RNI NO. KARKAN/2006/27779|Sunday, September 8, 2024
You are here: Home » breaking news » ಬೆಳಗಾವಿ ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನ

ಬೆಳಗಾವಿ ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನ 

ಬೆಳಗಾವಿ  ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನಸರಗಳ್ಳರನ್ನು ಬಂಧಿಸಿರುವ 
ಬೆಳಗಾವಿ ಮೇ 10:  ನಗರದಲ್ಲಿ ಸರಗಳ್ಳತನ ಹಾಗೂ ಜಬರಿ ಕಳ್ಳತನ ಮಾಡುತ್ತಿದ್ದ 7 ಜನ ಕಳ್ಳರನ್ನು ಎಪಿಎಮಸಿ ಮಾರ್ಕೆಟ್ ಪೋಲಿಸರು ಬುಧವಾರದಂದು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಸಿಕಂದರ ಶಹಾಪುರ, ಸೈಫುಲ್ಲಾ ಬಾರಗೆರ, ಮುಹಮ್ಮದ ಧಜೆಯಾ, ಅಹ್ಮದ ಜಮಾದಾರ, ಫೈಸಲ್ ಶೇಕ, ಯುನುಸ ಮುಲ್ಲಾ, ಜಹೀರ ಮನಯಾರ ಎಂಬ ಕಳ್ಳರನ್ನು  ಬಂಧಿಸಿ ಅವರಿಂದ 7 ಲಕ್ಷ ರೂ. ಬೆಲೆಯ 250 ಗ್ರಾಂ ಬಂಗಾರದ ಆಭರಣಗಳು ಹಾಗೂ ಕಳ್ಳತನಕ್ಕೆ ಬಳಿಸಿದ 1.60 ಲಕ್ಷ ಮೌಲ್ಯದ 4 ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪೋಲಿಸ ಕಮಿಷನರ್ ಮತ್ತು ಬೆಳಗಾವಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಉಪಪೋಲಿಸ ಆಯುಕ್ತರು ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಮತ್ತು ಸಂಚಾರ ಎಸಿಪಿ ಮಾರ್ಕೆಟ ಉಪವಿಭಾಗರವರ ಮಾರ್ಗದರ್ಶನದಲ್ಲಿ ಎಪಿಎಮಸಿ ಪೋಲಿಸ ಠಾಣೆ ಇನ್ಸಪೆಕ್ಟರ್ ಜಿ.ಎಂ. ಕಾಲಿಮಿರ್ಚಿ ಹಾಗೂ ಸಿಬ್ಬಂದಿಗಳಾದ ಎಂ.ಬಿ. ಕೊಂಕಣ್ಯಾಗೋಳ, ಶಂಕರ ಕುಗತೋಳಿ, ನಾಗರಾಜ ಭೀಮಗೋಳ, ತುಕಾರಾಮ ದೊಡ್ಡಮನಿ, ಕೆಂಪಣ್ಣಾ ಗೌರಾಣಿ ಜಗನ್ನಾಥ ಭೋಸಲೆ, ಶಾಂತಿನಾಥ ಗೌರಾಜ, ಕೇದಾರಿ ಪಾಟೀಲ ಕಾರ್ಯಾಚರಣೆ ನಡೆಸಿ 7-ಸರಗಳ್ಳರನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

Related posts: