RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ : ನಿವೇದಿತಾ ಡಿ.ಪಿ.

ಗೋಕಾಕ:ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ : ನಿವೇದಿತಾ ಡಿ.ಪಿ. 

ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ : ನಿವೇದಿತಾ ಡಿ.ಪಿ.

ಗೋಕಾಕ ಸೆ 18 : ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ ಎಂದು ರಾಮದುರ್ಗ ತಾಲೂಕಿನ ನಾಗನೂರ ಗ್ರಾಮದ ಬಸವಾಶ್ರಮ ಟ್ರಸ್ಟ್ ನ ಕಾರ್ಯದರ್ಶಿ ನಿವೇದಿತಾ ಡಿ.ಪಿ ಹೇಳಿದರು.
ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಇಲ್ಲಿನ ಬಸವ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಮತ್ತು ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 180 ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಚನಗಳ ಹಿಂದೆ ಏನಿದೆ ಎಂಬುದನ್ನು ತಿಳಿದುಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನ ಪಾವನವಾಗುತ್ತದೆ. ಬಸವಣ್ಣನವರು ಹುಟ್ಟಿದಿಂದ, ಕೊನೆಯುಸಿರಿರುವವರೆಗು ತಮ್ಮನ್ನು ತಾವು ಸಮಾಜದ ಉದ್ಧಾರಕ್ಕಾಗಿ ಧಾರೆಯೆರೆದ ಮಹಾನ ಚೇತನ ಅವರ ಆಚಾರ ,ವಿಚಾರಗಳು ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಸಮಾಜದ ಪ್ರತಿಯೊಬ್ಬರಿಗೆ ದಾಸೋಹ ಪರಿಕಲ್ಪನೆ ಕೊಟ್ಟು ಬಡವರು ,ಶ್ರೀಮಂತರು ಎಂಬ ಭೇದ ಭಾವವನ್ನು ತೊರೆದುಹಾಕಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.
ಧರ್ಮದ ,ಮಾನವೀಯ ಅಸ್ಮಿತೆಯನ್ನು ಎತ್ತಿ ಹಿಡಿಯುವ ಸಲುವಾಗಿಯೇ ಕಲ್ಯಾಣ ಕ್ರಾಂತಿಗೆ ನಾಂದಿಹಾಡಿ ತಮ್ಮ ಜೀವ ಮತ್ತು ಜೀವನವನ್ನು ಮೂಡಿಪಾಗಿಟ್ಟು ಸರ್ವರಿಗೆ ಒಳ್ಳೆಯದನ್ನೇ ಬಯಸಿದ್ದಾರೆ. ವಚನ ಸಾಹಿತ್ಯ ನಮಗೆ ಹಾಗೇ ಸಿಕ್ಕಿಲ್ಲ ಹಲವಾರು ಮಹಿನೀಯರು ಹಲವು ತರಹದ ತೊಂದರೆಗಳನ್ನು ಅನುಭವಿಸಿ ನಮಗೆ ಬಹು ಅಮೂಲ್ಯವಾದ ವಚನ ಸಾಹಿತ್ಯವನ್ನು ಕೊಟ್ಟಿದ್ದಾರೆ ಅದನ್ನು ನಾವು ಕಡ್ಡಾಯ ಓದಿ ಮಕ್ಕಳಿಗೆ ಅವುಗಳನ್ನು ಕಲಿಸಿ ಕೊಟ್ಟು ಭವ್ಯ ಸಮಾಜವನ್ನು ಕಟ್ಟಲು ದಾರಿದೀಪ ವಾಗಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಬಟಕುರ್ಕಿಯ ಬಸವಲಿಂಗ ಮಹಾಸ್ವಾಮಿಗಳು, ಹೂಲಿಕಟ್ಟಿಯ ಕುಮಾರ ಮಹಾಸ್ವಾಮಿಗಳು, ಶರಣೆ ಶ್ರೀಮತಿ ಬಸವಗೀತಾ ತಾಯಿಯವರು, ಬಸನಗೌಡ ಪಾಟೀಲ್, ಶ್ರೀಮತಿ ಶೈಲಾ ಬಿದರಿ, ಮಹಾದೇಪ್ಪ ಈಟಿ, ಮಹಾದೇವಯ್ಯ ಹಿರೇಮಠ, ಶ್ರೀಮತಿ ಮಾಲಾ ಪಟ್ಟಣಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

Related posts: