RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:“ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆ ನಿಗದಿ’

ಗೋಕಾಕ:“ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆ ನಿಗದಿ’ 

“ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆ ನಿಗದಿ’

ಗೋಕಾಕ ಅ 8 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024- 29ನೇ ಅವಧಿಯ ತಾಲ್ಲೂಕು ಚುನಾವಣಾ ವೇಳಾಪಟ್ಟಿ ನಿಗದಿ ಪಡಿಸಲಾಗಿದೆ ಎಂದು ತಾಲ್ಲೂಕು ಚುನಾವಣಾಧಿಕಾರಿ ನಿವೃತ್ತ ಕೃಷಿ ಅಧಿಕಾರಿ ಅಶೋಕ ಮೇಸ್ತ್ರಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು ರಾಜ್ಯ ಚುನಾವಣಾಧಿಕಾರಿಗಳ ಅಧಿಸೂಚನೆಯನ್ವಯ ಚುನಾವಣಾ ವೇಳಾಪಟ್ಟಿ ನಿಗದಿ ಪಡಿಸಲಾಗಿದೆ. ತಾಲ್ಲೂಕು ಶಾಖೆಯ ನಿರ್ದೇಶಕರ ಸ್ಥಾನದ ಚುನಾವಣೆಗಳು ಅಕ್ಟೋಬರ್ 9 ರಿಂದ 28ರ ವರೆಗೆ ನಿಗದಿ ಪಡಿಸಲಾಗಿದ್ದು, ತಾಲ್ಲೂಕು ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅ.9 ರಿಂದ 18ರ ವರೆಗೆ ನಿಗದಿ ಪಡಿಸಲಾಗಿದೆ. ಅ.19 ರಂದು ನಾಮಪತ್ರ ಪರಿಶೀಲನೆ ನಡೆದು ಅರ್ಹ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು. ಉಮೇದುವಾರಿಕೆ ಹಿಂಪಡೆಯಲು ಅ.21 ಕೊನೆಯ ದಿನವಾಗಿದೆ. ಅವಶ್ಯಕ ಬಿದ್ದಲಿ ಅ.28 ರಂದು ಮತದಾನ ನಡೆಯಲಿದೆ. ಅಂದು ಸಂಜೆ ಮತಗಳ ಎಣಿಕೆ ನಡೆದು ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ವಿವರಿಸಿದ್ದಾರೆ. ನಾಮಪತ್ರ ಸಲ್ಲಿಸುವವರು ನಗರದ ಆಶ್ರಯ ಬಡಾವಣೆ ಹತ್ತಿರ ವಿರುವ ಕೃಷಿ ಸಹಾಯಕ ನಿರ್ದೇಶಕ ಕಛೇರಿಯಲ್ಲಿ ತೆರೆಯಲಾದ ಚುನಾವಣಾ ಕಛೇರಿಯಲ್ಲಿ ಬಂದು ತಮ್ಮ ನಾಮಪತ್ರವನ್ನು ಸಲ್ಲಿಸಬಹುದಾಗಿದೆ. ಗೋಕಾಕ ತಾಲೂಕಿನ ವಿವಿಧ ಇಲಾಖೆಗಳಿಂದ ಒಟ್ಟು 34 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘದ ಚುನಾವಣಾ ಪ್ರಕ್ರಿಯೆ ಸಮಗ್ರ ಮಾಹಿತಿ ಪತ್ರಿಕೆಯನ್ನು ಚುನಾವಣಾಧಿಕಾರಿ ಅಶೋಕ್ ಮೇಸ್ತ್ರಿ ಅವರಿಗೆ ಸಂಘದ ಮಾಜಿ ನಿರ್ದೇಶಕರುಗಳು ವಿತರಿಸಿದರು
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳು ಧರ್ಮೇಂದ್ರ ನಿಂಬಾಳ್ಕರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಎಮ್. ನದಾಫ , ವೆಂಕಟೇಶ ದೊಡಮನಿ, ಬಸವರಾಜ ಮುರಗೋಡ, ಎಂ. ಎಲ್. ಹಸರಂಗಿ , ಎಸ್. ಎಸ್. ಮಾಳಗಿ, ಕೃಷ್ಣಕುಮಾರ್ ಎಸ್. ಕೆ, ಎನ್. ಟಿ. ಬಡವಣ್ಣಿ, ಎಸ್. ಬಿ. ಕೊoತಿ, ಹೆಚ್. ಎನ್. ಮೆಳವಂಕಿ , ಎಸ್. ಆರ್.ಮಜ್ಜಗಿ , ಧರ್ಮೇಂದ್ರ ನಿಂಬಾಳ್ಕರ್ ಮುಂತಾದವರು ಉಪಸ್ಥಿತರಿದ್ದರು.

Related posts: