RNI NO. KARKAN/2006/27779|Wednesday, December 4, 2024
You are here: Home » breaking news » ಗೋಕಾಕ:ಮಹಾಮೇಳಾವಕ್ಕೆ ಅನುಮತಿ ಬೇಡ : ಸರಕಾರಕ್ಕೆ ಕರವೇ ಮನವಿ

ಗೋಕಾಕ:ಮಹಾಮೇಳಾವಕ್ಕೆ ಅನುಮತಿ ಬೇಡ : ಸರಕಾರಕ್ಕೆ ಕರವೇ ಮನವಿ 

ಮಹಾಮೇಳಾವಕ್ಕೆ ಅನುಮತಿ ಬೇಡ : ಸರಕಾರಕ್ಕೆ ಕರವೇ ಮನವಿ

ಗೋಕಾಕ ನ 29 : ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ದಿನ ಎಂಇಎಸ್ ಆಯೋಜಿಸಿರುವ ಮಹಾಮೇಳಾವಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತೃತ್ವದಲ್ಲಿ. ಶುಕ್ರವಾರ ಸಾಯಂಕಾಲ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಿದರು.

ತಹಶೀಲ್ದಾರ್ ಕಛೇರಿಯ ಮುಂದೆ ಸೇರಿದ ಕರವೇ ಕಾರ್ಯಕರ್ತರು ಎಂ.ಇ.ಎಸ್.ಸಂಘಟನೆ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಕರ್ನಾಟಕದಿಂದ ಸೌಕರ್ಯ ಪಡೆದು ಮರಾಠಿಗರು ಎಂಬ ಭಾವನೆ ಮೂಲಕ ಜನರನ್ನು ಒಕ್ಕಲೆಬ್ಬಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೇ ಎಂಬುದು ಮಹಾರಾಷ್ಟ್ರ ಹಾಗೂ ಕರ್ನಾಟಕದ ಜನರಿಗೆ ತಿಳಿದಿರುವ ಸಂಗತಿಯಾಗಿದೆ. ಅಲ್ಲದೇ ಕರ್ನಾಟಕದಲ್ಲಿ ನೆಲೆಸಿರುವ ಮರಾಠಿಗರ ಭಾವನೆಗಳಿಗೆ ಧಕ್ಕೆಯಾಗದಂತೆ ಇಲ್ಲಿಯವರೆಗೆ ಸೌಹಾರ್ದಯುತ ಸಂಬಂಧ ಕಾಯ್ದುಕೊಂಡು ಬರಲಾಗಿದೆ. ಅಲ್ಲದೇ ಅವರ ಪ್ರಗತಿಗೆ ಶೈಕ್ಷಣಿಕ ಹಾಗೂ ಮೂಲ ಸೌಕರ್ಯ ಸೇರಿದಂತೆ ಬೇಕಾಗಿರುವ ಪ್ರತಿಯೊಂದು ಕನಿಷ್ಟ ಸವಲತ್ತನ್ನು ಸರಕಾರ ಅವರಿಗೆ ಒದಗಿಸಿದೆ ಎಂದರು.
ಕರ್ನಾಟಕದಲ್ಲಿದ್ದೂ, ರಾಜ್ಯದ ಎಲ್ಲಾ ಸೌಲಭ್ಯ ಪಡೆದ ಮರಾಠಿ ಭಾಷಿಕರಲ್ಲಿ ವಿಷಬೀಜ ಬಿತ್ತುತ್ತಿರುವ ಶಕ್ತಿಗಳ ಬಗ್ಗೆ ಕಠಿಣ ಕ್ರಮ ಕೈಕೊಳ್ಳಬೇಕು. ಅವರ ಚಟುವಟಿಕೆಗೆ ಸರಕಾರ ಯಾವುದೇ ರೀತಿ ಸಹಕಾರ ನೀಡಬಾರದು. ಚಳಿಗಾಲದ ಅಧಿವೇಶನ ಅರ್ಥಪೂರ್ಣವಾಗಿ ನಡೆದು ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕ ಅಭಿವದ್ಧಿ ವಿಷಯಗಳ ಕುರಿತ ಚರ್ಚೆಗೆ ಬೆಳಗಾವಿ ಕೇಂದ್ರಬಿಂದುವಾಗಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಚಾಲಕ ಸುರೇಶ್ ಗವ್ವನ್ನವರ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ರೋಕಡೆ, ಜಿಲ್ಲಾ ಸಂಚಾಲಕರಾದ ಹೊಳೆಪ್ಪ ಸೂಳದಾಳ, ಬಾಳು ಜಡಗಿ, ಕರವೇ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ದೀಪಕ ಹಂಜಿ, ಪಪ್ಪು ಹಂದಿಗುಂದ, ಮಲ್ಲು ಸಂಪಗಾರ, ಹನಿಫ ಸನದಿ, ಬಸವರಾಜ ಗಾಡಿವಡ್ಡರ, ರಮೇಶ ಕಮತಿ, ಕೆಂಪಣ್ಣ ಕಡಕೋಳ, ಮಲಪ್ಪ ತಲೆಪ್ಪಗೋಳ, ದುಂಡಪ್ಪ ಪಾಟೀಲ, ಕರೆಪ್ಟ ಮಾಳವ್ವಗೋಳ, ಹನುಮಂತ ತೋಳಿ, ಸಿದಪ್ಪ ಹಣಬರಟ್ಟಿ, ರಾಮ ಕುಡ್ಡೇಮ್ಮಿ, ಗಣಪತಿ ಜಾಗನೂರ, ಜಗದೀಶ್ ರಾನಪ್ಪಗೋಳ, ಜಡೆಪ್ಪ ಸಂಪಗಾರ, ಸರದಾರ ಹಂಜಿ, ಯಾಸೀನ್ ಮಂಕಾದಾರ, ಮಲ್ಲಪ್ಪ ಹುಚ್ಚನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: