ಗೋಕಾಕ:ಮಕ್ಕಳ ಭವಿಷ್ಯವನ್ನು ನಿರ್ಮಾಣಮಾಡುವಂತಹ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ : ಡಾ.ಎಚ್.ತಿಮ್ಮಾಪೂರ
ಮಕ್ಕಳ ಭವಿಷ್ಯವನ್ನು ನಿರ್ಮಾಣಮಾಡುವಂತಹ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ : ಡಾ.ಎಚ್.ತಿಮ್ಮಾಪೂರ
ಗೋಕಾಕ ಡಿ 3 : ಮಕ್ಕಳ ಭವಿಷ್ಯವನ್ನು ನಿರ್ಮಾಣಮಾಡುವಂತಹ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬೆಳಗಾವಿಯ ಅಂಜುಮನ ಕಾಲೇಜಿನ ಪ್ರಾಚಾರ್ಯ ಡಾ.ಎಚ್. ತಿಮ್ಮಾಪೂರ ಹೇಳಿದರು .
ಮಂಗಳವಾರದಂದು ನಗರದ ಅಬ್ದುಲ್ ಕಲಾಂ ಕಾಲೇಜು ಆವರಣದಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ಬೆಳಗಾವಿ , ಗೋಕಾವಿ ಗೆಳೆಯರ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಕನ್ನಡೇತರ ಭಾಷಾ ಮಾಧ್ಯಮ ಮಕ್ಕಳಿಗೆ ಹಮ್ಮಿಕೊಂಡ ಕನ್ನಡ ವಾಚನ ಸ್ವರ್ಧೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು
ಆಂಗ್ಲ ಭಾಷೆ, ಮರಾಠಿ ಭಾಷೆ , ಉರ್ದು ಭಾಷೆಯನ್ನು ಕಲಿಯೋಣ ಆದರೆ ಕನ್ನಡ ಭಾಷೆಯನ್ನು ಪೂಜಿಸೋಣ ಏಕೆಂದರೆ ಅದು ಅನ್ನ ನೀಡುವ ಭಾಷೆಯಾಗಿದೆ. ಉರ್ದು ಭಾಷೆಯ ಜೊತೆಗೆ ಕನ್ನಡ ಭಾಷೆಯನ್ನು ಕಲಿಯುವುದು ಅತ್ಯಂತ ಮಹತ್ವದಾಗಿದೆ. ಎಸ್.ಎಸ್.ಎಲ್.ಸಿ ನಂತರ ಕಾಲೇಜು ಜೀವನದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿಯೇ ವ್ಯಾಸಂಗ ಮಾಡಬೇಕು ಆ ದಿಸೆಯಲ್ಲಿ ಕನ್ನಡ ವಿಷಯವನ್ನು ಪ್ರೀತಿಯಿಂದ ಕಲ್ಲಿಯಬೇಕು ಮತ್ತು ಉರ್ದು ಶಾಲೆಯಲ್ಲಿ ಕನ್ನಡ ಕಲಿಸುವ ಶಿಕ್ಷಕರು ಪರಣಾಮಕಾರಿಯಾಗಿ ಬೋಧಿಸಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕನ್ನಡ ವಾಚನ ಸ್ವರ್ದೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ನಿರ್ಣಾಯಕರಾಗಿ ಪತ್ರಕರ್ತ ಸಾಹಿತಿ ಸಾಧಿಕ ಹಲ್ಯಾಳ ಮತ್ತು ಡಾ.ಲಕ್ಷ್ಮಣ ಚೌರಿ ಕಾರ್ಯನಿರ್ವಹಿಸಿದರು.
ವೇದಿಕೆಯಲ್ಲಿ ಪ್ರೋ.ಎಸ್.ಎಂ ಪೀರಜಾದೆ, ಡಾ.ಲಕ್ಷ್ಮಣ ಚೌರಿ, ಜಯಾನಂದ ಮಾದರ, ಎ.ಎ.ಶಾಬಾಶಖಾನ, ಮೋಹನ ಗುಂಡ್ಲೂರ , ಆನಂದ ಸೋರಗಾವಿ ಉಪಸ್ಥಿತರಿದ್ದರು