RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಅಕ್ಟೋಬರ್ 3 ರಂದು 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡರಥ ಯಾತ್ರೆ ನಗರಕ್ಕೆ : ತಹಶೀಲ್ದಾರ ಡಾ.ಭಸ್ಮೆ

ಗೋಕಾಕ:ಅಕ್ಟೋಬರ್ 3 ರಂದು 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡರಥ ಯಾತ್ರೆ ನಗರಕ್ಕೆ : ತಹಶೀಲ್ದಾರ ಡಾ.ಭಸ್ಮೆ 

ಅಕ್ಟೋಬರ್ 3 ರಂದು 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡರಥ ಯಾತ್ರೆ ನಗರಕ್ಕೆ : ತಹಶೀಲ್ದಾರ ಡಾ.ಭಸ್ಮೆ

ಗೋಕಾಕ ಅ 1 : ಮಂಡ್ಯದಲ್ಲಿ ಜರುಗಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡರಥ ಯಾತ್ರೆಯು ಅ 3 ರಂದು ನಗರಕ್ಕೆ ಆಗಮಿಸಿಲಿದ್ದು, ಈ ಕುರಿತು ಕಾರ್ಯಕ್ರಮದ ರೂಪುರೇಷೆ ತಯಾರಿಸಲು ತಹಸೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ತಹಶೀಲ್ದಾರ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ತಹಶೀಲ್ದಾರ ಡಾ.ಮೋಹನ ಭಸ್ಮೆ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥಯಾತ್ರೆ ಕಾರ್ಯಕ್ರಮವನ್ನು ನಡೆಸಲು ತಾಲೂಕು ಆಡಳಿತ ಸಿದ್ದವಾಗಿದೆ. ಇದು ಕನ್ನಡ ತಾಯಿಯ ಕಾರ್ಯಕ್ರಮವಾಗಿರುವುದರಿಂದ ಎಲ್ಲರೂ ಭಾಗವಹಿಸಬೇಕು. ಅ 3 ರಂದು ಸಾಯಂಕಾಲ 5 ಘಂಟೆಗೆ ನಗರ ಹನುಮಂತ ದೇವರ ಗುಡಿ ಹತ್ತಿರ ಆಗಮಿಸುವ ಕನ್ನಡ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿ ನಗರದ ಸಂಗೋಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಕುಂಭಮೇಳ, ವಾದ್ಯಗೋಷ್ಠಿಗಳೊಂದಿಗೆ ಭವ್ಯ ಮೆರವಣಿಗೆ ಕೈಗೊಳ್ಳಲಾಗಿದ್ದು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಸಾಹಿತಿಗಳು, ಕನ್ನಡಾಸ್ತಕರು, ವಿವಿಧ ಸಂಘಟನೆಗಳ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಹಶೀಲ್ದಾರ ಭಸ್ಮೆ ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪೌರಾಯುಕ್ತ ರಮೇಶ ಜಾಧವ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ, ಬಿಇಒ ಜಿ.ಬಿ.ಬಳಗಾರ, ಪಿಎಸ್ಐ ರವಿ ಕೆ ವಾಲಿಕರ, ಸಿಡಿಪಿಓ ಕುಡವಕ್ಕಲಿಗ, ಜಯಶ ತಾಂಬೂಳೆ, ಕಿರಣ ಢಮಾಮಗರ, ಶಿವಪುತ್ರಪ್ಪ ಜಕಬಾಳ, ಭಾರತಿ ಮದಬಾವಿ, ಈಶ್ವರ ಮಮದಾಪೂರ, ಹನೀಫ್ ಸನದಿ, ಗಿರೀಶ್ ಝಂವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: