ಗೋಕಾಕ:ಜಮಖಂಡಿ ಮತ್ತು ಮುಧೋಳದಲ್ಲಿ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ ನ ಶಾಖೆ ಉದ್ಘಾಟನೆ : ಎಂ.ಡಿ.ಚುನಮರಿ
ಜಮಖಂಡಿ ಮತ್ತು ಮುಧೋಳದಲ್ಲಿ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ ನ ಶಾಖೆ ಉದ್ಘಾಟನೆ : ಎಂ.ಡಿ.ಚುನಮರಿ
ಗೋಕಾಕ ಡಿ 31: 1906ರಲ್ಲಿ ಸ್ಥಾಪನೆಗೊಂಡ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ. 118 ವರ್ಷಗಳನ್ನು ಪೂರೈಸಿ ಅಭಿವೃದ್ಧಿ ಪಥದತ್ತ ಮುನ್ನಡುತ್ತಾ ನೂತನ ಶಾಖೆಯಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಬ್ಯಾಂಕಿನ ಹಿರಿಯ ನಿರ್ದೇಶಕ ಎಂ.ಡಿ.ಚುನಮರಿ ಹೇಳಿದರು.
ಸೋಮವಾರದಂದು ನಗರದ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ. ನ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ದಿನಾಂಕ : 01.01.2025 ರಂದು ಬ್ಯಾಂಕಿನ 7 ನೇ ಶಾಖೆಯನ್ನು ಜಮಖಂಡಿ ನಗರದಲ್ಲಿ ಪೂಜ್ಯ ಶ್ರೀ ಷ. ಬ್ರ. ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರ ಅಮೃತ ಹಸ್ತದಿಂದ ಹಾಗೂ
ದಿನಾಂಕ : 02.01.2025 ರಂದು ಬ್ಯಾಂಕಿನ 8 ನೇ ಶಾಖೆಯನ್ನು ಮುಧೋಳ ನಗರದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ವೇದಮೂರ್ತಿ ಚಂದ್ರಶೇಖರ ಮಹಾಸ್ವಾಮಿಗಳು ಇವರ ಅಮೃತ ಹಸ್ತದಿಂದ ಉದ್ಘಾಟಣೆ ಮಾಡಲಾಗುತ್ತಿದೆ ಸದ್ಯದಲ್ಲೇ ಬೆಳಗಾವಿ ನಗರದಲ್ಲಿಯೂ ನೂತನ ಶಾಖೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ , ಉಪಾಧ್ಯಕ್ಷ ಸುಧೀರ್ ಅಂಕಲಿ, ನಿರ್ದೇಶಕರುಗಳಾದ ಜಯಾನಂದ ಮುನವಳ್ಳಿ, ವೀರಣ್ಣಾ ಬೀದರಿ, ದುಂಡಪ್ಪ ಬೀದರಿ, ಮಹಾಂತೇಶ ಕಲ್ಲೋಳಿ, ರಾಜಶೇಖರ್ ತಾರಳಿ, ಶಾಂತಾ ಘೋಡಗೇರಿ, ಚಂದ್ರಕಾಂತ್ ಕುರಬೇಟ್, ಶ್ರೀಕಾಂತ್ ಪಟ್ಟಣಶೆಟ್ಟಿ ಹಾಗೂ ಪ್ರಧಾನ ವ್ಯವಸ್ಥಾಪಕ ಶಿವನಗೌಡ ಪಾಟೀಲ್ ಇದ್ದರು.