ಗೋಕಾಕ:ಅ 16 ರಂದು ” ವಾಯ್ಸ್ ಆಫ್ ಗೋಕಾಕ 89.6 ಎಫ್.ಎಂ ಉದ್ಘಾಟನೆ : ವಿಶ್ವನಾಥ್ ಕಡಕೋಳ
ಅ 16 ರಂದು ” ವಾಯ್ಸ್ ಆಫ್ ಗೋಕಾಕ 89.6 ಎಫ್.ಎಂ ಉದ್ಘಾಟನೆ : ವಿಶ್ವನಾಥ್ ಕಡಕೋಳ
ಗೋಕಾಕ ಅ 13 : ಗೋಕಾಕ ಶಿಕ್ಷಣ ಸಂಸ್ಥೆಯ 60ನೇ ವರ್ಷದ ಸವಿನೆನಪಿಗಾಗಿ ಗೋಕಾಕ ನಾಡಿನ ಯುವಕರಿಗೆ , ಮಹಿಳೆಯರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ , ಪ್ರತಿಭೆಗಳಿಗೆ ಅನುಕೂಲವಾಗಿ ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ” ವಾಯ್ಸ್ ಆಫ್ ಗೋಕಾಕ 89.6 ” ಸಮುದಾಯ ಬಾನೂಲಿ ಕೇಂದ್ರದವನ್ನು ಅಗಸ್ಟ್ 16 ರಂದು ಮಧ್ಯಾಹ್ನ 3 ಘಂಟೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವನಾಥ್ ಕಡಕೋಳ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ವಹಿಸುವರು ಕಾರ್ಯಕ್ರಮವನ್ನು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ರಮೇಶ ಜಾರಕಿಹೊಳಿ, ಸಂಸದರಾದ ಈರಣ್ಣ ಕಡಾಡಿ, ಪ್ರಿಯಾಂಕಾ ಜಾರಕಿಹೊಳಿ, ನಿವೃತ್ತ ಸೇನಾಧಕಾರಿ ಡಿ.ಎಂ ಪೂರ್ವಿಮಠ ಹಾಗೂ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಚೇರ್ಮನ್ ಉದಯ ಆಜರೆ ಉಪಸ್ಥಿತರಿರುವರು ಎಂದು ಹೇಳಿದರು.
” ವಾಯ್ಸ್ ಆಫ್ ಗೋಕಾಕ 89.6 ಬಾನೂಲಿ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಉಡುಪಿ ಮಾತನಾಡಿ ಈ ಕೇಂದ್ರ ಜನರ ಧ್ವನಿಯಾಗಿ
ಕೃಷಿ, ತೋಟಗಾರಿಕೆ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತಿಕ, ಶೈಕ್ಷಣಿಕ, ಆರೋಗ್ಯ ದೊಂದಿಗೆ ಜನರಿಗೆ ಮನರಂಜನೆಯನ್ನು ಕೂಡಾ ನೀಡುತ್ತದೆ. ನಗರದಿಂದ ಸುಮಾರು 30 ಕಿಮೀ ವ್ಯಾಪ್ತಿಯನ್ನು ಬಾನೂಲಿ ಕೇಂದ್ರ ಹೊಂದಿದ್ದು, ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ರೇಡಿಯೋದೊಂದಿಗೆ ಮೊಬೈನಲ್ಲೂ ಕೂಡಾ ಆಲಿಸಬಹುದಾಗಿದೆ ಎಂದ ಅವರು ಸಾರ್ವಜನಿಕರು ಬಾನೂಲಿ ಕೇಂದ್ರದಲ್ಲಿ ಬಂದು ಕುಳಿತು ಆರೋಗ್ಯಕರ ವಿಷಯಗಳ ಕುರಿತು ಮುಕ್ತವಾಗಿ ಚರ್ಚೆ ಮಾಡಲಿಕ್ಕೆ ಒಳ್ಳೆಯ ಅವಕಾಶ ಇದ್ದು, ತಮ್ಮ ಸಮಸ್ಯೆಗಳನ್ನು ಹೇಳಿ ಅದಕ್ಕೆ ಪರಿಹಾರ ಹುಡಿಕೊಳ್ಳಬಹುದಾಗಿದೆ ಸಾರ್ವಜನಿಕರು ವಾಯ್ಸ್ ಆಫ್ ಗೋಕಾಕ 89.6 ಬಾನೂಲಿ ಕೇಂದ್ರ ಆಪ್ಯನ್ನು ಪ್ಲೇಸ್ಟೋರನಲ್ಲಿ ದೌನ್ಲೋಡ್ ಮಾಡಿಕೊಂಡು ಈ ಬಾನೂಲಿ ಕೇಂದ್ರವನ್ನು ಬೆಳೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ತಾವಂಶಿ, ಅಜಯ ಜಾಧವ, ಬಾನೂಲಿ ಕೇಂದ್ರದ ಮುಖ್ಯಸ್ಥ ಡಾ.ವಿ.ವಿ.ಮೋದಿ, ಪ್ರಧಾನ ಗುರು ಎಸ್.ಕೆ.ಮಠದ ಉಪಸ್ಥಿತರಿದ್ದರು.