RNI NO. KARKAN/2006/27779|Wednesday, December 11, 2024
You are here: Home » breaking news » ಗೋಕಾಕ:ಸರಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ : ನ್ಯಾಯವಾದಿ ಬಸವರಾಜ ಕೋಟಗಿ

ಗೋಕಾಕ:ಸರಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ : ನ್ಯಾಯವಾದಿ ಬಸವರಾಜ ಕೋಟಗಿ 

ಸರಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ : ನ್ಯಾಯವಾದಿ ಬಸವರಾಜ ಕೋಟಗಿ

ಗೋಕಾಕ ಡಿ 9 : ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ನ್ಯಾಯಯುತವಾಗಿದ್ದು ಸರಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ. ಇದನ್ನು ಪಂಚಮಸಾಲಿ ಸಮುದಾಯವು ತೀವೃವಾಗಿ ಖಂಡಿಸುತ್ತದೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಹಾಗೂ ಪಂಚಮಸಾಲಿ ಸಮಾಜದ ಉಪಾಧ್ಯಕ್ಷ ಬಸವರಾಜ ಕೋಟಗಿ ಹೇಳಿದರು.
ಅವರು, ನಗರದಲ್ಲಿ ಪಂಚಮಸಾಲಿ ಸಮಾಜದ ವಕೀಲರ ಸಂಘ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ಮೂಲಕ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಕೇಲಸ ಮಾಡುತ್ತಿದೆ. ನಮ್ಮ ಹೋರಾಟ ನ್ಯಾಯಯುತವಾದದ್ದು. ಕೂಡಲ ಸಂಗಮದ ಶ್ರೀ ಬಸವಮೃತ್ಯುಂಜಯ ಸ್ವಾಮಿಗಳ ನೇತ್ರತ್ವದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಹೋರಾಟದಲ್ಲಿ ಗೋಕಾಕ ತಾಲೂಕಿನ ಪಂಚಮಸಾಲಿ ಸಮಾಜ ಭಾಂದವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ಸರಕಾರ ಜಿಲ್ಲಾಧಿಕಾರಿಗಳ ಮೂಲಕ ಟ್ರಾಕ್ಟರ್ ಮತ್ತು ಕ್ರೂಸರ್ ಹೋರಾಟಕ್ಕೆ ತರಲು ನಿಷೇಧ ಹೇರಿದ್ದು ಸಮಾಜ ಭಾಂಧವರು ಸಾರಿಗೆ, ರೈಲು, ಬೈಕ್ ಹಾಗೂ ತಮ್ಮ ವಯಕ್ತಿಕ ವಾಹನಗಳ ಮೂಲಕ ರಾಜ್ಯದಾಧ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಹೋರಾಟಕ್ಕೆ ಸರಕಾರ ಸ್ಫಂಧಿಸಿದರೆ ಹೋರಾಟ ಶಾಂತಿಯುತವಾಗಿ ನಡೆಯಲಿದೆ. ಸ್ಫಂಧಿಸದಿದ್ದಲ್ಲಿ ಸುವರ್ಣ ವಿಧಾನ ಸೌಧ ಮುತ್ತಿಗೆ ಹಾಕಲಾಗುವದು ಎಂದ ಅವರು ನಮ್ಮ ಸಮಸ್ಯೆ ಕೇಳುವುದು ನಮ್ಮ ಹಕ್ಕು. ಸರಕಾರದಲ್ಲಿ ನಮ್ಮ ಸಮುದಾಯದ ಶಾಸಕರನ್ನು ಆಮಿಷಗಳಿಂದ ಒತ್ತಡ ಹೇರಲಾಗುತ್ತಿದೆ. ನಮ್ಮ ಸಮುದಾಯ ಶಾಸಕರುಗಳು ಯಾವುದೇ ಒತ್ತಡಕ್ಕೆ ಮಣಿಯದೆ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ನ್ಯಾಯವಾದಿ ಸಿ ಡಿ ಹುಕ್ಕೇರಿ ಮಾತನಾಡಿ, ಕೂಡಲ ಸಂಗಮದ ಶ್ರೀ ಬಸವಮೃತ್ಯುಂಜಯ ಸ್ವಾಮಿಗಳ ನೇತ್ರತ್ವದಲ್ಲಿ ನಡೆಯುವ ಈ ಹೋರಾಟದಲ್ಲಿ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಜಿ ಡಿ ಬಡಕುಂದ್ರಿ, ಎಸ್ ಎಮ್ ಬನ್ನೂರ, ಎಮ್ ಸಿ ಮಾಸ್ತಿಹೊಳಿ, ಐ ಎಮ್ ಪಾಟೀಲ, ಸಿ ಬಿ ಗಿಡ್ಡನವರ, ಜಿ ಎನ್ ನಾಗಗೋಳ, ಬಸವರಾಜ ಕವಲಾಪೂರ, ಕಲ್ಲೋಳಿ ಇದ್ದರು.

Related posts: