದ್ದರಾಮಯ್ಯ ಕೆಳಮಟ್ಟದಿಂದ ಬಂದು ಮುಖ್ಯಮಂತ್ರಿ ಹುದ್ದೆಗೆ ತಲುಪಿದವರು. ಅವರಿಗೆ ಯಾರು ನಾಟಕ ಮಾಡುತ್ತಿದ್ದಾರೆ, ಯಾರು ಅವರ ಪರವಾಗಿದ್ದಾರೆ ಎಲ್ಲವೂ ಗೋತ್ತಿದೆ ಸಮಯ ಬಂದಾಗ ಅವರೆ ಅದನ್ನು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಅದನ್ನು ಅರವೇ ಸರಿಪಡಿಸಿಕೊಳ್ಳುತ್ತಾರೆ ಎಂದರು
ರಾಜ್ಯಪಾಲರು ಪ್ರಾಸೂಕೇಷನ್ ಗೆ ಅಂಕಿತ ಹಾಕಿದರೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಕೇಸ್ ದಾಖಲಾಗುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕಾನೂನು ಹೋರಾಟ ಮಾಡುತ್ತಾರೆ ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಸರಕಾರ ಉತ್ತರ ಕೊಟ್ಟಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರಿಗೆ ನಿಮ್ಮ ಸರ್ಪೋಟ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮದು ಯಾವಗಲೂ ಸಿದ್ದರಾಮಯ್ಯ ಅವರಿಗೆ ಸರ್ಪೋಟ ನಾವಂತೂ ಪಕ್ಷೇತರವಾಗಿದ್ದೇವೆ ಮೊದಲಿನಿಂದಲೂ ಅವರೆ ನಮ್ಮ ನಾಯಕರು ನಮ್ಮ ಸರ್ಪೋಟ ಅವರಿಗೆ ಎಂದ ಅವರು ಸಹೋದರ ರಮೇಶ್ ಅವರು ಡಿಕೆ ಅವರಿಗೆ ಸಿಡಿ ಶಿವು ಎಂದು ಮರುನಾಮಕರಣ ಮಾಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅದು ಅವರಿಗೆ ಮತ್ತು ಕುಮಾರಸ್ವಾಮಿ ಅವರಿಗೆ ಗೊತ್ತು ನಮ್ಮಗೆನೂ ಬಗ್ಗೆ ಅದರ ಗೊತ್ತಿಲ್ಲ ಎಂದು ಹೇಳಿದರು.