RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಸೇರಿ ಭಾಂಧವ್ಯದಿಂದ, ಶಾಂತಿಯುತವಾಗಿ ಆಚರಿಸೋಣ : ತಹಶೀಲ್ದಾರ್ ಭಸ್ಮೆ

ಗೋಕಾಕ:ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಸೇರಿ ಭಾಂಧವ್ಯದಿಂದ, ಶಾಂತಿಯುತವಾಗಿ ಆಚರಿಸೋಣ : ತಹಶೀಲ್ದಾರ್ ಭಸ್ಮೆ 

ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಸೇರಿ ಭಾಂಧವ್ಯದಿಂದ, ಶಾಂತಿಯುತವಾಗಿ ಆಚರಿಸೋಣ : ತಹಶೀಲ್ದಾರ್ ಭಸ್ಮೆ

ಗೋಕಾಕ ಅ 31 : ನಾವೆಲ್ಲರೂ ಒಂದೇ ಎಂದು ಭಾವನೆಯಿಂದ ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಸೇರಿ ಭಾಂಧವ್ಯದಿಂದ, ಶಾಂತಿಯುತವಾಗಿ ಆಚರಿಸೋಣ ಎಂದು ತಹಶೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.

ಶನಿವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು , ಆಡಳಿತ , ಪೊಲೀಸ್ ಇಲಾಖೆ ಹಾಗೂ ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಗೌರಿ-ಗಣೇಶ ಚರ್ತುರ್ಥಿ ಆಚರಣೆ ಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಮೂಲಕ ನಾಗರೀಕರು ಸಹಕರಿಸಬೇಕು. ಹಸಿರು ಪಟಾಕಿಗಳನ್ನು ಬಳಸಿ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಕಾಪಾಡಬೇಕು. ಸಾರ್ವಜನಿಕರ ಭಾವನೆಗೆ ಧಕ್ಕೆಯಾಗದಂತೆ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಪಣತೋಡಬೇಕು. ಗಣೇಶ ಹಬ್ಬದ ಸಂದರ್ಭದಲ್ಲಿ ನೈಸರ್ಗಿಕ ಬಣ್ಣವನ್ನು ಬಳಸಿ ಪರಿಸರ ಸ್ನೇಹಿ ಗಣೇಶ್ ಹಬ್ಬವನ್ನು ಆಚರಿಸೋಣ ಎಂದ ಅವರು ಸಮಾಜದಲ್ಲಿ ಭಾಂಧವ್ಯ ಮೂಡಿಸಲು ಮಾಧ್ಯಮದವರ ಸಹಕಾರ ಅತ್ಯಂತ ಮುಖ್ಯವಾಗಿದ್ದು , ಅಧಿಕಾರಿಗಳು ಮತ್ತು ಪತ್ರಕರ್ತರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಒಳ್ಳೆಯ ಸಂದೇಶ ನೀಡಲು ಸಾಧ್ಯ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ಆಗದಂತೆ ಒಗ್ಗಟ್ಟಾಗಿ ಭಾರತೀಯ ಸಂಪ್ರದಾಯದಂತೆ ಎಲ್ಲರೂ ಕೂಡಿಕೊಂಡು ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಆಚರಿಸೋಣ ಎಂದು ಹೇಳಿದರು.

ಪಿಎಸ್ಐ ಕೆ.ವಾಲಿಕರ ಮಾತನಾಡಿ ಗೌರಿ ಗಣೇಶ್ ಮತ್ತು ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸೋಣ ನಗರದಲ್ಲಿ ಸ್ಥಾಪಿಸುವ ಗಣೇಶ್ ಪೆಂಡಾಲಗಳಲ್ಲಿ
ಸಿಲಿಂಡರ್ ಮತ್ತು ಮರಳಿನನ ವ್ಯವಸ್ಥೆ ಇರಬೇಕು. ಪೊಲೀಸ್ ಪಾಂಟಿ ಬುಕ್, ಸಿಸಿ ಟಿವಿ ಅಳವಡಿಸಬೇಕು. ಅಗ್ನಿ ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಬೇಕು. ಗೌರಿ ಗಣೇಶ ಮೇಲೆ ಈದ್ ಮಿಲಾದ ಹಬ್ಬಗಳಲ್ಲಿ ಯಾರಾದರೂ ಕಾನೂನು ಸುವ್ಯವಸ್ಥೆ ಕೆಡಿಸಲು ಮುಂದಾದರೆ ಅಂತಹವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ ರಮೇಶ ಜಾಧವ,
ಎಂ.ಎಚ್.ಗಜಾಕೋಶ, ಎಸ್.ಪಿ.ವರಾಳೆ, ವಿನೋದ ಪಾಟೀಲ, ಅಗ್ನಿ ಶಾಮಕ ಠಾಣಾಧಿಕಾರಿ ಎಸ್.ಎನ್ ಮೆಳವಂಕಿ, ಹೆಚ್ಚುವರಿ ಪಿಎಸ್ಐ ರವಿ ವಾಲಿಕರ ಉಪಸ್ಥಿತರಿದ್ದರು.

Related posts: