RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆ ಮಾಡಿ : ಕಾಂಗ್ರೆಸ್ ಮುಖಂಡ ಅಶೋಕ್ ಒತ್ತಾಯ

ಗೋಕಾಕ:ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆ ಮಾಡಿ : ಕಾಂಗ್ರೆಸ್ ಮುಖಂಡ ಅಶೋಕ್ ಒತ್ತಾಯ 

ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆ ಮಾಡಿ : ಕಾಂಗ್ರೆಸ್ ಮುಖಂಡ ಅಶೋಕ್ ಒತ್ತಾಯ

ಗೋಕಾಕ 14: ಬೌಗೋಳಿಕ ಹಾಗೂ ಜನಸಂಖ್ಯೆಯ ದೃಷ್ಠಿಯಿಂದ ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಗಳ ರಚನೆ ಮಾಡುವದು ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಠಿಯಿಂದ ಅತ್ಯಂತ ಅವಶ್ಯಕವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ ರವರು ಕೂಡಲೇ ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದು ಈ ಕುರಿತು ಹೊಸ ಜಿಲ್ಲೆಗಳ ರಚನೆಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕೆಂದು ಹಿರಿಯ ಕಾಂಗ್ರೇಸ್ ಮುಖಂಡ ಅಶೋಕ ಪೂಜಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದ್ದಾರೆ.
ಸೋಮವಾರದಂದುಶ ನಗರದಲ್ಲಿ ತಮ್ಮ ಗೃಹ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇತ್ತಿಚೀನ ವರ್ಷಗಳಲ್ಲಿ ಜಿಲ್ಲಾ ವಿಭಜನೆಯ ಪ್ರಕ್ರಿಯೆಯನ್ನು ಸರಕಾರಗಳೇ ನೇಮಿಸಿದ ಆಯೋಗಗಳ ಶಿಪಾರಸ್ಸಿನ ಆಧಾರದ ಮೇಲೆ ಹಾಗೂ ಸರಕಾರದ ಉನ್ನತ ಮಟ್ಟದ ಆಢಳಿತಾತ್ಮಕ ನೀತಿ ನಿರ್ದೇಶನಗಳಿಗೆ ಪೂರಕವಾಗಿ ಕೈಗೊಳ್ಳುವದು ರಾಜಕೀಯವಾಗಿ ಕಷ್ಟಸಾಧ್ಯದ ಕಾರ್ಯವಾಗಿದೆ. ಅಂತಹ ದೃಢಸಂಕಲ್ಪದ ಆಢಳಿತಾತ್ಮಕ ನಿರ್ಣಯ ಕೈಗೊಳ್ಳುವ ಸರಕಾರಗಳ ಇಚ್ಚಾಶಕ್ತಿಯ ಕೊರತೆಯ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಸಂಬಂಧಪಟ್ಟ ಜಿಲ್ಲೆಯ ಸಚಿವರುಗಳು ಮತ್ತು ಶಾಸಕರುಗಳ ನಿಲುವೇ ಅಂತಿಮವಾಗಿದೆ. ಇದೇ ಕಾರಣದಿಂದ ಬೆಳಗಾವಿ ಜಿಲ್ಲೆಯ ಸಚಿವರುಗಳು ಜಿಲ್ಲೆಯ ಎಲ್ಲ ಶಾಸಕರುಗಳ ಸಭೆಯನ್ನು ಕೂಡಲೇ ಕರೆದು ಅವರೆಲ್ಲರ ಒಟ್ಟಾಭಿಪ್ರಾಯ ಪಡೆದು ಹೊಸ ಜಿಲ್ಲೆಗಳ ರಚನೆಗೆ ಪೂರಕವಾದ ಚಾಲನೆ ನೀಡಬೇಕೆಂದು ಜಿಲ್ಲೆಯ ಸಚಿವರುಗಳನ್ನು ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ವಿಭಜನೆ ಪ್ರಶ್ನೆ ಬಂದಾಗ ಬೆಳಗಾವಿಯ ಭಾಷಾ ಸಮಸ್ಯೆ ಹಾಗೂ ಗಡಿ ಸಮಸ್ಯೆಯನ್ನು ಮುಂದೆ ತಂದು ಕೆಲ ವಿಚಾರವಾದಿಗಳು ಬೆಳಗಾವಿ ಜಿಲ್ಲಾ ವಿಭಜನೆಯ ಪ್ರಕ್ರಿಯೆಯನ್ನು ವಿರೋಧಿಸಿ ಸರಕಾರವನ್ನು ಒತ್ತಾಯಿಸುತ್ತಿರುವದು ಜಿಲ್ಲೆಯ ಅಭಿವೃದ್ಧಿಪರ ಚಿಂತನೆಗೆ ಪೂರಕವಾಗಿಲ್ಲ ಎಂಬುದು ಜಿಲ್ಲೆಯ ಜನರ ಭಾವನೆಯಾಗಿದೆ. ಜಿಲ್ಲಾ ವಿಭಜನೆಯ ಪ್ರಕ್ರಿಯೆಯನ್ನು ಆಡಳಿತಾತ್ಮಕ ಅನುಕೂಲತೆ ಹಾಗೂ ಅಭಿವೃದ್ಧಿಪರ ದೃಷ್ಠಿಕೋನದಿಂದ ಮಾತ್ರ ನೋಡಬೇಕೆಂದು ಕೋರಿದ್ದಾರೆ. ಕನ್ನಡ ಭಾಷೆ ಮತ್ತು ಗಡಿ ಪ್ರಶ್ನೆ ಬಂದಾಗ ಇಡೀ ಬೆಳಗಾವಿ ಜಿಲ್ಲೆ ಹಾಗೂ ನಾಡಿನ ಜನತೆ ಒಕೋರಲಿನ ಹೋರಾಟಕ್ಕೆ ಹಿಂದು-ಇಂದು-ಮುಂದು ಎಂದೆಂದಿಗೂ ಸದಾಸಿದ್ದ ಎಂಬ ಮಾತನ್ನು ಗಂಭೀರವಾಗಿ ಜಿಲ್ಲಾ ವಿಭಜನೆಯ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು ಪರಿಗಣಿಸಬೇಕೆಂದು ಕೋರಿದ್ದಾರೆ.
ಗೋಕಾಕ ಜಿಲ್ಲಾ ರಚನೆಯ ಹೋರಾಟ ಸುಮಾರು ನಾಲ್ಕು ದಶಕಗಳ ಮೇಲ್ಪಟ್ಟು ಹೋರಾಟವಾಗಿದೆ. ಜಿಲ್ಲಾ ಸ್ಥಳವಾಗಲು ಎಲ್ಲ ಪೂರಕ ಸೌಲಭ್ಯಗಳನ್ನು ಹೊಂದಿರುವ ಗೋಕಾಕ ಜಿಲ್ಲಾ ರಚನೆಗೆ ಸರಕಾರ ನೇಮಿಸಿದ ಆಯೋಗಗಳು ಸಹ ಶಿಫಾರಸ್ಸು ಮಾಡಿದ್ದು ಸರಕಾರ ಕೂಡಲೇ ಗೋಕಾಕ ಜಿಲ್ಲಾ ಸಹಿತ ಹೊಸ ಜಿಲ್ಲೆಗಳ ರಚನೆಗೆ ಕ್ರಮಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರೋ. ಎ.ವಾಯ್. ಪಂಗನ್ನವರ, ದಸ್ತಗಿರಿ ಫೈಲವಾನ, ಸಂಜೀವ ಪೂಜಾರಿ, ನಿಂಗಪ್ಪ ಅಮ್ಮಿನಭಾಂವಿ, ಲಕ್ಷ್ಮಣ ಹೊಸಮನಿ, ಪ್ರಸಾದ ಮಾಕನ್ನವರ ಮುಂತಾದವರು ಉಪಸ್ಥಿತರಿದ್ದರು.

Related posts: