RNI NO. KARKAN/2006/27779|Wednesday, December 11, 2024
You are here: Home » breaking news » ಮೂಡಲಗಿ:ಹಣಕ್ಕಾಗಿ ಹನಿ ಟ್ರ್ಯಾಪ್ ಮಾಡಿದವರ ಮೇಲೆ ಬಿತ್ತು ಕೇಸ್ : 9 ಲಕ್ಷ ಪಡೆದುಕೊಂಡು ಮತ್ತೆ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪೈಲವಾನ ಸೇರಿ ಮೂವರು ಆರೋಪಿಗಳು ಅಂದರ್

ಮೂಡಲಗಿ:ಹಣಕ್ಕಾಗಿ ಹನಿ ಟ್ರ್ಯಾಪ್ ಮಾಡಿದವರ ಮೇಲೆ ಬಿತ್ತು ಕೇಸ್ : 9 ಲಕ್ಷ ಪಡೆದುಕೊಂಡು ಮತ್ತೆ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪೈಲವಾನ ಸೇರಿ ಮೂವರು ಆರೋಪಿಗಳು ಅಂದರ್ 

ಹಣಕ್ಕಾಗಿ ಹನಿ ಟ್ರ್ಯಾಪ್ ಮಾಡಿದವರ ಮೇಲೆ ಬಿತ್ತು ಕೇಸ್ : 9 ಲಕ್ಷ ಪಡೆದುಕೊಂಡು ಮತ್ತೆ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪೈಲವಾನ ಸೇರಿ ಮೂವರು ಆರೋಪಿಗಳು ಅಂದರ್

ಮೂಡಲಗಿ ಡಿ 10 : ಹಣಕ್ಕಾಗಿ ಪಟ್ಟಣದ ಪುರಸಭೆಯ ಸದಸ್ಯನೋರ್ವನಿಗೆ ಹನಿ ಟ್ರ್ಯಾಪ್ ಮಾಡಿದ ಆರೋಪಿಗಳಾದ ಕೆ.ಆರ್.ಎಸ್ ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಹಾಗೂ ರೇಷ್ಮಾ ಕಡಬಿಶಿವಾಪುರ ಎಂಬ ಮಹಿಳೆಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಕಳಿಸಿರುವ ಘಟನೆ ರವಿವಾರದಂದು ಜರುಗಿದೆ.

ಪರಪುರುಷ ಮಹಿಳೆ ಇರುವ ರೂಮ್ ಗೆ ಹೋಗಿ ಅರೆನಗ್ನ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು, ಪುರಸಭೆ ಸದಸ್ಯನ ಬಳಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಆ ಪ್ರಕಾರ ಪುರಸಭೆ ಸದಸ್ಯ 9 ಲಕ್ಷ ಹಣ ನೀಡಿದ್ದು, ಮತ್ತೆ ಒಂದು ಲಕ್ಷಕ್ಕೆ ನೀಡುವಂತೆ ಒತ್ತಾಯಿಸಿದ್ದಾಕ್ಕಾಗಿ ಮನನೊಂದು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಡಿ.7ರಂದು ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿದ ವೇಳೆ ಹಣಕ್ಕಾಗಿ ಹನಿ ಟ್ರ್ಯಾಪ್ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಇನ್ನು ಹನಿ ಟ್ರ್ಯಾಪ್ ದಲ್ಲಿ ಭಾಗಿಯಾದ ಮಹಿಳೆಯ ಬಳಿ ಬೇರೆ ಬೇರೆ ವ್ಯಕ್ತಿಗಳ ವಿಡಿಯೋ ಇದ್ದಾವೆ ಎನ್ನುವ ಬಗ್ಗೆ ಮಾಹಿತಿ ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಘಟನೆ ವಿವರ : ಪಟ್ಟಣದ ಕೆಇಬಿ ಫ್ಲಾಟದ ರೇಷ್ಮಾ ಕಡಬಿಶಿವಾಪುರ ಎಂಬ ಮಹಿಳೆ ಜೊತೆಗೆ ಕೆ.ಆರ್.ಎಸ್ ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಮೊದಲೇ ಸಂಚು ರೂಪಿಸಿದ ಹಾಗೆ ಡಿ. 2ರಂದು ರೇಷ್ಮಾ ಹಾಗೂ ಪುರಸಭೆ ಸದಸ್ಯ ಹುಕ್ಕೇರಿ ಪಟ್ಟಣದ ಲಾಡ್ಜ್ ಒಂದರಲ್ಲಿ ಅರೆನಗ್ನ ಬೆತ್ತಲೆಯಾದ ಸಂದರ್ಭದಲ್ಲಿ ರೊಮ್ ಒಳಗೆ ನುಗ್ಗಿದ ಅಬ್ದುಲ್, ಸುಭಾನಿ ಎಂಬುವವರು ವಿಡಿಯೋ ಮಾಡಿಕೊಂಡಿದ್ದರು.

ನಂತರ ಪುರಸಭೆ ಸದಸ್ಯನ ಬಳಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಆ ಪ್ರಕಾರ ಪುರಸಭೆ ಸದಸ್ಯ 9 ಲಕ್ಷ ಹಣ ನೀಡಿದ್ದು, ಇನ್ನುಳಿದ ಒಂದು ಲಕ್ಷ ಕೊಡು ಇಲ್ಲವಾದರೆ ನಿನ್ನ ಖಾಸಗಿ ಕ್ಷಣದ ವಿಡಿಯೋ ಬಿಡುಗಡೆ ಮಾಡ್ತಿವಿ ಎಂದು ಬೆದರಿಕೆ ಹಾಕಿದರು ಎನ್ನಲಾಗಿದೆ. ಆ ಬೆದರಿಕೆಗೆ ಹೆದರಿ ಪುರಸಭೆ ಸದಸ್ಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಜರುಗಿದೆ.

Related posts: