RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ವೀರರಾಣಿ ಕಿತ್ತೂರ ಚೆನ್ನಮ್ಮನ ತ್ಯಾಗ, ದೇಶ ಪ್ರೇಮ ನಮ್ಮೆಲ್ಲರಿಗೂ ಆದರ್ಶ : ಡಾ| ಎಸ್.ಎನ್. ನದಾಫ

ಗೋಕಾಕ:ವೀರರಾಣಿ ಕಿತ್ತೂರ ಚೆನ್ನಮ್ಮನ ತ್ಯಾಗ, ದೇಶ ಪ್ರೇಮ ನಮ್ಮೆಲ್ಲರಿಗೂ ಆದರ್ಶ : ಡಾ| ಎಸ್.ಎನ್. ನದಾಫ 

ವೀರರಾಣಿ ಕಿತ್ತೂರ ಚೆನ್ನಮ್ಮನ ತ್ಯಾಗ, ದೇಶ ಪ್ರೇಮ ನಮ್ಮೆಲ್ಲರಿಗೂ ಆದರ್ಶ : ಡಾ| ಎಸ್.ಎನ್. ನದಾಫ

ಗೋಕಾಕ ಅ 23: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚೆನ್ನಮ್ಮನ ತ್ಯಾಗ, ದೇಶ ಪ್ರೇಮ ನಮ್ಮೆಲ್ಲರಿಗೂ ಆದರ್ಶವಾಗಿದೆ. ಎಂದು ಎಸ್ ಎಲ್ ಜೆ ಬಿಈಡಿ ಕಾಲೆಜಿನ ಪ್ರಾಚಾರ್ಯ ಡಾ| ಎಸ್.ಎನ್. ನದಾಫ ಹೇಳಿದರು.

ಅವರು ಸೋಮವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಬಿಈಡಿ ಕಾಲೇಜಿನಲ್ಲಿ ಹಮ್ಮಿಕೊಂಡ ಕಿತ್ತೂರ ರಾಣಿ ಚೆನ್ನಮ್ಮ ವಿಜಯೋತ್ಸವ ಹಾಗೂ ರಾಜ್ಯ ಮಹಿಳಾ ದಿನಾಚರಣೆ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದ ಸ್ವಾತಂತ್ರ್ಯ ಹೋರಾಟ ಯುದ್ಧದಲ್ಲಿ ಬ್ರೀಟಿಷ ಅಧಿಕಾರಿ ಠ್ಯಾಕರೆಯನ್ನು ಕೊಂದ ದಿನವನ್ನು ಇಂದು ರಾಜ್ಯಾದ್ಯಂತ ವಿಜಯೋತ್ಸವನ್ನಾಗಿ ಆಚರಿಸಲಾಗುತ್ತದೆ. ಇಂದಿನ ಯುವಜನಾಂಗ ವೀರರಾಣಿ ಚೆನ್ನಮ್ಮನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತರುವುದರೊಂದಿಗೆ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಶ್ರಮಿಸಬೇಕೆಂದರು.

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ತಿಳಿದು ಚೆನ್ನಮ್ಮ, ಝಾನ್ಸಿರಾಣಿ, ಕಲ್ಪನಾ ಚಾವಲಾ, ಇಂದಿರಾಗಾಂಧಿಯವರ ಆದರ್ಶಗಳನ್ನು ಅಳವಡಿಸಿಕೊಂಡು ಅವರಂತೆ ಸಾಧಕರಾಗಬೇಕೆಂದು ಹೇಳಿದರು.

ಕಾರ್ಯಕ್ರಮವನ್ನು ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ ಉದ್ಘಾಟಿಸಿದರು. ವೇದಿಕೆ ಮೇಲೆ ಉಪನ್ಯಾಸಕರಾದ ಎ.ಬಿ.ಪಾಟೀಲ, ಶ್ರೀಧರರಾವ್ ಇದ್ದರು.
ಪ್ರಮೋದ ದಾಸನವರ ಸ್ವಾಗತಿಸಿದರು. ಕಣ್ಣಪ್ಪ ಹುರುಳಿ ನಿರೂಪಿಸಿದರು.ಸನಾ ನಾಶಿಪುಡಿ ವಂದಿಸಿದರು.

Related posts: