ಗೋಕಾಕ:ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಅದು ಪರಿಣಾಮಕಾರಿಯಾಗಿರುತ್ತದೆ : ಲಕ್ಷ್ಮೀ ಲಂಗೋಟಿ
ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಅದು ಪರಿಣಾಮಕಾರಿಯಾಗಿರುತ್ತದೆ : ಲಕ್ಷ್ಮೀ ಲಂಗೋಟಿ
ಗೋಕಾಕ ನ 10 : ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಅದು ಪರಿಣಾಮಕಾರಿಯಾಗಿರುತ್ತದೆ ಎಂದು ಕಿತ್ತೂರಿನ ಶ್ರೀ ಮಲ್ಲಿಕಾರ್ಜುನ ಪೌಂಡೇಶನ್ ಸಂಸ್ಥಾಪಕರಾದ ಶ್ರೀಮತಿ ಲಕ್ಷ್ಮೀ ಲಂಗೋಟಿ ಹೇಳಿದರು.
ನಗರದ ಶ್ರೀ ರಾಮಲಿಂಗೇಶ್ವರ ಸಭಾಂಗಣದಲ್ಲಿ ರವಿವಾರದಂದು ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಜಿಲ್ಲಾ ಘಟಕದಿಂದ 69ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಬೆಳಗಾವಿ ನುಡಿಸಿರಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪಾಲಕರು ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಿ ಅವರ ಜ್ಞಾನ ಮಟ್ಟವನ್ನು ಹೆಚ್ಚಿಸಬೇಕು. ಕನ್ನಡ ದಿನಪತ್ರಿಕೆಗಳನ್ನು ತಾವು ಓದಿ ತಮ್ಮ ಮಕ್ಕಳಲ್ಲಿಯೂ ಓದುವ ಹವ್ಯಾಸವನ್ನು ಮೂಡಿಸುವಂತೆ ಕರೆ ನೀಡಿದರು.
ಪ್ರಶಸ್ತಿ ಪ್ರಧಾನ ಮಾಡಿದ ಬೆಳಗಾವಿ ಯೋಜನಾ ಉಪ ನಿರ್ದೇಶಕ ಬಿ.ವ್ಹಿ ಹಿರೇಮಠ ಮಾತನಾಡಿ ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಭಾಷೆ ಕನ್ನಡವನ್ನು ನಾವೆಲ್ಲಾ ದಿನನಿತ್ಯ ಬಳಸುವ ಮೂಲಕ ಇನ್ನಷ್ಟು ಶ್ರೀಮಂತ ಗೋಳಿಸುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗಿದವು.
ವೇದಿಕೆಯಲ್ಲಿ ಕನ್ನಡ ಪ್ರಜಾ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಆನಂದ ಸೋರಗಾವಿ, ಅಥಿತಿಗಳಾದ ಲಕ್ಕಪ್ಟಾ ಲಕ್ಕೂರೆ, ಅಶೋಕ್ ಲಗಮಪ್ಪಗೋಳ, ಪ್ರಾಚಾರ್ಯ ಜಯಾನಂದ ಮಾದರ, ರಮೇಶ ಬಿಲಕುಂದಿ, ವಾಸುದೇವ ಯಗ್ರಾವಿ, ಸಂತೋಷ ಪಾಟೀಲ, ಲಕ್ಷ್ಮೀ ಪಾಟೀಲ, ಈಶ್ವರಚಂದ್ರ ಬೆಟಗೇರಿ, ಉದ್ದಣ್ಣ ಗೂಡೇರ, ಹಾಗೂ ಪ್ರಶಸ್ತಿ ವಿಭೂಷಿತರಾದ ಪ್ರದೀಪ್ ನಾಗನೂರ, ಸಂಜೀವ ಮೆಳವಂಕಿ, ರೇವಣ್ಣಸಿದ್ದ ಕಣಕಿಕೋಡಿ, ಸುರೇಶ್ ಮುದ್ದಾರ, ರವಿ ಕಾಂಬ್ಳೆ, ಡಾ.ಪ್ರಮೋದ್ ಎತ್ತಿನಮನಿ, ಭಾಸ್ಕರ್ ಅಜ್ಜಪ್ಪಗೋಳ, ಯಲವ್ವ ಗಡದೆ, ಲಕ್ಷ್ಮೀ ಹರಿಜನ, ಸದಾಶಿವ ವಾಗ್ಮೋರೆ ಇದ್ದರು.