RNI NO. KARKAN/2006/27779|Wednesday, October 30, 2024
You are here: Home » breaking news » ಗೋಕಾಕ:ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕರವೇ ಪ್ರತಿಭಟನೆ

ಗೋಕಾಕ:ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕರವೇ ಪ್ರತಿಭಟನೆ 

ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕರವೇ ಪ್ರತಿಭಟನೆ
ಗೋಕಾಕ ಅ 28 : ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುವ ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತಕರು ನಗರದಲ್ಲಿ ಸೋಮವಾರದಂದು ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಕರಾಳ ದಿನಾಚರಣೆ ಮಾಡುತ್ತ ಬಂದಿದೆ. ಈ ಬಾರಿ ಇದಕ್ಕೆ ಅವಕಾಶ ನೀಡಬಾರದು. ಗಡಿಭಾಗದಲ್ಲಿ ಭಾಷೆ, ಗಡಿ ವಿಚಾರದಲ್ಲಿ ಪದೇ ಪದೆ ಕನ್ನಡಿಗರು, ಕರ್ನಾಟಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತ ಬಂದಿರುವ ಎಂಇಎಸ್ ಮುಖಂಡರನ್ನು ಗಡಿಪಾರು ಮಾಡಬೇಕು. ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಅನ್ನೋನ್ಯತೆ, ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಇದನ್ನು ಸಹಿಸದ ಎಂಇಎಸ್ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಹುಳಿಹಿಂಡುವ ಕೆಲಸ ಮಾಡುತ್ತ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕರಾಳ ದಿನಾಚರಣೆಗೆ ಅನುಮತಿ ನೀಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರುಗಳಾದ ಸಾದಿಕ ಹಲ್ಯಾಳ , ದೀಪಕ ಹಂಜಿ, ಬಸವರಾಜ ಗಾಡಿವಡ್ಡರ, ನಿಜಾಮ ನಧಾಪ, ರಾಮ ಕುಡ್ಡೇಮ್ಮಿ, ರಮೇಶ ಕಮತಿ, ಕರೆಪ್ಟ ಹೊರಟ್ಟಿ, ರಾಮಸಿದ್ದ ತೋಳಿ, ಅಪ್ಪಯ್ಯ ತಿಗಡಿ, ಮಲ್ಲು ಸಂಪಗಾರ, ಮಾಳಪ್ಪ ಮಾಲೇದಾರ, ವಿಠಲ ನಾಯಿಕ, ಜಗ್ಗು ರಾಮನಪ್ಪಗೋಳ, ಸಿದ್ದಪ್ಪ ಹನಬರಟ್ಟಿ, ಕೆಂಪಣ್ಣ ಕಡಕೋಳ, ದಸ್ತಗಿರಿ ಮುಲ್ಲಾ, ಗುರು ಮುನ್ನೋಳಠ, ಸಂತೋಷ ಕೋಲಕರ, ಆನಂದ ಖಾನಪ್ಪನವರ, ಸೇರಿದಂತೆ ಅನೇಕೀ ಉಪಸ್ಥಿತರಿದ್ದರು

Related posts: