RNI NO. KARKAN/2006/27779|Wednesday, December 4, 2024
You are here: Home » breaking news » ಗೋಕಾಕ:ಫೆಬ್ರುವರಿ 1,2,3,ಮತ್ತು 4 ರಂದು 20ನೇ ಶರಣ ಸಂಸ್ಕೃತಿ ಉತ್ಸವ: ಮುರುಘರಾಜೇಂದ್ರ ಶ್ರೀ

ಗೋಕಾಕ:ಫೆಬ್ರುವರಿ 1,2,3,ಮತ್ತು 4 ರಂದು 20ನೇ ಶರಣ ಸಂಸ್ಕೃತಿ ಉತ್ಸವ: ಮುರುಘರಾಜೇಂದ್ರ ಶ್ರೀ 

ಫೆಬ್ರುವರಿ 1,2,3,ಮತ್ತು 4 ರಂದು 20ನೇ ಶರಣ ಸಂಸ್ಕೃತಿ ಉತ್ಸವ: ಮುರುಘರಾಜೇಂದ್ರ ಶ್ರೀ

ಗೋಕಾಕ ಡಿ 1 : ಬರುವ ಫೆಬ್ರುವರಿ 1,2,3,ಮತ್ತು 4 ರಂದು
20ನೇ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಕಾಯಕಶ್ರೀ ಪ್ರಶಸ್ತಿಯನ್ನು ಜಿಮ್ನಾಸ್ಟಿಕ್‌ ಇತಿಹಾಸದಲ್ಲಿ ಮೊದಲ ಭಾರತೀಯ ಸ್ತ್ರೀ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತ್ರಿಪುರ ರಾಜ್ಯದ ಅಂತರಾಷ್ಟ್ರೀಯ ಕ್ರೀಡಾಪಟ್ಟು ಪದ್ಮಶ್ರೀ, ಖೇಲ್ ರತ್ನ, ಅರ್ಜುನ್ ಪ್ರಶಸ್ತಿ ಪುರಸ್ಕೃತ ದೀಪಾ ಕರ್ಮಾಕರ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಹಮ್ಮಿಕೊಂಡ 20 ನೇ ವರ್ಷದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಫೆಬ್ರುವರಿ 1 ರಂದು ಬೆಳಿಗ್ಗೆ ಉದ್ಯೋಗ ಮೇಳ , ಸಾಯಂಕಾಲ 6 ಘಂಟೆಗೆ ಹಾಸ್ಯ ಮತ್ತು ಸಂಗೀತ ಸಮಾವೇಶ, ಫೆಬ್ರವರಿ 2 ರಂದು ಪೊಲೀಸ್ ಸಮಾವೇಶ, ಫೆಬ್ರವರಿ 3 ರಂದು ಮಹಿಳಾ ಸಮಾವೇಶ ಹಾಗೂ ಕಾಯಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಫೆಬ್ರವರಿ 4 ರಂದು ಯುವ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಪ್ರತಿದಿನದ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಿದ್ವಾಂಸರು, ಶ್ರೀಗಳು ಭಾಗವಹಿಸಿ ತಮ್ಮ ವಿಚಾರಗಳನ್ನು ಉಣಬಡಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಪ್ರತಿದಿನ ಸಾಯಂಕಾಲ 6 ಘಂಟೆಗೆ ಜರುಗಲಿದ್ದು, ಸದ್ಬಕ್ತರು ಪ್ರತಿದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕು ಎಂದು ಮನವಿ ಮಾಡಿದರು.

ಈ ಬಾರಿಯ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷರಾಗಿ ಬಸವರಾಜ ಕೋಟಗಿ ,ಗೌರವಾಧ್ಯಕ್ಷರಾಗಿ ಶಶಿಧರ್ ದೇಮಶೆಟ್ಟಿ , ಕಾರ್ಯದರ್ಶಿ ಮೂಡಲಗಿಯ ಡಾ.ಸಂಜಯ ಶಿಂಧಿಹಟ್ಟಿ, ಕೋಶಾಧ್ಯಕ್ಷರಾಗಿ ಬಸವರಾಜ ಮುರಗೋಡ ಅವರನ್ನು ಆಯ್ಕೆ ಮಾಡಲಾಯಿತು.

ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಸಾಹಿತಿಗಳಾದ ಚಂದ್ರಶೇಖರ್ ಅಕ್ಕಿ, ಮುಖಂಡರುಗಳಾದ ಅಶೋಕ ಪೂಜಾರಿ, ಡಾ‌.ಮಹಾಂತೇಶ ಕಡಾಡಿ, ಮಲ್ಲಿಕಾರ್ಜುನ ಈಟಿ, ಮಲ್ಲಿಕಾರ್ಜುನ ಕಲ್ಲೋಳಿ, ಶಂಕರ ಗೋರೋಶಿ, ಬಸವರಾಜ ಖಾನಪ್ಪನವರ , ಎಂ.ಡಿ.ಚುನಮರಿ, ಬಸನಗೌಡ ಪಾಟೀಲ್, ಸೇರಿದಂತೆ ಅನೇಕರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬಟಕುರ್ಕಿಯ ಚೌಕಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸೇರಿದಂತೆ ಮಠದ ನೂರಾರು ಸದ್ಭಕ್ತರು ಉಪಸ್ಥಿತರಿದ್ದರು .

Related posts: