RNI NO. KARKAN/2006/27779|Monday, November 25, 2024
You are here: Home » breaking news » ಗೋಕಾಕ:ಪತ್ರಿಕಾ ವಿತರಕರ ಕಾರ್ಯ ಮಹತ್ವದ್ದಾಗಿದೆ : ಶಾಸಕ ರಮೇಶ್

ಗೋಕಾಕ:ಪತ್ರಿಕಾ ವಿತರಕರ ಕಾರ್ಯ ಮಹತ್ವದ್ದಾಗಿದೆ : ಶಾಸಕ ರಮೇಶ್ 

ಪತ್ರಿಕಾ ವಿತರಕರ ಕಾರ್ಯ ಮಹತ್ವದ್ದಾಗಿದೆ : ಶಾಸಕ ರಮೇಶ್

ಗೋಕಾಕ ಸೆ 8 : ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ ಸಮಯಕ್ಕೆ ತಲುಪಿಸುವ ಮೂಲಕ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರ ಕಾರ್ಯ ಮಹತ್ವದ್ದಾಗಿದೆ. ಎಂಥದ್ದೇ ಸಂದರ್ಭದಲ್ಲೂ ಬೆಳಗಿನ ಜಾವ ಜಗತ್ತಿನ ಆಗುಹೋಗುಗಳ ಸುದ್ದಿಹೊತ್ತು ತರುವ ವಿತರಕರ ಶ್ರಮ, ಸಮಯ ಪ್ರಜ್ಞೆ ಹಾಗೂ ಕಾಯಕನಿμÉ್ಠ ಶ್ಲಾಘನೀಯವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ಯ 15ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಸನ್ಮಾನ ಮಾಡಿ ಗೌರವಿಸಿ ಮಾತನಾಡಿದ ಅವರು, ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು. ಮಳೆ, ಚಳಿ, ಗಾಳಿ, ಇವೆಲ್ಲವನ್ನೂ ಲೆಕ್ಕಿಸದೇ, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಕೋವಿಡ್ ಲಾಕ್ ಡೌನ್‍ನಂತಹ ಸಂದರ್ಭದಲ್ಲಿಯೂ ಕೊರೋನಾ ವಾರಿಯರ್ಸ್‍ಗಳಂತೆ ತಮ್ಮ ಸೇವೆ ನೀಡಿದ್ದಾರೆ ಎಂದು ಸ್ಮರಿಸಿದರು.
ಸಮಾಜದಲ್ಲಿ ಇಂದು ಪತ್ರಿಕೆಗಳ ಓದುಗರು ಹೆಚ್ಚಾಗಬೇಕು. ಪತ್ರಿಕೆಗಳನ್ನು ಕೊಂಡು ಓದುವ ಮನೋಭಾವ ಬೆಳೆಸಿಕೊಂಡರೆ ಪತ್ರಿಕೆ ಸಂಸ್ಥೆಗಳು ಮತ್ತು ಇದರಲ್ಲಿ ದುಡಿಯುವ ಸಿಬ್ಬಂದಿಗಳು ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪತ್ರಿಕೆ ಓದುಗರು ಹಣಕೊಟ್ಟು ಪತ್ರಿಕೆಗಳನ್ನು ತೆಗೆದುಕೊಳ್ಳುವರ ಸಂಖ್ಯೆ ಹೆಚ್ಚಾದರೆ ವಿತರಕರ ಬದುಕಿಗೆ ಆಶ್ರವಾಗಿ ಪತ್ರಿಕೋದ್ಯಮವು ಬೆಳೆಯುತ್ತದೆ ಎಂದು ಹೇಳಿದರು.
ಪತ್ರಿಕಾ ವಿರತಕರಾದ ವಿವೇಕ ಮೂಲಂಗಿ, ಪ್ರಕಾಶ ಸುಣಗಾರ, ಮಹಾದೇವ ಗುದಗಗೋಳ, ಮಹಾಂತೇಶ ಮೂಲಂಗಿ, ಅಯೂಬ್, ಕೊಳಕಿ, ಸುರೇಶ, ಮಹೇಶ, ವೀರಭದ್ರ ಪಾಟೀಲ, ಬಸು ಸೇರಿದಂತೆ ಅನೇಕರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಶಾಸಕ ಆಪ್ತಸಹಾಯಕ ಭೀಮಗೌಡ ಪೋಲಿಸಗೌಡರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಮುಖಂಡರಾದ ಸುರೇಶ ಸನದಿ, ಜಾವೇದ ಗೋಕಾಕ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗುರುಸಿದ್ದಪ್ಪ ಪೂಜೇರಿ, ಪ್ರಧಾನ ಕಾರ್ಯದರ್ಶಿ ಸಾದೀಕ ಹಲ್ಯಾಳ, ಕಾರ್ಯದರ್ಶಿ ಪ್ರದೀಪ ನಾಗನೂರ, ಸಹಕಾರ್ಯದರ್ಶಿ ಬಸವರಾಜ ಭರಮಣ್ಣವರ ಸೇರಿದಂತೆ ಅನೇಕರು ಇದ್ದರು.

Related posts: