RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ : ಶಾಸಕ ಬಾಲಚಂದ್ರ

ಗೋಕಾಕ:ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ : ಶಾಸಕ ಬಾಲಚಂದ್ರ 

ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ : ಶಾಸಕ ಬಾಲಚಂದ್ರ

ಗೋಕಾಕ ಅ 22: ಇತ್ತೀಚೆಗೆ ನಾಗನೂರನಲ್ಲಿ ಜರುಗಿದ ಪ್ರಸಕ್ತ ಸಾಲಿನ ವಿಭಾಗ ಮಟ್ಟದ 14 ವರ್ಷದೊಳಗಿನ ಹೆಣ್ಣು ಮಕ್ಕಳ ಖೋ-ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಮೆಳವಂಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದ್ದಾರೆ.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಬೇಕು. ಇದರಿಂದ ನಿಮ್ಮಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ. ವಿಭಾಗ ಮಟ್ಟದಲ್ಲಿ ಮೊದಲ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಮೆಳವಂಕಿ ಶಾಲೆಯ ವಿದ್ಯಾರ್ಥಿಗಳಿಗೆ ಶುಭಕೋರಿದ ಅವರು, ನವ್ಹೆಂಬರ ಎರಡನೇ ವಾರದಲ್ಲಿ ಜರುಗಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಮೂಡಲಗಿ ವಲಯಕ್ಕೆ ಅದರಲ್ಲೂ ಹುಟ್ಟೂರಿಗೆ ಕೀರ್ತಿ ತರುವಂತೆ ಆಶಿಸಿದರು. ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.


ಮೆಳವಂಕಿಯ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಹಿರಿಯರಾದ ಮಹಾದೇವ ಪತ್ತಾರ, ಶಿವರಾಯಿ ಬಬಲಿ, ಸಣ್ಣಯಲ್ಲಪ್ಪ ಚಿಪ್ಪಲಕಟ್ಟಿ, ಭೀಮಶೆಪ್ಪ ಮಾಶಪ್ಪಗೋಳ, ಸಿದ್ದಪ್ಪ ಹಂಜಿ, ಈರಪ್ಪ ಬೀರನಗಡ್ಡಿ, ಭೀಮಶಿ ಹಡಗಿನಾಳ, ಮಹಾದೇವ ಕರಿಗಾರ, ಸೋಮಪ್ಪ ಕಿತ್ತೂರ, ಸಣ್ಣದೊಡ್ಡಪ್ಪ ಕರೆಪ್ಪನವರ, ಅಲ್ಲಪ್ಪ ಕಂಕಣವಾಡಿ, ನಾಗಪ್ಪ ಮಂಗಿ, ಸತ್ತೆಪ್ಪ ಬಬಲಿ, ಮಹಾನಿಂಗ ಚಿಪ್ಪಲಕಟ್ಟಿ, ಎಸ್‍ಡಿಎಂಸಿ ಅಧ್ಯಕ್ಷ ಕಾಮಶೆಪ್ಪ ಕಿತ್ತೂರ, ಪುಂಡಲೀಕ ಕಡಕೋಳ, ಶಾಲೆಯ ಪ್ರಧಾನ ಗುರು ಎಸ್.ಎಸ್. ಪವಾಡಿಗೌಡರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮೆಳವಂಕಿ ಗ್ರಾಮಸ್ಥರು ಸತ್ಕರಿಸಿದರು.

Related posts: