ಗೋಕಾಕ:ಜೂಜುಕೋರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು,ಬಂಧಿತ ಆರೋಪಿಗಳು ಹಿಂಡಲಗಾಕ್ಕೆ ಸ್ಥಳಾಂತರ
ಜೂಜುಕೋರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು,ಬಂಧಿತ ಆರೋಪಿಗಳು ಹಿಂಡಲಗಾಕ್ಕೆ ಸ್ಥಳಾಂತರ
ಗೋಕಾಕ ಅ 21 : ನಗರದ ಕ್ಲಬ್ ಒಂದರ ಮೇಲೆ ಶುಕ್ರವಾರ ರಾತ್ರಿ ಬೆಳಗಾವಿ ಪೊಲೀಸರು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದ 62 ಜೂಜುಕೋರರನ್ನು ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರಪಡಿಸಿ ತದ ನಂತರ ಬೆಳಗಾವಿ ಹಿಂಡಲಗಾಕ್ಕೆ ಸ್ಥಳಾಂತರಿಸಿದ್ದಾರೆ
ಆರೋಪಿಗಳಾದ ಸುಹಾಸ ರಾಮಪ್ಪ ಗಡಕರಿ (34) ಟಿ.ಕೆ.ಸುಭಂಜಿ (36) ಎಸ್.ಎಸ್.ನಾಯಿಕ (30 ಗೋಪಾಲ ಬಸಪ್ಪ ಗಾಣಿಗೇರ (38)
ಮಹಾಂತೇಶ ಆಲತಗಿ (31) ವಿಠ್ಠಲ ಶಿಂಧೆ (24) ದುರಗಪ್ಪ ಗೊಲ್ಲರ (24) ರಮೇಶ ಜನ್ನು(46) ಸತೀಶ ಒಸ್ವಾಲ್ (24) ಹಣಮಂತ ತಹಸೀಲ್ದಾರ್ (34) ಶೇಖರ ತುರಾಯಿದಾರ (45) ಸೋಮಪ್ಪ ಬಾಗಲಕೋಟೆ (41) ಪ್ರಸಾದ ಗುದಗನವರ (33) ಪ್ರಶಾಂತ ಮಠಪತಿ (25) ಪ್ರವೀಣ ವಾಲಿಮನಿ (31) ಬಸವರಾಜ ಬಾಗೇವಾಡಿ (35) ಶಿವಾನಂದ ಬೆಳಗಲಿ (19) ತವಣಪ್ಪ ಬೆನ್ನಾಡಿ (33) ವೀರೇಂದ್ರ ಹುಕ್ಕೇರಿ (27) ವಿನೋದ ಕೌತನಾಳಿ (41) ಈಶ್ವರ ಮಡಿವಾಳರ(33) ಓಂಕಾರ ಚಿಗದೊಳ್ಳಿ (22) ಇಲಾಹಿ ಶಿರಹಟ್ಟಿ (35) ರವಿಕುಮಾರ ಹನುಮನಾಳ (40) ಪುಂಡಲೀಕ ನಿಡಸೋಶಿ (41) ಪ್ರದೀಪ ನೇಗಿನಹಾಳ (30) ವೆಂಕಣ್ಣ ಶಿಂಧಗಾರ (38) ಮಂಜುನಾಥ ಪಾಶ್ಚಾಪೂರ (30 ದೇವು ಕಂಬಾರ (39) ವಿಠ್ಠಲ ಪವಾರ ( 19) ಬಶೀರ ಅಹ್ಮದ ಶಿರಹಟ್ಟಿ (44) ಶಿವಲಿಂಗ ನಾವಿ (33) ರಾಜಶೇಖರ ಫಕೀರೆ (23) ರಫೀಕ್ ಅತ್ತಾರ (32) ರಮೇಶ ಹತ್ತರಕಿ (31) ಶಿವು ಅಂಗಡಿ (20) ಬಸವರಾಜ ಚಿಗದೊಳ್ಳಿ ( 21) ಸಪ್ನೇಶ ಬೆನ್ನಾಡಿ ( 40) ನವೀನ ಓಸ್ವಾಲ್ (27) ರಾಜು ಶಾಹಪುರ (25) ರಜಾಕ್ ಮುಲ್ಲಾ(35) ಪ್ರಸಾದ ನಿಪ್ಪಾಣಿ (25) ಸಂತೋಷ ಚೊಣ್ಣದ (40) ಅಶೋಕ ಬಳಿಗಾರ (51) ಆನಂದ ಕರಾಡಕರ( 40) ಸಂತೋಷ ಮಂತ್ರನ್ನವರ( 39) ಪ್ರಕಾಶ ಗುರವ (44) ಇರ್ಪಾನ ಚೌಧರಿ (35) ವಿಶ್ವನಾಥ ಚುನಮರಿ (35) ವಿಠ್ಠಲ ಸುಬಂಜಿ (23) ಇಸ್ಮಾಯಿಲ್ ಅತ್ತಾರ (39) ಮಲ್ಲೇಶ ಪಾಸಲಕರ (27) ಶೇಖರ ಗೌಳಿ (43) ದೀಪಕ ಶಿರಗಾಂವಿ (27) ಬಸವರಾಜ ಕೊಳವಿ (43) ಬಾಬು ಬೇಡರಟ್ಟಿ (36) ಮೀರಾಸಾಬ ನದಾಫ (42) ರವಿ ಗಮಾನಿ (49) ಸುರೇಶ ಜತ್ತಾರಕರ (47) ಪರಶುರಾಮ ಸಾತಪುತೆ (41) ರಾಜು ಡೊಂಗರೆ (43) ಮತ್ತು ದಳವಾಯಿ ಬಿಲ್ಡಿಂಗ್ ಮಾಲೀಕ ಮೇಲೆ ಪ್ರಕರಣ ದಾಖಲಾಗಿದೆ ಬಂಧಿತ ಎಲ್ಲ ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ
ಬಂಧಿತರಿಂದ ನಗದು 4,30,420 ರೂ ಹಣ , ವಿವಿಧ ಕಂಪನಿಯ ಅಂದಾಜು ಸೂಮಾರು 1,11,000 ಕಿಮತ್ತಿನ 31 ಮೊಬೈಲ್ , ಅಂದಾಜು 40 ಸಾವಿರ ರೂ ಮೊತ್ತದ ಆಟೋ ರಿಕ್ಷಾ ಹಾಗೂ ಅಂದಾಜು 11ಲಕ್ಷ ರೂಪಾಯಿಯ 39 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ . ಫರಾರಿಯಾದ ಇಬ್ಬರು ಆರೋಪಿಗಳಾದ ಬಿ. ವಾಯ್ .ಭರಮಣ್ಣವರ ಮತ್ತು ಅಡಿವೆಪ್ಪಾ ಮಜ್ಜಿಗಿ ಅವರ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ
ಆರೋಪಿಗಳ ಮೇಲೆ ಕೆಪಿ ಆಕ್ಟ್ 79, 80 ಮತ್ತು ಕಲಂ 341 ,353 ಸಹ ಕಲಂ 149 ಐಪಿಸಿ ಪ್ರಕಾರ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸದರಿ ದಾಳಿಯಲ್ಲಿ ಭಾಗಿಯಾದ ಎಲ್ಲ ಪೊಲೀಸ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ಪ್ರಶಂಸಿದ್ದಾರೆ