RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ನಾಳೆಯಿಂದ ಸಚಿವ ಜಾರಕಿಹೊಳಿ ಜಿಲ್ಲಾ ಪ್ರವಾಸ

ಗೋಕಾಕ:ನಾಳೆಯಿಂದ ಸಚಿವ ಜಾರಕಿಹೊಳಿ ಜಿಲ್ಲಾ ಪ್ರವಾಸ 

ನಾಳೆಯಿಂದ ಸಚಿವ ಜಾರಕಿಹೊಳಿ ಜಿಲ್ಲಾ ಪ್ರವಾಸ

ಗೋಕಾಕ ಅ 26: ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 27ರಿಂದ ನವ್ಹಂಬರ್ 3 ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ದಿ. 27 ರಂದು ಬೆಳಿಗ್ಗೆ 05.30 ಹುಬ್ಬಳ್ಳಿಯಿಂದ ರಸ್ತೆ ಮೂಲಕ ಗೋಕಾಕಿಗೆ ಆಗಮನ, ನಂತರ 11 ಗಂಟೆಗೆ ರಾಯಬಾಗ ತಾಲೂಕಿನ ಹಾರೋಗೇರಿಯಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿ, ಮಧ್ಯಾಹ್ನ 1 ಗಂಟೆಗೆ ಸವದತ್ತಿ ನವಿಲು ತೀರ್ಥ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿ, ಕಾರ್ಯಕರ್ತರ ಭೇಟಿ, ಸಂಜೆ 6 ಗಂಟೆಗೆ ಗೋಕಾಕದಲ್ಲಿ ವಾಸ್ತವ್ಯ. ದಿ. 28 ರಂದು ಗೋಕಾಕ ವಿಧಾನ ಸಭಾ ಮತಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು, ಮುಂಜಾನೆ 10 ಗಂಟೆಗೆ ಕಾಗವಾಡ ಮತಕ್ಷೇತ್ರದದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು, ಸಂಜೆ 6 ಗಂಟೆಗೆ ಗೋಕಾಕದಲ್ಲಿ ಸಾರ್ವಜನಿಕರ ಭೇಟಿ ಮತ್ತು ಗೋಕಾಕದಲ್ಲಿಯೇ ವಾಸ್ತವ್ಯ. ದಿ 29 ಮುಂಜಾನೆ 9 ಗಂಟೆಗೆ ಸ್ಥಳೀಯ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಭೇಟಿ, ಮತ್ತು ವಾಸ್ತವ್ಯ. ದಿ.30ರಂದು 10 ಗಂಟೆಗೆ ಬೆಳಗಾವಿ ನಗರದ ಸ್ಥಳೀಯ ಕಾರ್ಯಕ್ರಮ ಭಾಗಿ, ಸಂಜೆ ಗೋಕಾಕ ವಾಸ್ತವ್ಯ. ದಿ.31ರಂದು ಮುಂಜಾನೆ 10ಕ್ಕೆ ಹರಿಹರದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿ, ಸಂಜೆ ಗೋಕಾಕ ವಾಸ್ತವ್ಯ. ದಿ.01 ರಂದು ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿ, ಹಾಗೂ ಸ್ಥಳೀಯ ಕಾರ್ಯಕ್ರಮಸಾರ್ವಜನಿಕರ ಭೇಟಿ, ಸಂಜೆ 6ಕ್ಕೆ ಗೋಕಾಕದಲ್ಲಿ ವಾಸ್ತವ್ಯ. ದಿ.02ರಂದು ಮುಂಜಾನೆ 11ಕ್ಕೆ ರೋಡ್ ಶೋ ಕಾಸಿಯಾ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಆಡಳಿತ ಬೆಳಗಾವಿ ಇವರ ವತಿಯಿಂದ, ಸಂಜೆ 6ಕ್ಕೆ ಗೋಕಾಕ ವಾಸ್ತವ್ಯ. ದಿ.03ರಂದು ಮುಂಜಾನೆ 10 ಗಂಟೆಗೆ ಬೆಳಗಾವಿ ಜಿಲ್ಲೆಯ ಅತೀವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಪರಿಹಾರ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಡನೆ ಚರ್ಚೆ(ಬೆಳಗಾವಿ ಜಿಲ್ಲಾ ಕಛೇರಿ) ಸಂಜೆ 06 ಕ್ಕೆ ಗೋಕಾಕ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: