RNI NO. KARKAN/2006/27779|Wednesday, December 4, 2024
You are here: Home » breaking news » ಗೋಕಾಕ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಗೋಕಾಕ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ಆಯ್ಕೆ 

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ಆಯ್ಕೆ
ಗೋಕಾಕ ನ 11 : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಭೆಯು ನಗರದ ಪ್ರವಾಸಿ ಮಂದಿರದಲ್ಲಿ ರವಿವಾರದಂದು ಜರುಗಿತು.
ಈ ಸಭೆಯಲ್ಲಿ ಜಿಲ್ಲೆಯ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಬೆಳಗಾವಿ ವಿಭಾಗಿಯ ಅಲ್ಪಸಂಖ್ಯಾತ ಘಟಕದ ಸಂಚಾಲಕರಾಗಿ ತೌಫೀಕ ದೇಸಾಯಿ, ಸಂಘಟನಾ ಸಂಚಾಲಕರಾಗಿ ರಫೀಕ್ ಮೋಮಿನ , ಜಿಲ್ಲಾ ಸಂಘಟನಾ ಸಂಚಾಲಕರಾಗಿ ಶಾಬಪ್ಪ ಸಣ್ಣಕ್ಕಿ, ಬೈಲಹೊಂಗಲ ಉಪ ವಿಭಾಗದ ಸಂಚಾಲಕರಾಗಿ ವಿರಬದ್ರ ಮೈಲನ್ನವರ, ಚಿಕ್ಕೋಡಿ ಉಪ ವಿಭಾಗದ ಸಂಚಾಲಕರಾಗಿ ಚೇತನ ಗಣಾಚಾರಿ, ಮೂಡಲಗಿ ತಾಲೂಕು ಸಂಚಾಲಕರಾಗಿ ಸುರೇಶ್ ಸಣ್ಣಕ್ಕಿ, ಸಂಘಟನಾ ಸಂಚಾಲಕರಾಗಿ ಭೀಮಶಿ ಹರಿಜನ , ಸೌರಭ ಕಾಂಬ್ಳೆ, ದಲಿತ ಮಹಿಳಾ ಒಕ್ಕೂಟದ ಸಂಚಾಲಕಿಯಾಗಿ ರುಕ್ಕಮವ್ವ ಕುದರಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ , ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ, ಶೋಭಾ ಕಟ್ಟಿಮನಿ, ಮಾರುತಿ ಹರಿಜನ , ಲಕ್ಷ್ಮಣ ತೆಳಗಡೆ, ಮಹಾಂತೇಶ ಕಾಂಬ್ಳೆ, ರಮೇಶ ಈರಗಾರ, ಪುಂಡಲೀಕ ಕೋಲಕಾರ, ನಟರಾಜ್ ಮಾವರಕರ ಇದ್ದರು.

Related posts: