RNI NO. KARKAN/2006/27779|Monday, September 16, 2024
You are here: Home » breaking news » ಗೋಕಾಕ:ಪತ್ರಿಕಾ ಛಾಯಾಗ್ರಾಹಕ ಬಿ‌.ಪ್ರಭಾಕರ ( ಪ್ರವೀಣ) ಅವರಿಗೆ ಛಾಯಾಶ್ರೀ ಪ್ರಶಸ್ತಿ

ಗೋಕಾಕ:ಪತ್ರಿಕಾ ಛಾಯಾಗ್ರಾಹಕ ಬಿ‌.ಪ್ರಭಾಕರ ( ಪ್ರವೀಣ) ಅವರಿಗೆ ಛಾಯಾಶ್ರೀ ಪ್ರಶಸ್ತಿ 

ಪತ್ರಿಕಾ ಛಾಯಾಗ್ರಾಹಕ ಬಿ‌.ಪ್ರಭಾಕರ ( ಪ್ರವೀಣ) ಅವರಿಗೆ ಛಾಯಾಶ್ರೀ ಪ್ರಶಸ್ತಿ
ಗೋಕಾಕ ಸೆ 1 : ನಗರದ ವೃತಿ ನಿರತ ಹಾಗೂ ಪತ್ರಿಕಾ ಛಾಯಾಗ್ರಾಹಕ ಬಿ‌.ಪ್ರಭಾಕರ ( ಪ್ರವೀಣ) ಅವರು ಕರ್ನಾಟಕ ಪೋಟೋಗ್ರಾರ್ಫರ ಅಸೋಸಿಯೇಷನ್ ಕೊಡಮಾಡುವ ಛಾಯಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ಇದೆ ತಿಂಗಳು 20,21,22 ರಂದು ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆಯಲಿರುವ ಕರ್ನಾಟಕ ಪೋಟೋಗ್ರಾರ್ಫರ ಅಸೋಸಿಯೇಷನ್ ನ ದಶಮಾನೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಡುವುದು ಎಂದು ಕೆಪಿಎ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿದಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವೃತ್ತಿ ನಿರತ ಛಾಯಾಗ್ರಾಹಕರ ಸಂಘ ಹಾಗೂ ಇತರ ಸಂಘ, ಸಂಸ್ಥೆಗಳ ಪದಾಧಿಕಾರಿಗಳು , ಜನಪ್ರತಿನಿಧಿಗಳು , ಅಭಿಮಾನಿಗಳು , ಹಿತೈಷಿಗಳು ಶುಭ ಹಾರೈಸಿದ್ದಾರೆ.

Related posts: