RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ : ತಹಶೀಲ್ದಾರ್ ಡಾ‌.ಭಸ್ಮೆ

ಗೋಕಾಕ:ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ : ತಹಶೀಲ್ದಾರ್ ಡಾ‌.ಭಸ್ಮೆ 

ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ  : ತಹಶೀಲ್ದಾರ್ ಡಾ‌.ಭಸ್ಮೆ

ಗೋಕಾಕ ಸೆ 19 : ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು ಎಂದು ತಹಶೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕಾ ಪಂಚಾಯತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಗರಸಭೆ ಗೋಕಾಕ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಗೋಕಾಕ ತಾಲೂಕ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟು ನಿರ್ಣಾಯಕರ ನಿರ್ಣಯವನ್ನು ಗೌರವಿಸಿಬೇಕು.ನಮ್ಮ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿ ಮೈಸೂರಿನಲ್ಲಿ ಜರಗುವ ದಸರಾ ಕ್ರೀಡಾಕೂಟದಲ್ಲಿ ನಮ್ಮ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷೆ ಶ್ರೀಮತಿ ಬೀಬಿಬತೂಲ ಜಮಾದಾರ, ಕೆ.ಎಲ್.ತೋರಣಗಟ್ಟಿ, ವಿಠಲ ಮುರ್ಕಿಬಾವಿ, ರಜನಿಕಾಂತ್ ಮಾಳೋದೆ, ಬಸವರಾಜ ಜಕ್ಕಣವರ, ರೋಹಿಣಿ ಎಚ್, ಕೆ.ಎಸ್.ದಟ್ಟಿ, ಲವ ತಡಸಲೂರ, ಶಾನೂಲ್ ನಗಾರಿ, ಸಿದ್ದರೂಢ ವ್ಯಪಾರಿ, ಅಜಯ ಕಲಗುಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು .

Related posts: