ಗೋಕಾಕ:ಪತ್ರಿಕಾ ವಿತರಕರ ಕಾರ್ಯ ಸ್ಮರಣೀಯ : ಕರವೇ ಅಧ್ಯಕ್ಷ ಬಸವರಾಜ
ಪತ್ರಿಕಾ ವಿತರಕರ ಕಾರ್ಯ ಸ್ಮರಣೀಯ : ಕರವೇ ಅಧ್ಯಕ್ಷ ಬಸವರಾಜ
ಗೋಕಾಕ ಸೆ 5 : ಊರೆಲ್ಲ ಸುತ್ತಿ ಸುದ್ದಿ ಬರೆಯುವವರ ಕಾರ್ಯ ಒಂದೆಡೆಯಾದರೆ. ಸಾಕಷ್ಟು ಸುದ್ದಿಗಳನ್ನು ಹೊತ್ತು ತರುವ ಪತ್ರಿಕೆಯನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುವ ವಿತರಕರ ಕಾರ್ಯ ಸ್ಮರಣೀಯ ಎಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಕರವೇ ತಾಲೂಕು ಘಟಕದ ವತಿಯಿಂದ ಕೆಲ ಪತ್ರಿಕಾ ವಿತರಕರಿಗೆ ಹಮ್ಮಿಕೊಂಡ ಗೌವರ ಸನ್ಮಾನ ಹಾಗೂ ಉಚಿತ ಅಂಚೆ ಇಲಾಖೆಯ ಜೀವವಿಮಾ ಕಾರ್ಡಗಳ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು , ಮಳೆ, ಚಳಿ, ಗಾಳಿ ಲೆಕ್ಕಿಸದೆ ಸೂರ್ಯೋದಯಕ್ಕೂ ಮುಂಚೆ ಪತ್ರಿಕೆಗಳನ್ನು ಮನೆಗೆ ತಲುಪಿಸುತ್ತಾರೆ. ಪತ್ರಿಕಾ ವಿತರಣೆ ಕಾಯಕದ ಹಿಂದಿರುವ ಶ್ರಮ ವಿವರಣೆಗೆ ಮೀರಿದ್ದು. ವಿಶ್ವದ ವಿದ್ಯಮಾನವನ್ನು ಓದುಗ ದೊರೆಯ ಮನೆ ಬಾಗಿಲಿಗೆ ಮುಟ್ಟಿಸುವ ಪತ್ರಿಕೆ ವಿತರಕರ ಕುರಿತು ಅಭಿಮಾನ, ಮೆಚ್ಚಗೆ ವ್ಯಕ್ತಪಡಿಸುವುದು ಪ್ರತಿಯೊಬ್ಬರ ಕರ್ತವ್ಯ ಇಂತಹ ಪರಿಶ್ರಮಿಗಳನ್ನು ರಾಜ್ಯ ಸರಕಾರ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಕರವೇಯ ಸಾದಿಕ ಹಲ್ಯಾಳ, ಯಾಸೀನ್ ಮುಲ್ಲಾ, ಅಬ್ಬು ಮುಜಾವರ, ಮುಖಂಡರುಗಳಾದ ಬಸವರಾಜ ಹತ್ತರಕಿ, ಮಂಜುನಾಥ್ ಪ್ರಭುನಟ್ಟಿ, ಬಾಹುಬಲಿ ಖಾರೆಪಠಾಣ , ಶ್ರೀಶೈಲ ಕುಂಬಾರ, ಬಸವರಾಜ ಹಿರೇಮಠ, ರಾಜೇಂದ್ರ ಕೆಂಚನಗುಡ್ಡ, ಗುರು ಮುನ್ನೋಳಿಮಠ, ರವಿ ಸುಲ್ತಾನಪುರ,ಸಂಜೀವ ಗೋಟುರ, ಅರ್ಜುನ್ ಕಟ್ಟಕಟಿ, ಮಡೆಪ್ಪ ಪೂಜಾರಿ, ರಮಜಾನ ಅಂಡಗಿ ಉಪಸ್ಥಿತರಿದ್ದರು.