RNI NO. KARKAN/2006/27779|Wednesday, December 11, 2024
You are here: Home » breaking news » ಗೋಕಾಕ:ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ದಿ 13 ರಂದು ಧರಣಿ ಸತ್ಯಾಗ್ರಹ : ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ

ಗೋಕಾಕ:ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ದಿ 13 ರಂದು ಧರಣಿ ಸತ್ಯಾಗ್ರಹ : ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ 

ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ದಿ 13 ರಂದು ಧರಣಿ ಸತ್ಯಾಗ್ರಹ : ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ
ಗೋಕಾಕ ಡಿ 11 : ಗೋಕಾಕ ನೂತನ ಜಿಲ್ಲೆ ಎಂದು ಘೋಷಿಸಲು ಬರುವ ಶುಕ್ರವಾರ ದಿನಾಂಕ 13 ರಂದು ನಗರದ ತಹಶೀಲ್ದಾರ್ ಕಛೇರಿ ಎದುರು ಒಂದು ದಿನ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಹೇಳಿದರು.

ಬುಧವಾರದಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 4 ದಶಕಗಳಿಂದ ಗೋಕಾಕ ನೂತನ ಜಿಲ್ಲಾಕೇಂದ್ರವನ್ನಾಗಾಸಲು ಸಸತ ಹೋರಾಟಗಳು ನಡೆಯುತ್ತಿದ್ದು, ಸರಕಾರ ಹಾಗೂ ಜಿಲ್ಲೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಕೇಂದ್ರವಾಗಿಲ್ಲ, ಈಗಲಾದರೂ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲಾ ಕೇಂದ್ರವಾಗಲು ಸಹಕಾರ ನೀಡಬೇಕು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮುತುವರ್ಜಿ ವಹಿಸಿ ಗೋಕಾಕ ನೂತನ ಜಿಲ್ಲಾ ಕೇಂದ್ರವಾಗಿಸಲು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಬೇಕು ಎಂದ ಅವರು ಶುಕ್ರವಾರದಂದು ನಡೆಯುವ ಧರಣಿ ಸತ್ಯಾಗ್ರಹದಲ್ಲಿ ನಗರದ ವಿವಿಧ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ವಕೀಲರ ಸಂಘ, ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೋಳಬೇಕು ಎಂದು ಅಶೋಕ ಪೂಜಾರಿ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರೋ. ಅರ್ಜುನ್ ಪಂಗನ್ನವರ,ದಸ್ತಗಿರಿ ಪೈಲವಾನ, ಸಂಜೀವ ಪೂಜಾರಿ, ಸದಾಕತ ಮಂಕಾದಾರ ಉಪಸ್ಥಿತರಿದ್ದರು.

Related posts: