ಗೋಕಾಕ:ಅಂಕ ಪಡೆದವರೆಷ್ಟೇ ಜೀವನದಲ್ಲಿ ಯಶಸ್ಸು ಗಳಿಸುವುದಿಲ್ಲ : ಡಾ.ವಿಶ್ವನಾಥ ಶಿಂಧೋಳಿಮಠ
ಅಂಕ ಪಡೆದವರೆಷ್ಟೇ ಜೀವನದಲ್ಲಿ ಯಶಸ್ಸು ಗಳಿಸುವುದಿಲ್ಲ : ಡಾ.ವಿಶ್ವನಾಥ ಶಿಂಧೋಳಿಮಠ
ಗೋಕಾಕ ಅ 10 : ಅಂಕ ಪಡೆದವರೆಷ್ಟೇ ಜೀವನದಲ್ಲಿ ಯಶಸ್ಸು ಗಳಿಸುವುದಿಲ್ಲ, ತಮ್ಮಲ್ಲಿಯ ವಿಶಿಷ್ಟ ಕೌಶಲ್ಯಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಎಸ್.ಸಿ.ಬಿ.ಸಿ.ಎ ಕಾಲೇಜಿನ ನಿರ್ದೇಶಕ ಡಾ.ವಿಶ್ವನಾಥ್
ಶಿಂಧೋಳಿಮಠ ಹೇಳಿದರು.
ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಪರಿಗಣಿಸಲಾಗುತ್ತದೆ ಆದರೆ ವಿದೇಶಿಗಳಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ಕೌಶಲ್ಯಗಳನ್ನು ಆಧರಿಸಿ ಕೆಲಸ ನೀಡುತ್ತಾರೆ. ನೀವು ಸಹ ನಿಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮಾಡಬೇಕು. ಆಧುನಿಕ ಯುಗದಲ್ಲಿ ಮೊಬೈಲ್ ನಿಂದ ಹೊರಬಂದು ವಿದ್ಯಾಭ್ಯಾಸ ಕಡೆ ಗಮನ ಹರಿಸಬೇಕು. ಶಾಲೆಯಲ್ಲಿ ಇದ್ದಾಗ ಹೊರಗಡೆ ವಿಚಾರ ಮಾಡುವುದು, ಹೊರಗಡೆ ಇದ್ದಾಗ ಶಾಲೆಯ ಕಡೆ ವಿಚಾರ ಮಾಡುವುದನ್ನು ವಿದ್ಯಾರ್ಥಿಗಳು ಬಿಡಬೇಕು. ಫೇಸ್ಬುಕ್ ಅಲ್ಲಾ ಅದು ಫೇಕ್ ಬುಕ್ಕ ಅದನ್ನು ಬಿಟ್ಟು ವಿದ್ಯಾರ್ಥಿಗಳು ಬೆಳೆಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಪ್ರೋತ್ಸಾಹಿಸಿ ತಮ್ಮ ಪ್ರತಿಭೆಯನ್ನು ಎತ್ತರಕ್ಕೆ ಬೆಳೆಸಿಕೊಳ್ಳಬೇಕು.ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಒಳ್ಳೆಯ ಆಹಾರವನ್ನು ಸೇವಿಸುವಕಡೆ ಗಮನ ಹರಿಸಬೇಕು. ಕಳೆದ 10 ವರ್ಷದ ಹಿಂದೆ ಪ್ರಾರಂಭವಾದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿಯ ಪ್ರತಿಷ್ಠಿತ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರುಗಳಿಗೆ ಗೌರವನ್ನು ನೀಡುವುದನ್ನು ಕಲಿತುಕೊಂಡು ಒಳ್ಳೆಯ ವಿದ್ಯಾರ್ಥಿಗಳಾಗಡೇಕು ಎಂದು ಡಾ.ವಿಶ್ವನಾಥ್ ಶಿಂಧೋಳಿಮಠ ಹೇಳಿದರು
ಇದೇ ಸಂದರ್ಭದಲ್ಲಿ ಭಾರತ ರತ್ನ “ರತನ್ ಟಾಟಾ” ಅವರ ಅಗಲಿಕೆಗೆ ಮೌನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅಡಿವೇಶ ಗವಿಮಠ , ನಿರ್ದೇಶಕ ಬಸನಗೌಡ ಪಾಟೀಲ್, ಉಪನ್ಯಾಸಕಿ ಅರ್ಪಣಾ ಕುಲಕರ್ಣಿ , ವಿದ್ಯಾರ್ಥಿ ಪ್ರತಿನಿಧಿ ಗೀತಾ ಮಾರಿಹಾಳ ಉಪಸ್ಥಿತರಿದ್ದರು.