RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸರಕಾರಿ ಆಸ್ಪತ್ರೆಯನ್ನು 230 ಹಾಸಿಗಳಿಗೆ ಮೇಲ್ದರ್ಜೆಗೆ ಏರಿಸಿ 200 ಹಾಸಿಗೆಗಳ ನೂತನ ಆಸ್ಪತ್ರೆಯ ಶೀಘ್ರ ಲೋಕಾರ್ಪಣೆ : ಶಾಸಕ ರಮೇಶ್

ಗೋಕಾಕ:ಸರಕಾರಿ ಆಸ್ಪತ್ರೆಯನ್ನು 230 ಹಾಸಿಗಳಿಗೆ ಮೇಲ್ದರ್ಜೆಗೆ ಏರಿಸಿ 200 ಹಾಸಿಗೆಗಳ ನೂತನ ಆಸ್ಪತ್ರೆಯ ಶೀಘ್ರ ಲೋಕಾರ್ಪಣೆ : ಶಾಸಕ ರಮೇಶ್ 

ಸರಕಾರಿ ಆಸ್ಪತ್ರೆಯನ್ನು 230 ಹಾಸಿಗಳಿಗೆ ಮೇಲ್ದರ್ಜೆಗೆ ಏರಿಸಿ 200 ಹಾಸಿಗೆಗಳ ನೂತನ ಆಸ್ಪತ್ರೆಯ ಶೀಘ್ರ ಲೋಕಾರ್ಪಣೆ : ಶಾಸಕ ರಮೇಶ್

ಗೋಕಾಕ ಅ 13 : ನಗರದ ಸರಕಾರಿ ಆಸ್ಪತ್ರೆಯನ್ನು 230 ಹಾಸಿಗಳಿಗೆ ಮೇಲ್ದರ್ಜೆಗೆ ಏರಿಸಿ 200 ಹಾಸಿಗೆಗಳ ನೂತನ ಆಸ್ಪತ್ರೆಯನ್ನು ಅತಿ ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.

ಮಂಗಳವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ
ಸರಕಾರದಿಂದ ನೂತನವಾಗಿ ನಾಮನಿರ್ದೇಶನವಾದ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಸಭೆಯನ್ನು ಉದ್ದೇಶಿ ಅವರು ಮಾತನಾಡಿದರು.

ತೀರ ತಳಮಟ್ಟದಲ್ಲಿ ಇದ್ದ ಆಸ್ಪತ್ರೆಯನ್ನು ಹಂತ, ಹಂತವಾಗಿ ಅಭಿವೃದ್ಧಿ ಪಡೆಸಿ ರಾಜ್ಯದಲ್ಲೆ ಅತ್ಯಂತ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಲು ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ ಈಗಾಗಲೇ ಆಸ್ಪತ್ರೆಯ ಆವರಣದಲ್ಲಿಯೆ 200 ಹಾಸಿಗಳ ಹೊಸ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು , ಆ ಕಾರ್ಯ ಮುಗಿದ ತಕ್ಷಣ 100 ಹಾಸಿಗಳಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ 230 ಹಾಸಿಗಳ ಮಾಡಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕು ಎಂದ ಅವರು ಹೊಸದಾಗಿ ಆರೋಗ್ಯ ರಕ್ಷಾ ಸಮಿತಿಗೆ ಆಯ್ಕೆಯಾದ ಸದಸ್ಯರು ಆಸ್ಪತ್ರೆ ಹಾಗೂ ಸಾರ್ವಜನಿಕರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕ ಬಡ,ರೋಗಿಗಳಿಗೆ ಅನುಕೂಲವಾಗುವಂತೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೂತನ ಸದಸ್ಯರು ಶಾಸಕರನ್ನು ಸತ್ಕರಿಸಿದರು.

 

ಈ ಸಂದರ್ಭದಲ್ಲಿ ಡಾ.ರವೀಂದ್ರ ಅಂಟಿನ, ಡಾ.ಎಂ.ಎಸ್.ಕೊಪ್ಪದ, ಡಾ. ಮಂಗಳಾ ಸನದಿ, ಸಮಿತಿಯ ಸದಸ್ಯರುಗಳಾದ ನಿಂಗಪ್ಪ ಬ್ಯಾಗಿ, ಸಿದ್ದಾರೂಢ ದಾಸಪ್ಪನವರ, ಭೀಮಪ್ಪ ದಳವಾಯಿ, ಲಕ್ಷ್ಮಣ ಮಂಗಿ, ಹನುಮಂತ ಕಪರಟ್ಟಿ, ಭೀಮಪ್ಪ ಸನದಿ, ರೇಣುಕಾ ಖಾನಟ್ಟಿ, ಹನುಮಂತ ವಡ್ಡರ ಇದ್ದರು.

Related posts: