ಗೋಕಾಕ:ದೇಶದಲ್ಲಿ ಜನರಿ ಗೋಸ್ಕರ ಇರುವ ಒಂದೆ ಒಂದು ಪಾರ್ಟಿ ಅದು ಭಾರತೀಯ ಜನಾತಾ ಪಾರ್ಟಿ : ಸೈಯದಲಿ ತಿಮ್ಮಾಪೂರ
ದೇಶದಲ್ಲಿ ಜನರಿ ಗೋಸ್ಕರ ಇರುವ ಒಂದೆ ಒಂದು ಪಾರ್ಟಿ ಅದು ಭಾರತೀಯ ಜನಾತಾ ಪಾರ್ಟಿ : ಸೈಯದಲಿ ತಿಮ್ಮಾಪೂರ
ಗೋಕಾಕ ಸೆ 28: ದೇಶದಲ್ಲಿ ಜನರಿ ಗೋಸ್ಕರ ಇರುವ ಒಂದೆ ಒಂದು ಪಾರ್ಟಿ ಅದು ಭಾರತೀಯ ಜನಾತಾ ಪಾರ್ಟಿ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹಾಗೂ ರಾಜ್ಯ ಸದಸ್ಯತ್ವ ಅಭಿಯಾನದ ಸಂಚಾಲಕ ಸೈಯದಲಿ ತಿಮ್ಮಾಪೂರ ಹೇಳಿದರು
ಶನಿವಾರದಂದು ನಗರದಲ್ಲಿ ಭಾರತೀಯ ಜನತ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ , ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲ ಹಾಗೂ ಅಲ್ಪಸಂಖ್ಯಾತ ಮೋರ್ಚಾ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಈಗಾಗಲೇ 18 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷ ಪಕ್ಷ ಭಾರತೀಯ ಜನತಾ ಪಕ್ಷ ,ಈಗ ಇನ್ನೂ 10 ಕೋಟಿ ಸದಸ್ಯರನ್ನು ಮಾಡುವ ಗುರು ಹೊಂದಲಾಗಿದ್ದು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿ ಭೂತನಲ್ಲಿ ಕನಿಷ್ಠ 100 ಜನರನ್ನು ಸದಸ್ಯರನ್ನಾಗಿ ಮಾಡಬೇಕು.ರಾಷ್ಟ್ರ ಮಟ್ಟದಲ್ಲಿ 50 ಲಕ್ಷ ಸದಸ್ಯರನ್ನು ಮಾಡುವ ಗುರಿಯನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ.ನಡ್ಡಾ ಅವರು ನೀಡಿದ್ದಾರೆ ಅದನ್ನು ಮಾಡುವ ಜವಾಬ್ದಾರಿ ಪತ್ರಿಯೊಬ್ಬರ ಕಾರ್ಯಕರ್ತನ ಮೇಲಿದ್ದು ಅದನ್ನು ಚಾಚೂ ತಪ್ಪದೆ ಮಾಡಿ ಎಂದು ತಿಮ್ಮಾಪೂರ ಹೇಳಿದರು.
ಗ್ರಾಮೀಣ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಮಾತನಾಡಿ ಗೋಕಾಕ ಮತಕ್ಷೇತ್ರದಲ್ಲಿ 21 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಮಾಡಿದ್ದೇವೆ. ಶಾಸಕರ ಸೂಚನೆಯಂತೆ ಈಗಾಗಲೇ ಪ್ರತಿಭೂತಿಗೆ 300 ಸದಸ್ಯರನ್ನು ಮಾಡಿದ್ದೇವೆ. ಉಳಿದಿರುವ ಸಮಯದಲ್ಲಿ ಇನ್ನು ಹೆಚ್ಚಿನ ಸದಸ್ಯರನ್ನು ಮಾಡಲಾಗುವುದು. ಹೆಚ್ಚು ಸದಸ್ಯರನ್ನು ಮಾಡಿದವರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರಿಂದ ಸತ್ಕಾರ ಮಾಡಲಾಗುವುದು. ರಾಜ್ಯದಲ್ಲಿಯೇ ಗೋಕಾಕ ಮತಕ್ಷೇತ್ರದಿಂದ ಹೆಚ್ಚಿನ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದ್ದು ಕಾರ್ಯಕರ್ತರು ಸಹಕರಿಸಬೇಕು ಎಂದು ಹೇಳಿದರು.
ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಶಕೀಲ್ ಧಾರವಾಡಕರ ಮಾತನಾಡಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾಡಿದೆ ಅದನ್ನು ಸಾರ್ವಜನಿಕರಿಗೆ ಹೇಳಿ ಹೆಚ್ಚಿನ ಸದಸ್ಯರನ್ನು ಮಾಡಬೇಕು . ಗೋಕಾಕ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಇಪ್ಪತ್ತೈದು ಸಾವಿರ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದ್ದು, ಈಗಾಗಲೇ 5 ಸಾವಿರ ಸದಸ್ಯರನ್ನು ಮಾಡಲಾಗಿದ್ದು, ಬರುವ ದಿನಗಳಲ್ಲಿ ಇನ್ನೂ 20 ಸಾವಿರ ಅಲ್ಪಸಂಖ್ಯಾತ ಸದಸ್ಯರನ್ನು ಮಾಡಲಾಗುವುದು ಎಂದರು
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಜಾವೇದ್ ಗೋಕಾಕ, ಕಾರ್ಯದರ್ಶಿ ಜುಬೇರ ತರಾಸಗರ, ಹಾಜಿ ಗಫಾರ ಕಾಗಜಿ, ಸುರೇಶ್ ಸನದಿ, ಹನುಮಂತ ದುರಗಣ್ಣವರ ಉಪಸ್ಥಿತರಿದ್ದರು.