ಗೋಕಾಕ:ಹಿಂದಿನ ಸರಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ನೂತನ ಜಿಲ್ಲೆಯಂದು ಘೋಷಣೆ ಮಾಡಬೇಕು: ಮುರುಘರಾಜೇಂದ್ರ ಶ್ರೀ ಆಗ್ರಹ
ಹಿಂದಿನ ಸರಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ನೂತನ ಜಿಲ್ಲೆಯಂದು ಘೋಷಣೆ ಮಾಡಬೇಕು: ಮುರುಘರಾಜೇಂದ್ರ ಶ್ರೀ ಆಗ್ರಹ
ಗೋಕಾಕ ಡಿ 13 : ಹಿಂದಿನ ಸರಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ನೂತನ ಜಿಲ್ಲೆಯಂದು ಘೋಷಣೆ ಮಾಡಬೇಕು ಎಂದು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರದಂದು ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಒಂದು ದಿನದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಸರಕಾರ ಗೋಕಾಕ ಜಿಲ್ಲೆ ಮಾಡದಿದ್ದಲ್ಲಿ ಅನಿರ್ವಾಯವಾಗಿ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಸೇರಿ ಗೋಕಾಕ ಜಿಲ್ಲೆಯನ್ನು ಮಾಡಬೇಕು . ವಿಧಾನ ಸಭೆ ಅಧಿವೇಶನದಲ್ಲಿ ಈ ಕುರಿತು ಚರ್ಚೆ ಮಾಡಿ ಜಿಲ್ಲೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಜಿಲ್ಲೆ ಘೋಷಣೆ ಮಾಡದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಮಾತನಾಡಿ ಗೋಕಾಕ ಜಿಲ್ಲಾ ಹೋರಾಟ ಇಂದು ನಿನ್ನೆಯದಲ್ಲ 4 ದಶಕಗಳ ಹೋರಾಟ ಹಿಂದೆ ಗೋಕಾಕ ಜಿಲ್ಲಾ ಹೋರಾಟ ದೊಡ್ಡ ಮಟ್ಟದಲ್ಲಿ ಜರುಗತ್ತಿದ್ದು, ಅಂದಿನ ಹೋರಾಟಗಳು ಸರಕಾರದ ಕಣ್ಣು ತೆರೆಸಿತ್ತಿದ್ದವು ಆದರೆ ಇಂದು ಆ ಮಟ್ಟದಲ್ಲಿ ಹೋರಾಟ ನಡೆಯುತ್ತಿಲ್ಲ, ಇಂದಿನ ಪರಿಸ್ಥಿತಿಯಲ್ಲಿ ಶಾಸಕರು ಅಭಿಪ್ರಾಯ ವಿಲ್ಲದೆ ಯಾವುದೇ ನಿರ್ಣಯಗಳನ್ನು ತಗೆದುಕೊಳ್ಳುವದಿಲ್ಲ ಹಾಗಾಗಿ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಸಚಿವರು ಬೆಳಗಾವಿ ಅಭಿವೃದ್ಧಿ ಹಿತದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆ ಮಾಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಸಭೆ ಮಾಡಿ ಬೆಳಗಾವಿ ಜಿಲ್ಲಾ ವಿಭಜನೆಗೆ ಪೂರಕವಾಗಿ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ ಆದಷ್ಟು ಬೇಗ್ ಸಚಿವ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರು ಜಿಲ್ಲೆಯ ಎಲ್ಲಾ ಶಾಸಕರ ಅಭಿಪ್ರಾಯ ಪಡೆದು ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಗೋಕಾಕ ನೂತನ ಜಿಲ್ಲೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಬೆಳಗಾವಿ ವಿಭಜನೆ ಆದರೆ ಗಡಿ ವಿಷಯ. ಶಕ್ತಿ ಕಳೆದು ಕೊಳ್ಳುತ್ತದೆ ಎಂದು ಭಾವಿಸುವುದು ತಪ್ಪು ಗಡಿ ವಿಷಯ ಬಂದಾಗ ಎಲ್ಲಾ ಕನ್ನಡಿಗರು ಬೆಳಗಾವಿಯೊಂದಿಗೆ ಇದ್ದಾರೆ. ಬೆಳಗಾವಿ ನಗರದ ಕನ್ನಡಿಗರಿಂದ ಅಷ್ಟೇ ಗಡಿ ವಿಷಯವನ್ನು ಉಳಿಸಲು ಸಾಧ್ಯವಿಲ್ಲ ಎಲ್ಲಾ ಕನ್ನಡಗರು ಸೇರಿದರೆ ಮಾತ್ರ ನಾವು ಬೆಳಗಾವಿ ಗಡಿ ಸಮಸ್ಯೆಯನ್ನು ಎದುರಸಲು ಸಾಧ್ಯ ಎಂದ ಅವರು ಬೆಳಗಾವಿ ಕನ್ನಡ ಪರ ಹೋರಾಟಗಾರರು ಅಂಜಬಾರದು ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು ಬೆಳಗಾವಿ ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸಬಾರದು. ಹಾಗಾಗಿ ಉಸ್ತುವಾರಿ ಸಚಿವರು ಅಧಿವೇಶನ ಸಂದರ್ಭದಲ್ಲಿ ಅಥವಾ ಅಧಿವೇಶನ ಮುಗಿದ ನಂತರ ಜಿಲ್ಲೆಯ ಶಾಸಕರ ಸಭೆ ನಡೆಯಿಸಿ ಗೋಕಾಕ ಜಿಲ್ಲಾ ರಚನೆ ಮಾಡಬೇಕು ಎಂದು ಆಗ್ರಹಿಸಿದ ಅವರು ಮುಂದೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ ಮಾತನಾಡಿ ಅಖಂಡ ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಕನಿಷ್ಠ ಮೂರು ಜಿಲ್ಲೆ ಆಗಬೇಕು. ರಾಜ್ಯದಲ್ಲಿ ದೊಡ್ಡ ಜಿಲ್ಲೆಗೆ ಅಷ್ಟೇ ಅನುದಾನ ಚಿಕ್ಕ ಜಿಲ್ಲೆಗೂ ಸಹ ಅಷ್ಟೇ ಅನುದಾನ ಹಾಗಾಗಿ ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ ಅವರು ಈ ಹೋರಾಟಕ್ಕೆ ವಕೀಲರ ಸಂಘದ ಸದಾ ಬೆಂಬಲ ನೀಡುತ್ತದೆ ಎಂದರು.
ಡಾ.ಮಹಾಂತೇಶ ಕಡಾಡಿ , ಚಂದ್ರಶೇಖರ್ ಕೊಣ್ಣೂರ, ಬಸವರಾಜ ಖಾನಪ್ಪನವರ, ಚಂದನ ಗಿಡ್ಡನ್ನವರ, ಅರ್ಜುನ್ ಪಂಗನ್ನವರ ಸೇರಿದಂತೆ ಅನೇಕರು ಮಾತನಾಡಿ ಸರಕಾರ ಹೆಸರಿಗೆ ಮಾತ್ರ ಬೆಳಗಾವಿಯಲ್ಲಿ ಸುರ್ವಣ ವಿಧಾನಸೌಧ, ಧಾರವಾಡದಲ್ಲಿ ಹೈಕೋರ್ಟ್ ನಿರ್ಮಿಸಿ ಕೈತೊಳೆದುಕೊಂಡಿದೆ. ಆದರೆ ಅದಕ್ಕೆ ಪೂರಕವಾಗಿ ಅಭಿವೃದ್ಧಿಯಾಗುತ್ತಿಲ್ಲ. ಜನಸಂಖ್ಯೆ ಆಧಾರದ ಮೇಲೆ ಬೆಳಗಾವಿ ಜಿಲ್ಲೆಯನ್ನು ಘೋಷಿಸಬೇಕು. ಸರಕಾರಗಳು ರಚಿಸಿದ ಆಯೋಗಗಳು ಗೋಕಾಕ ಜಿಲ್ಲೆಯ ಮಾಡಲು ಯೋಗ್ಯ ಇದೆ ಎಂದು ವರದಿ ನೀಡಿದರು ಸಹ ಸರಕಾರ ಇಚ್ಚಾಶಕ್ತಿ ಕೊರತೆಯಿಂದ ಇದು ಹಿಂದೆ ಬಿದಿದ್ದು, ಆದಷ್ಟು ಬೇಗ್ ಶಾಸಕರುಗಳಾದ ಜಾರಕಿಹೊಳಿ ಸಹೋದರರು ಸದನದಲ್ಲಿ ಇದರ ಬಗ್ಗೆ ಧ್ವನಿ ಎತ್ತಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಗೋಕಾಕ ಜಿಲ್ಲೆ ಆಗಲಿಕ್ಕೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ್ ಕಡಕೋಳ, ಸೋಮಶೇಖರ್ ಮಗದುಮ್ಮ, ದಸ್ತಗಿರಿ ಪೈಲವಾನ, ಪೀರಜಾದೆ , ಆರ್ ಕೆ ಪವಾರ ಜೈನುಲ್ಲಾ ಅಂಕಲಗಿ, ಮುನ್ನಾ ಖತೀಬ, ಸದಿಕತ ಮಂಕಾದಾರ, ಸಂಜೀವ ಪೂಜಾರಿ, ಲಕ್ಷ್ಮಣ ಸವಸುದ್ದಿ, ಪುಟ್ಟು ಖಾನಾಪುರೆ, ಬಸವಣ್ಣೆಪ್ಪ ಹಿರಟ್ಟಿ, ನಿಂಗಪ್ಪ ಅಮಿನಬಾವಿ, ಮಲ್ಲಿಕಾರ್ಜುನ ಅರಭಾವಿ, ರಜನಿಕಾಂತ್ ಮಾಳೋದೆ, ಶಫೀ ಜಮಾದರ, ಬಿರಪ್ಪ ಪ್ರಧಾನಿ, ಮಲ್ಲಿಕಾರ್ಜುನ ಈಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.