ಗೋಕಾಕ:ಗೋಕಾಕ | ಸಿಎಂ ಬೆಂಬಲಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ
ಗೋಕಾಕ | ಸಿಎಂ ಬೆಂಬಲಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ
ಗೋಕಾಕ ಅ 19 : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಖಂಡಿಸಿ ಸೋಮವಾರ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕೈ ಕಾರ್ಯಕರ್ತರು ರಾಜ್ಯಪಾಲರ ಧೋರಣೆಯನ್ನು ಖಂಡಿಸಿ ಮಾನವ ಸರಪಳಿಯನ್ನು ನಿರ್ಮಿಸಿ ಕೆಲ ಕಾಲ ರಸ್ತೆ ಬಂದ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡರುಗಳಾದ ಸಿದ್ದಲಿಂಗ ದಳವಾಯಿ, ಅಶೋಕ ಪೂಜಾರಿ , ಡಾ.ಮಹಾಂತೇಶ ಕಡಾಡಿ, ಚಂದ್ರಶೇಖರ್ ಕೊಣ್ಣೂರ, ಲಕ್ಷ್ಮಣ ಸವಸುದ್ದಿ, ದಸ್ತಗಿರಿ ಪೈಲವಾನ , ಜಾಕೀರ ನಧಾಫ್ ಮಾತನಾಡಿ, ಕೇಂದ್ರ ಸರ್ಕಾರವು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಇದರ ವಿರುದ್ಧ ಪಕ್ಷದ ಹೋರಾಟ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು,
ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವ ತನ್ನ ಚಾಳಿಯನ್ನು ಎನ್‌ಡಿಎ ನಿಲ್ಲಿಸಬೇಕು, ಇಲ್ಲವಾದರೆ ಬಂದ್‌ಗೆ ಕರೆ ನೀಡಿ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಜು ಪೂಜಾರಿ, ಶಬ್ಬೀರ ಮುಜಾವರ, ಸಾದಿಕ ಲಾಡಖಾನ, ಮಾರುತಿ ಜೋಗಿರಾಮ, ಆನಂದ ಕಡಕೋಳ, ಬಾಬು ಫನಿಬಂದ್, ಮುನ್ನಾ ಖತೀಬ, ಪುಟ್ಟು ಖಾನಾಪೂರೆ, ರಜಾಕ ದೇಸಾಯಿ, ರೇಣುಕಾ ಆಡಿನ, ಸುನೀತಾ ಕೊಣ್ಣೂರ, ಸಂಗೀತಾ ಕಾಂಬ್ಳೆ , ಜೈಬೂನಿ ಬಡೇಖಾನ, ಪರಿವಿನ ಬೋಜಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.