RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಹುಟ್ಟು ಮತ್ತು ಸಾವಿನ ನಡುವಿನ ದಿನಗಳನ್ನು ಅರ್ಥಪೂರ್ಣವಾಗಿ ಕಳೆದು ಸಮಾಜಕ್ಕೆ ದಾರಿದೀಪವಾಗಿ : ರಾಹುಲ್ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಶ್ರೀ ಅಭಿಮತ

ಗೋಕಾಕ:ಹುಟ್ಟು ಮತ್ತು ಸಾವಿನ ನಡುವಿನ ದಿನಗಳನ್ನು ಅರ್ಥಪೂರ್ಣವಾಗಿ ಕಳೆದು ಸಮಾಜಕ್ಕೆ ದಾರಿದೀಪವಾಗಿ : ರಾಹುಲ್ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಶ್ರೀ ಅಭಿಮತ 

ಹುಟ್ಟು ಮತ್ತು ಸಾವಿನ ನಡುವಿನ ದಿನಗಳನ್ನು ಅರ್ಥಪೂರ್ಣವಾಗಿ ಕಳೆದು ಸಮಾಜಕ್ಕೆ ದಾರಿದೀಪವಾಗಿ : ರಾಹುಲ್ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ  ಮುರುಘರಾಜೇಂದ್ರ ಶ್ರೀ ಅಭಿಮತ

 

ಗೋಕಾಕ 3 : ಹುಟ್ಟು ಮತ್ತು ಸಾವಿನ ನಡುವಿನ ದಿನಗಳನ್ನು ಅರ್ಥಪೂರ್ಣವಾಗಿ ಕಳೆದು ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಗುರುವಾರದಂದು ನಗರದ ಹಿಲ್ ಗಾರ್ಡನ್ ಕಛೇರಿಯ ಆವರಣದಲ್ಲಿ ರಾಹುಲ್ ಜಾರಕಿಹೊಳಿ ಅಭಿಮಾನಿ ಬಳಗದವರು ಹಮ್ಮಿಕೊಂಡ ರಾಹುಲ್ ಜಾರಕಿಹೊಳಿ ಅವರ 25ನೇ ಹುಟ್ಟು ಹಬ್ಬದ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಸಚಿವ ಸತೀಶ್ ಜಾರಕಿಹೊಳಿ ಅವರು ಸಾಮಾಜಿಕವಾಗಿ ರಾಜಕೀಯವಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ.
ಅವರ ಹಾದಿಯಲ್ಲಿಯೇ ರಾಹುಲ್ ಅವರು ನಡೆಯುತ್ತಿರುವುದು ಶ್ಲಾಘನೀಯ. ರಾಹುಲ್ ಅವರ ವಯಸ್ಸು ಚಿಕ್ಕದಿದ್ದರು ಅವರ ವಿಚಾರಗಳು ದೊಡ್ಡದಿವೆ. ಅವರ ಸಾಮಾಜಿಕ ಕಳಕಳಿ ಬಹಳ ಆರ್ಥಪೂಣವಾಗಿದ್ದು ಸಮಾಜದಲ್ಲಿ ಬಿದ್ಧವರನ್ನು ಎತ್ತಿ ಹಿಡಿಯುವ ಕಾರ್ಯ ಅವರು ಮಾಡಿ ಗೋಕಾಕ ನಾಡಿನ ಹೆಮ್ಮೆಯ ಯುವ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದರು.

ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ ನಮ್ಮ ದೇಶವನ್ನು ಇತಿಹಾಸದ ಪುಟಗಳಲ್ಲಿ ಸೇರಿಸಲು ಬಹಳಷ್ಟು ಯುವ ಜನರ ಸಹಕಾರ ಇದೆ.ಯುವ ಜನತೆ ದೇಶದ ದೊಡ್ಡ ಸಂಪತ್ತಾಗಿದ್ದು, ಸಮಾಜ ಅವರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ರಾಹುಲ್ ಅವರು ತಮ್ಮನ್ನು ತಾವು ಸಮಾಜಕ್ಕೆ ಸಮರ್ಪಿಸಿಕೊಂಡು ಮುನ್ನಡೆಯುತ್ತಿದ್ದಾರೆ. ರಾಜಕೀಯವಾಗಿ ,ಧಾರ್ಮಿಕ, ಸಾಮಾಜಿಕವಾಗಿ ಜನ ಮೆಚ್ಚುವಂತಹ ಕಾರ್ಯ ರಾಹುಲ್ ಮಾಡುತ್ತಿದ್ದಾರೆ. ಯುವಕರು ಮನಸ್ಸು ಮಾಡಿದರೆ ಏನು ಬೇಕಾದುದ್ದನ್ನು ಸಾಧಿಸಬಹುದು. ಜೀವನವನ್ನು ಚಾಲೆಂಜ್ ಆಗಿ ತಗೆದುಕೊಂಡರೆ ಅಂದುಕೊಂಡಿದ್ದನ್ನು ಮಾಡಬಹುದು ಅಂತಹ ಹಾದಿಯಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಅವರು ಸಾಗುತ್ತಿದ್ದಾರೆ. ಯುವಕರು ತಮ್ಮ ಜೀವನವನ್ನು ಆವಲೋಕನೆ ಮಾಡಿ ಮುಂದಿನ ಜೀವನ ಮಾಡಬೇಕು .ಜಾರಕಿಹೊಳಿ ಮನೆತನ ಹಲವು ಮಹತ್ವದ ಕಾರ್ಯಗಳನ್ನು ಈಗಾಗಲೇ ಮಾಡಿದೆ ರಾಹುಲ್ ಅವರಿಂದಲೂ ಇಂತಹ ಸತ್ಕಾರ್ಯಗಳು ಜರುಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಕೆಕ್ ಕಟ್ಟ ಮಾಡುವ ಮೂಲಕ ರಾಹುಲ್ ಜಾರಕಿಹೊಳಿ ಆವರ 25ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಹುಲ್ ಸತೀಶ್ ಜಾರಕಿಹೊಳಿ, ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಲ್ಲಯ್ಯ ಮಹಾಸ್ವಾಮಿಗಳು,ವಿಜಯ ಸಿದ್ದೇಶ್ವರ ಮಹಾಸ್ವಾಮಿಗಳು, ಸುಣ್ಣದೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

Related posts: