RNI NO. KARKAN/2006/27779|Friday, November 22, 2024
You are here: Home » breaking news » ರಾಜ್ಯ ಉಸ್ತುವಾರಿ ಮುಂದೆ ಸ್ಫೋಟಗೊಂಡ ಜಾರಕಿಹೊಳಿ ಸಹೋದರರ ” ರಾಜಕೀಯ ಗುದ್ದಾಟ”

ರಾಜ್ಯ ಉಸ್ತುವಾರಿ ಮುಂದೆ ಸ್ಫೋಟಗೊಂಡ ಜಾರಕಿಹೊಳಿ ಸಹೋದರರ ” ರಾಜಕೀಯ ಗುದ್ದಾಟ” 

ರಾಜ್ಯ ಉಸ್ತುವಾರಿ ಮುಂದೆ ಸ್ಫೋಟಗೊಂಡ ಜಾರಕಿಹೊಳಿ ಸಹೋದರರ ” ರಾಜಕೀಯ ಗುದ್ದಾಟ

ವಿಶೇಷ ವರದಿ :: ಸಾಧಿಕ ಹಲ್ಯಾಳ
ಬೆಳಗಾವಿ ಜಿಲ್ಲೆಯ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ನಾಯಕರಲ್ಲಿಯ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಅಸಹನೆಯ ಬೇಗುದಿ ಕುದಿಯುತ್ತಿದೆ. ನಿನ್ನೇಯಷ್ಟೆ ಜಿಲ್ಲೆಯಲ್ಲಿ ನಡೆದ ಬೆಳವಣಿಗೆಗಳಿಂದ ಈ ವಿಷಯ ಡೃಢಪಟ್ಟಿದೆ .
ಜಿಲ್ಲೆಯಲ್ಲಿ ಎರೆಡು ದಿನಗಳಕಾಲ ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಸಹ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಯಡಿಯೂರಪ್ಪ ಸುತ್ತ ಸ್ವಲ್ಪವೂ ಸುಳಿಯಲ್ಲಿಲಾ .

ಮಂಗಳವಾರ ನಡೆದ ಬಿಜೆಪಿ ಕೋರ್ ಕಮಿಟಿ ಒಳಗೆ ಮತ್ತು ಹೊರಗೆ ನಾಯಕರ ನಡುವೆಯೇ ತಿಕ್ಕಾಟದ ಪ್ರಸಂಗಗಳು ನಡೆದ ಬೆನ್ನಿಗೆ ಇನ್ನೊಂದು ಪ್ರಮುಖ ರಾಷ್ಟ್ರೀಯ ಪಕ್ಷ  ‘ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಜ್ಜೆ ಮುಂದು ಎನ್ನುವಷ್ಠರ ಮಟ್ಟಿಗೆ ಒಳಗಡೆಯೇ ಬಣ ರಾಜಕೀಯ ಬೇಗುದಿಯ ಪರಾಕಾಷ್ಠೇ ಬಹಿರಂಗಗೊಂಡಿದೆ.

ಕಾಂಗ್ರೆಸ್ ನಾಯಕರಲ್ಲೂ ಎರಡು ಬಣಗಳಾಗಿದ್ದು ಈಗಾಗಲೇ ಒಂದು ಬಣ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧವೇ ಪಕ್ಷ ಸಂಘಟನೆ ಮತ್ತು ನಿರ್ವಹಣೆಯಲ್ಲಿ ವಿಫಲ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ. ಸಿ. ವೇಣುಗೋಪಾಲ ಅವರಿಗೆ ಸಹಿ ಸಂಗ್ರಹಿತ ದೂರು ಪತ್ರ ಸಲ್ಲಿಸಿದ್ದು ಬಹಿರಂಗವಾಗಿದೆ.

ಮೂಲಗಳ ಪ್ರಕಾರ ಜಿಲ್ಲೆಯ ಕಾಂಗ್ರೆಸ್ ರಾಜಕಾರಣದಲ್ಲಿ ಹಿರಿಯ, ಮುತ್ಸದ್ಧಿ ರಾಜಕಾರಣಿ ಎಂದೇ ಗುರುತಿಸಲ್ಪಟ್ಟ ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಹಾಲಿ ಸಚಿವ ಹಿರಿಯ ಸಹೋದರ ರಮೇಶ ಜಾರಕಿಹೊಳಿ ನಡುವಿನ ರಾಜಕೀಯ ಮುಸುಕಿನ ಗುದ್ದಾಟ ಎಂದು ವಿಷ್ಲೇಶಿಸಲಾಗುತ್ತಿದೆ.ಮೇಲ್ನೋಟಕ್ಕೆ ಸಚಿವ ರಮೇಶ ಜಾರಕಿಹೊಳಿ, ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮತ್ತಿತರರು ತಮ್ಮ ಬೆಂಬಲಿಗ ಪದಾಧಿಕಾರಿಗಳು, ಕಾರ್ಯಕರ್ತರ ಬಳಗದೊಂದಿಗಿದ್ದರೆ, ಅತ್ತ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಶಾಸಕ ಫಿರೋಜ್ ಸೇಠ್,  ಅಶೋಕ ಪಟ್ಟಣ, ಗಣೇಶ ಹುಕ್ಕೇರಿ ಸೇರಿದಂತೆ ಇತರ ನಾಯಕರ ದಂಡು ಎರಡು ಇಬ್ಭಾಗ ಗೋಚರಿಸುವಂತೆ ನಡವಳಿಕೆ ಪರಸ್ಪರ ಪ್ರದರ್ಶಿಸಿವೆ.

ಈ ಎರಡೂ ಕಾಂಗ್ರೆಸ್ ಬಣಗಳ ಕೆಸರೆರಚಾಟದ ನಡುವೆ ಹೊಂದಾಣಿಕೆ ಮಾಡುಲು ಯಾರೊಬ್ಬ ನಾಯಕರು ಸುತಾರಾಂ ಒಪ್ಪುತ್ತಿಲ್ಲ ಇದರಿಂದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಮತಷ್ಟು ಬಿಗಡಾಯಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಇದರಿಂದ ಜಿಲ್ಲೆಯಲ್ಲಿ ನಡೆದ್ದಿದ ಸಹೋದರರ ವಾರ್ ಉಸ್ತುವಾರಿ ವೇಣುಗೋಪಾಲ ಅವರ ಮುಂದೆ ಬಲವಾಗಿ ಸ್ಪೋಟಗೊಂಡಿದೆ ಎಂಬುದರಲ್ಲಿ ಎರೆಡು ಮಾತ್ತಿಲಾ .

ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಅರ್ಹರಿಗೆ ಮಾತ್ರ ಟಿಕೆಟ್ ನೀಡಬೇಕು. ಯಾವುದೇ ಕಾರಣಕ್ಕೂ ಲಾಭಿ ಮಾಡೋರಿಗೆಲ್ಲಾ  ಟಿಕೆಟ್ ನೀಡಬೇಡಿ ಎಂದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಸತೀಶ ಜಾರಕಿಹೊಳಿ ಮನವಿ ಮಾಡಿದ್ದಾರಂತೆ. ದೆಹಲಿಗೆ ಬಂದವರಿಗೆಲ್ಲಾ ಟಿಕೆಟ್ ಕೊಟ್ಟರೆ ಕಾಂಗ್ರೆಸ್‌‌ಗೆ ಕಷ್ಟ ಆಗುತ್ತದೆ. ಗೆಲ್ಲುವವರನ್ನು ಗುರುತಿಸಿ 6 ತಿಂಗಳ ಮೊದಲೇ ಟಿಕೆಟ್ ನೀಡಬೇಕು ಎಂದು ಸ್ವಲ್ಪ ಖಡಕ್ಕಾಗಿಯೇ ಉಸ್ತುವಾರಿ ವೇಣುಗೋಪಾಲ ಅವರಿಗೆ ವಿವರಿಸಿದ್ದಾರೆ ಸತೀಶ ಎಂದು ತಿಳಿದುಬಂದಿದೆ .

ಎರಡೂ ರಾಷ್ಟ್ರೀಯ ಪಕ್ಷಗಳು ವಿಧಾನಸಭೆ ಚುನಾವಣೆ ಮುನ್ನೆಲೆ ಇದ್ದಾಗ ಈ ರೀತಿ ಮುಸುಕಿನ ಗುದ್ದಾಟ ನಡೆಸಿರುವುದು ಜನತೆ ಮುಸಿಯಾಡುವಂತೆ ಮಾಡಿದ್ದಂತು ಸತ್ಯ ಇತ್ ರಾಜ್ಯ ನಾಯಕರುಗಳಿಗೆ ಸಹ ಜಾರಕಿಹೊಳಿ ಸಹೋದರರ ರಾಜಕೀಯ ತಿಕ್ಕಾಟ ತಲೆನೋವು ಸೃಷ್ಟಿಸಿದೆ.

Related posts: