RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಿಸಿ : ಬಸವರಾಜ ಸ್ವಾಮೀಜಿ

ಗೋಕಾಕ:ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಿಸಿ : ಬಸವರಾಜ ಸ್ವಾಮೀಜಿ 

ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಿಸಿ : ಬಸವರಾಜ ಸ್ವಾಮೀಜಿ

ಗೋಕಾಕ ಸೆ 17 : ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಸಬೇಕಾಗಿದೆ ಎಂದು ಕಪ್ಪರಟ್ಟಿ- ಕಳ್ಳಿಗುದ್ದಿ ಮಠದ ಬಸವರಾಜ ಸ್ವಾಮಿಗಳು ಹೇಳಿದರು.

ಸೋಮವಾರದಂದು ಇಲ್ಲಿನ ಅಂಬೇಡ್ಕರ್ ನಗರದ ಈದ್ಗಾ ಮಸೀದ್ ಜಮಾತದವರು ಈದ್ ಮೀಲಾದ ಹಬ್ಬದ ನಿಮಿತ್ತ ಹಮ್ಮಿಕೊಂಡ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ಪರಮಾತ್ಮನು ಮನುಷ್ಯನಿಗೆ ಜೀವನದಲ್ಲಿ ಎಲ್ಲವನ್ನು ಕೊಟ್ಟಿದ್ದಾನೆ. ಅವನ ಋಣವನ್ನು ತೀರಿಸಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ಮಹಾತ್ಮರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ಸಾಗಬೇಕು. ಮೊಹಮ್ಮದ್ ಪೈಗಂಬರ ಹಾಗೂ ಬಸವಣ್ಣನವರ ವಚನಗಳು ಸಮಾಜದಲ್ಲಿ ಒಂದೇ ಸಂದೇಶವನ್ನು ನೀಡುತ್ತವೆ. ಅವುಗಳನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡು ಸದೃಢ ಸಮಾಜವನ್ನು ಕಟ್ಟಬೇಕಾಗಿದೆ ಎಂದ ಅವರು ಯುವಕರು ಹೆಚ್ಚು ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಗುರುಗಳು, ಸಂತರ ವಾಣಿ ಆಲಿಸಬೇಕು. ಉತ್ತಮ ನಡೆ, ನುಡಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವುದು ತಂದೆ-ತಾಯಿಯ ಆದ್ಯ ಕರ್ತವ್ಯವಾಗಿದ್ದು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಂಬೇಡ್ಕರ್ ನಗರದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಈದ್ಗಾ ಜಮಾತ್ ವತಿಯಿಂದ ಗಣ್ಯರು ಬಹುಮಾನಗಳನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಘಟಪ್ರಭಾದ ಮೌಲಾನಾ ತೌಹೀದ್, ಹಾಪೀಜ ಗೌಸ, ಹಾಪೀಜ ಯೂನೂಸ ಮುಲ್ಲಾ , ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಈದ್ಗಾ ಜಮಾತ ಮುಖಂಡರುಗಳಾದ ಮುಸ್ತಾಕ ಖಂಡಾಯತ್, ಸೈಯದ ಮುಲ್ಲಾ, ಅಶಫಾಕ ಅತ್ತಾರ,ಯರಗಟ್ಟಿ ಹಾಜಿಸಾಬ, ಮೌಲಾ ಮುಲ್ಲಾ, ಸಲೀಮ ಕಲ್ಲೋಳಿ, ಸಾದಿಕ ಹಲ್ಯಾಳ, ಅಬ್ಬು ಮುಜಾವರ ಉಪಸ್ಥಿತರಿದ್ದರು

Related posts: