RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ಬರುವ ಮಂಗಳವಾರ ಅಥವಾ ಬುಧವಾರದಂದು ಗೋಕಾಕ ಜಿಲ್ಲಾ ಮಾಡಲು ಒತ್ತಾಯಿಸಿ ಧರಣಿ : ಕಾಂಗ್ರೆಸ್ ಮುಖಂಡ ಅಶೋಕ್

ಗೋಕಾಕ:ಬರುವ ಮಂಗಳವಾರ ಅಥವಾ ಬುಧವಾರದಂದು ಗೋಕಾಕ ಜಿಲ್ಲಾ ಮಾಡಲು ಒತ್ತಾಯಿಸಿ ಧರಣಿ : ಕಾಂಗ್ರೆಸ್ ಮುಖಂಡ ಅಶೋಕ್ 

ಬರುವ ಮಂಗಳವಾರ ಅಥವಾ ಬುಧವಾರದಂದು ಗೋಕಾಕ ಜಿಲ್ಲಾ ಮಾಡಲು ಒತ್ತಾಯಿಸಿ ಧರಣಿ : ಕಾಂಗ್ರೆಸ್ ಮುಖಂಡ ಅಶೋಕ್

ಗೋಕಾಕ ನ 5 : ಗೋಕಾಕ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಹೋರಾಟ ಸಂಘಟಿಸಲು ವಿನಂತಿಸಲಾಗಿದ್ದು, ಅವರು ಹೋರಾಟ ಮುಂದುವರೆಸದಿದ್ದರೆ ಬರುವ ಮಂಗಳವಾರ ಅಥವಾ ಬುಧವಾರದಂದು ಗೋಕಾಕ ಜಿಲ್ಲಾ ಮಾಡಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲಾಗುದು ಎಂದು ಕಾಂಗ್ರೆಸ್ ಮುಖಂಡ ಆಶೋಕ ಪೂಜಾರಿ ಹೇಳಿದರು.

ಮಂಗಳವಾರದಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಒಂದು ಸಮಯದಲ್ಲಿ ಗೋಕಾಕ ಜಿಲ್ಲಾ ಹೋರಾಟವು ರಾಜ್ಯದ ಗಮನ ಸೆಳೆದಿತ್ತು, ಆದರ ಇತ್ತೀಚೆಗೆ ಅದು ಆಗುತ್ತಿಲ್ಲ, ಜಿಲ್ಲಾ ರಚನೆ ಹೋರಾಟ ಸಮಿತಿ ಮತ್ತು ನ್ಯಾಯವಾದಿಗಳ ಸಂಘ ಸಕ್ರಿಯವಾಗಿ ಹೋರಾಟಕ್ಕೆ ಧುಮುಕಿ ಸರಕಾರಕ್ಕೆ ಚುರುಕು ಮುಟ್ಟಿಸಬೇಕು ಆದರೆ ಇತ್ತೀಚೆಗೆ ಪೂರಕ ಪ್ರಮಾಣದಲ್ಲಿ ಹೋರಾಟ ಆಗುತ್ತಿಲ್ಲ ಎಂಬುದು ವಿಷಾದನೀಯ ಎಂದ ಅವರು ಇದರ ಬಗ್ಗೆ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಜೊತೆಗೆ ಚರ್ಚಿಸಲಾಗಿದ್ದು, ಬರುವ ಸೋಮವಾರದವರೆಗೆ ಹೋರಾಟ ಮಾಡಲು ವಿನಂತಿಸಲಾಗಿದ್ದು, ಅವರು ಹೋರಾಟ ಮಾಡಿದರೆ ಅವರ ಜೊತೆಗೆ ಕೂಡಿ ಹೋರಾಟ ಮಾಡಲಾಗುವುದು. ಅವರು ಮಾಡದಿದ್ದರೆ ನಾವು ಮಂಗಳವಾರವಾರ ಅಥವಾ ಬುಧವಾರದಂದು ತಹಶೀಲ್ದಾರ್ ಕಛೇರಿ ಎದುರು ಧರಣಿ ಮಾಡಲಾಗುವುದು ಎಂದರು.
ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಜಿಲ್ಲಾ ಸಚಿವರ ಮತ್ತು ಶಾಸಕರು ಸಹಕಾರ ಮುಖ್ಯವಾಗಿದ್ದು, ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿ ಆದಷ್ಟು ಬೇಗ ಗೋಕಾಕ ನೂತನ ಜಿಲ್ಲೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವರಿಗೆ ಜಿಲ್ಲೆಯ ಎಲ್ಲ ಶಾಸಕರನ್ನು ಕರೆಯಿಸಿ ಸಭೆ ಮಾಡಿ ಎಂದು ಹೇಳಿದ್ದೆ ಆದರೆ ಅದು ಆಗಿಲ್ಲ ಆದಷ್ಟು ಬೇಗ ಜಿಲ್ಲೆಯ ಎಲ್ಲಾ ಶಾಸಕರ ಸಭೆ ನಡೆಯಿಸಿ ಅವರ ಅಭಿಪ್ರಾಯಗಳನ್ನು ಪಡೆದು ಸರಕಾರದ ಗಮನ ಸೆಳೆಯಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೊಳಿ ಮತ್ತು ತಾಲೂಕಿನ ಶಾಸಕರು ಇದಕ್ಕೆ ಸ್ವಂದಿಸಬೇಕು. ಇದರ ಜೊತೆಗೆ ಪ್ರಾಮಾಣಿಕ ಹೋರಾಟ ಕೂಡಾ ಆಗಬೇಕು. ಸಚಿವರು ಮತ್ತು ಶಾಸಕರು ನಮ್ಮ ಹೋರಾಟಗಳನ್ನು ಎತ್ತಿ ಹಿಡಿದು ಸರಕಾರಕ್ಕೆ ಒತ್ತಾಯಿಸಬೇಕು ಎಂದು ಅಶೋಕ ಪೂಜಾರಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೋ.ಅರ್ಜುನ್ ಪಂಗನ್ನವರ , ದಸ್ತಗಿರಿ ಪೈಲವಾನ, ಸದಾಕತ ಮಂಕಾದಾರ, ಸಂಜೀವ ಪೂಜಾರಿ, ಡಾ.ಪ್ರವಿಣ ನಾಯಿಕ, ನಿಂಗಪ್ಪ ಅಮ್ಮಿನಬಾವಿ ಉಪಸ್ಥಿತರಿದ್ದರು.

Related posts: