RNI NO. KARKAN/2006/27779|Wednesday, December 18, 2024
You are here: Home » breaking news » ಗೋಕಾಕ:ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ 

ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ

ಗೋಕಾಕ ಡಿ 16 : ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ. ಎಂದು ಗೋಕಾಕದ ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮ.ನಿ.ಪ್ರ. ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ರವಿವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಮತ್ತು ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆಗಳ ಸಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 182ನೇ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಪ್ರಸ್ತುತ ಸನ್ನಿವೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು 12ನೇ ಶತಮಾನದ ಶರಣರು ಉಲ್ಲೇಖಿಸಿದ್ದಾರೆ. ಲಿಂಗಾಂಗ ಸಾಮರಸ್ಯ ಸಾಧಿಸಿದ್ದ 12ನೇ ಶತಮಾನದ ಶರಣರು ತ್ರಿಕಾಲ ಜ್ಞಾನಿಗಳಾಗಿದ್ದರು. ಅವರು ಭೂತ, ವರ್ತಮಾನ, ಭವಿಷ್ಯವನ್ನು ನಿಖರವಾಗಿ ನುಡಿದಿದ್ದಾರೆ ಎಂದು ಹೇಳಿದರು.
ಹಾವೇರಿ ಶ್ರೀ ತಪೋನಿಧಿ ಮದ್ಘನಲಿಂಗ ಚಕ್ರವರ್ತಿ ಬಸವ ಶಾಂತ ವೀರ ಪಟ್ಟಾಧ್ಯಕ್ಷ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಶಿವಾನುಭವಗೋಷ್ಠಿಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು.

ವೇದಿಕೆಯ ಮೇಲೆ ಶ್ರೀಮತಿ ಶೈಲಾ ದುಂಡಪ್ಪ ಬಿದರಿ, ದಾಸೋಹಿಗಳಾದ ಶ್ರೀಮತಿ ವೀಣಾ ಸದಾನಂದ ಹಿರೇಮಠ, ಶ್ರೀಮತಿ ಮಹಾದೇವಿ ದುಂಡಪ್ಪ ಕಿರಗಿ, ಮಹಾಲಿಂಗಪ್ಪ ನೇಗಿನಹಾಳ, ದುಂಡಪ್ಪಣ್ಣಾ ಮಗದುಮ್ ಉಪಸ್ಥಿತರಿದ್ದರು. ಎಸ್. ಕೆ. ಮಠದ ಕಾರ್ಯಕ್ರಮ ನಿರೂಪಿಸಿದರು. ಆರ್. ಎಲ್. ಮಿರ್ಜಿ ವಂದಿಸಿದರು.

Related posts: