ಗೋಕಾಕ;ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ : ಶಾಸಕ ರಮೇಶ್
ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ : ಶಾಸಕ ರಮೇಶ್
ಗೋಕಾಕ ಸೆ 8: ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲಿಕರಣವಾಗುವಂತೆ ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು.
ರವಿವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಹೊಸದಾಗಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯನ್ನು ನಗರದಲ್ಲಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ಸರಕಾರ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಸಮುದಾಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಹಾಗೂ ಜೈನ್ ಸಮುದಾಯದ ಮುಖಂಡರುಗಳು ಶಾಸಕರನ್ನು ಸತ್ಕರಿಸಿದರು.
ಮುಖಂಡರುಗಳಾದ ಕುತ್ಬುದ್ದಿನ ಗೋಕಾಕ, ಶೀತಲ ಡೊಂಗರೆ, ಪ್ರಮೋದ ಅಂಗಡಿ, ಜಾವೇದ ಗೋಕಾಕ, ಮಹಾವೀರ ಖಾರೆಪಟನ, ಸಂತೋಷ ಹುಂಡೇಕರ, ಅಣ್ಣಪ್ಪ ತಬಾಜ, ಸಂತೋಷ ಶಿರಗುಪ್ಪಿ, ಯುಸುಫ ಅಂಕಲಗಿ, ಜಾಕೀರ ಕುಡಚಿಕರ, ಸೈಯದ ಮುಲ್ಲಾ, ಇಲಾಹಿ ಖೈರದಿ ಸೇರಿದಂತೆ ಅನೇಕರು ಇದ್ದರು.