ಗೋಕಾಕ:ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಬಿ.ಪ್ರಭಾರಕ ಅವರಿಗೆ ಸತ್ಕಾರ
ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಬಿ.ಪ್ರಭಾರಕ ಅವರಿಗೆ ಸತ್ಕಾರ
ಗೋಕಾಕ ನ 27 : ನಗರದ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿಯ ಕಾರ್ತಿಕೋತ್ಸವದ ಕಾರ್ಯಕ್ರಮದಲ್ಲಿ ಇಲ್ಲಿನ ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಬಿ.ಪ್ರಭಾಕರ್( ಪ್ರವಿಣ) ಅವರನ್ನು ಶ್ರೀ ಲಕ್ಷ್ಮೀ ದೇವಿ ಪಾದಗಟ್ಟಿಯ ಸೇವಾ ಸಮಿತಿ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಗೈಡ್ ನ ಗಜಾನನ ಮನ್ನಿಕೇರಿ, ನಗರಸಭೆ ಸದಸ್ಯ ಜಯಾನಂದ ಹುಣ್ಣಾಚ್ಯಾಳಿ, ಸಮಿತಿಯ ವೀರುಪಾಕ್ಷಿ ವಿರ್ಜಿ, ಡಿ.ಬಿ. ರಾಹುತ್, ಮಹಾದೇವ ಕೌಜಲಗಿ, ಕರಣಸಾಗರ ಪ್ಯಾಟಿ, ಆರ್.ಎಸ್.ಕಲ್ಯಾಣಿ ಉಪಸ್ಥಿತರಿದ್ದರು