RNI NO. KARKAN/2006/27779|Sunday, December 29, 2024
You are here: Home » breaking news » ಗೋಕಾಕ:ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ : ಡಾ‌.ವಾಯ್ ಎಂ. ಯಾಕೋಳ್ಳಿ

ಗೋಕಾಕ:ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ : ಡಾ‌.ವಾಯ್ ಎಂ. ಯಾಕೋಳ್ಳಿ 

ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ : ಡಾ‌.ವಾಯ್ ಎಂ. ಯಾಕೋಳ್ಳಿ

ಗೋಕಾಕ ಡಿ 28 : ರಾಷ್ಟ್ರ ಕವಿ ಕುವೆಂಪು ಅವರು ವೈಚಾರಿಕ, ವೈಜ್ಞಾನಿಕ ಕವಿಯಾಗಿದ್ಜರು. ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ ಎಂದು ನಿವೃತ್ತ ಪ್ರಾಚಾರ್ಯ, ಸವದತ್ತಿಯ ಸಾಹಿತಿ ಡಾ.ವಾಯ್.ಎಂ ಯಾಕೋಳ್ಳಿ ಹೇಳಿದರು.

ಶನಿವಾರದಂದು ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜಿ.ಇ.ಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆ ಹಾಗೂ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಕನ್ನಡ ಸಂಘದ ಸಹಭಾಗಿತ್ವದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ದಕ್ಷಿಣ ಕನ್ನಡವನ್ನು ಕುವೆಂಪು ಪ್ರತಿನಿಧಿಸಿದರೆ ಬೇಂದ್ರೆ ಆವರು ಉತ್ತರ ಕರ್ನಾಟಕವನ್ನು ಪ್ರತಿನಿಧಿಸಿ ಕನ್ನಡವನ್ನು ಬೇರುಮಟ್ಟದಲ್ಲಿ ಕಟ್ಟಿದ್ದಾರೆ. ಕುವೆಂಪು ಅವರು ಬರೆದ ಸಾವಿರ, ಸಾವಿರ ಪುಟ್ಟಗಳಷ್ಟು ಕಾದಂಬರಿಗಳು ಕನ್ನಡ ಮೇಲೆ ಅತೀವ ಪ್ರಭಾವವನ್ನು ಬೀರಿವೆ‌.ಕುವೆಂಪು ಕವಿ ತಪಸ್ವಿ ಕನ್ನಡಕ್ಕೆ ಬಹಳಷ್ಟು ಪ್ರಶಸ್ತಿಗಳನ್ನು ತಂದುಕೊಟ್ಟ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಕನ್ನಡಕ್ಕೆ ಪದ್ಮಭೂಷಣ, ಜ್ಜಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದು ಕನ್ನಡದ ಅಸ್ಮಿತೆ ಕುವೆಂಪು ಅವರು. ಹುಟ್ಟಿನಿಂದ ಸಾಯುವವರೆಗೆ ಕನ್ನಡವನ್ನು ಓದಿದರು ಮುಗಿಯದ ಸಾಹಿತ್ಯ ಕನ್ನಡದಲ್ಲಿದೆ. ಇಂದಿನ ವಿದ್ಯಾರ್ಥಿಗಳು ಕರ್ನಾಟಕ ಕಂಡ ಮಹಾನ ಸಾಹಿತಿಗಳನ್ನು ಓದಿ ತಿಳಿದುಕೊಳ್ಳಬೇಕು. ವಿದ್ಯಾವಂತರು ಆದವರು ಸಮಾಜವನ್ನು ಕಟ್ಟುವ ಕಾರ್ಯವನ್ನು ಮಾಡುತ್ತಾರೆ. ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವ ಕಾರ್ಯವನ್ನು ಅಂದಿನ ಸಾಹಿತಿಗಳು ಮಾಡಿದರು. ಅವರಂತೆ ನಾವು ಇಂದು ಸದೃಢ ಸಮಾಜವನ್ನು ಕಟ್ಟಬೆಕಾಗಿದೆ. ಕನ್ನಡ ಅಭಿಮಾನವನ್ನು ಹೆಚ್ಚಿಸಲು ಇಂದು ಕುವೆಂಪು ಅವರ ಕಾವ್ಯ ಮತ್ತು ಕಾದಂಬರಿಗಳು ನಮಗೆ ಇಂದು ಬೇಕಾಗಿವೆ. ಅವರ ಬರೆದ ಕವನ, ಕಾವ್ಯ ,ಕಾದಂಬರಿ ಕಥೆಗಳನ್ನು ಓದಿ ಕನ್ನಡವನ್ನು ಗಟ್ಟಿಗೊಳಿಸುವ ಕಾರ್ಯಮಾಡಬೇಕಾಗಿದೆ. ಕುವೆಂಪು ಅವರ ವೈಚಾರಿಕ ಸಾಹಿತ್ಯ ಇಂದಿನ ಯುವಕರಿಗೆ ಅತಿ ಅವಶ್ಯಕವಾಗಿದೆ ಅದನ್ನು ಇಂದಿನ ಯುವ ಸಾಹಿತಿಗಳು ಓದಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಈಶ್ವರ ಮಮದಾಪೂರ ಕನ್ನಡ ಅಂದರೆ ಕುವೆಂಪು ,ಕುವೆಂಪು ಅಂದರೆ ಕನ್ನಡ ಹಾಗೆ ಬದುಕು ಬಾಳಿದವರು ರಾಷ್ಟ್ರ ಕವಿ ಕುವೆಂಪು. ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಇಂದು ನಾವು ಮಾಡಬೇಕಾಗಿದೆ. ಕನ್ನಡ ನಾಡಿನ ಪ್ರಮುಖ ಕಣ್ಣುಗಳೆಂದರೆ ಕುವೆಂಪು ಮತ್ತು ಬೇಂದ್ರೆ ಅವರು ಇವರಿಬ್ಬರೂ ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಇಂದಿನ ಬರಹಗಳು ಮತ್ತು ಕವಿತೆಗಳು ಪ್ರೀತಿ ಮತ್ತು ವಿಶ್ವಾಸ ಬೆಳೆಸುವ ಕಾರ್ಯಮಾಡಬೇಕಾಗಿದೆ. ಕುವೆಂಪು ಕನ್ನಡದ ಅಸ್ಮಿತೆಯಾಗಿ ನಮ್ಮ ಮನ, ಮನೆಗಳಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಮೂಡನಂಬಿಕೆ ವಿರುದ್ಧವಾಗಿ ಕುವೆಂಪು ಅವರು ತಮ್ಮ ಬರವಣಿಗೆಯ ಮೂಲಕ ಸಮರವನ್ನು ಸಾರಿದ್ದರು. ಇಂದು ನಾವು ನಿರ್ಲಕ್ಷ್ಯ ವಹಿಸಿದರೆ ಕನ್ನಡ ಭಾಷೆಯನ್ನು ಕಳೆದುಕೊಳ್ಳುವ ಆಂತಕ ಎದುರಿಸುತ್ತಿದ್ದೇವೆ . ನಮ್ಮ ಕನ್ನಡ ಭಾಷೆಯನ್ನು ಗಟ್ಟಿಗೊಳಿಸಲು ನಾವು ಇಂದು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಮಾಡಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುವೆಂಪು ಅವರ ಕುರಿತು ಹಮ್ಮಿಕೊಂಡ ಭಾಷಣ ಸ್ವರ್ಧೆಯಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ವ್ಹಿ‌‌.ವ್ಹಿ ಮೋದಿ ವಹಿಸಿದ್ದರು.
ಸುಲದಾ ಕಲ್ಲೋಳಿ ಸ್ವಾಗತಿಸಿದರು, ಶ್ರೀದೇವಿ ಖಡಕಬಾವಿ ನಿರೂಪಿಸಿದರು, ಅಜಯ ಮಾಲದಿನ್ನಿ ವಂದಿಸಿದರು.
ವೇದಿಕೆಯಲ್ಲಿ ವಾಯ್.ಬಿ.ಕೊಪ್ಪದ , ಪ್ರಕಾಶ ದಾನನ್ನವರ, ವಿಜಯಲಕ್ಷ್ಮೀ ಬಬಲಿ ಉಪಸ್ಥಿತರಿದ್ದರು.

Related posts: