RNI NO. KARKAN/2006/27779|Sunday, January 5, 2025
You are here: Home » breaking news » ಗೋಕಾಕ:ನೆಚ್ಚಿನ ಅಧಿಕಾರಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು

ಗೋಕಾಕ:ನೆಚ್ಚಿನ ಅಧಿಕಾರಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು 


ನೆಚ್ಚಿನ ಅಧಿಕಾರಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು

ಗೋಕಾಕ ಜ 3 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ. ಶ್ರೀನಿವಾಸ ಅವರ ವರ್ಗಾವಣೆ ಆದೇಶವನ್ನು ರದ್ದು ಮಾಡುವಂತೆ ಆಗ್ರಹಿಸಿ ಇಲ್ಲಿನ ಮೆಟ್ರಿಕ್ ನಂತರ/ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಶುಕ್ರವಾರದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ. ಶ್ರೀನಿವಾಸ ಅವರನ್ನು ಸರ್ಕಾರ ಹಠಾತಾಗಿ
ವರ್ಗಾವಣೆ ಮಾಡಿ ಆದೇಶಿಸಿದ್ದು ತರವಲ್ಲ . ಕೆ. ಶ್ರೀನಿವಾಸ ಅವರು ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಯಾಗಿದ್ದು, ಅವರು ಹಿಂ.ವ.ಕ ಇಲಾಖೆ ಆಯುಕ್ತರಾಗಿ ಅಧಿಕಾರ ಸ್ವಿಕರಿಸಿದ ನಂತರ ಇಲಾಖೆಯಲ್ಲಿ ಕ್ರಾಂತಿಕಾರ ಬದಲಾವಣೆ ಆಗಿರುತ್ತವೆ. ಇಲಾಖೆಯ ಹಾಸ್ಟೆಲ್‌ಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಇಲಾಖೆಯ ಹಾಸ್ಟೆಲ್‌ಗಳಲ್ಲಿ ಮಕ್ಕಳ ವಸತಿ, ಊಟ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಮುತುವರ್ಜಿ ವಹಿಸಿ ಕಾರ್ಯಮಾಡಿರುವ ಕೆ.ಶ್ರೀನಿವಾಸ ಅವರು ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ. ಅವರು ಆಯುಕ್ತರಾಗಿ ಬಂದಾಗಿನಿಂದ ಇಲಾಖೆಯ ಆಡಳಿತ ಯಂತ್ರದಲ್ಲಿ ಬಹಳಷ್ಟು ಸುದಾರಣೆ ಆಗಿ ಕೆಳಗಿನ ಸಿಬ್ಬಂದಿ ಹಾಗೂ ಅಧಿಕಾರಿಗಳು, ಆಯುಕ್ತರು ಯಾವ ದಿನ, ಯಾವ ಸಮಯದಲ್ಲಿ, ಯಾವ ಹಾಸ್ಟೆಲ್‌ಗೆ ಲೈವ ಬಂದು ಮಕ್ಕಳಿಗೆ ನೀಡುವ ಮೂಲ ಭೂತ ಸೌಲಭ್ಯಗಳನ್ನು ಪರಿಶೀಲಿಸುತ್ತಾರೆ ಎಂಬ ಭಯದಲ್ಲಿ ಅಧಿಕಾರಿಗಳು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ.
ಕೆ.ಶ್ರೀನಿವಾಸ ಅವರು ಇಲಾಖೆಗೆ ಬಂದಾಗಿನಿಂದ ನಮಗೆ ಸಾಕಷ್ಟು ಅನುಕೂಲಗಳು ಆಗಿದ್ದು, ಇವರೇ ಇಲಾಖೆ ಆಯುಕ್ತರಾಗಿ ಮುಂದುವರೆದರೆ ನಮ್ಮಂತಹ ಲಕ್ಷಾಂತರ ಬಡ ಮಕ್ಕಳಿಗೆ ಸರಕಾರದ ಯೋಜನೆಗಳು ನೇರವಾಗಿ ಸಿಗುವುದರಲ್ಲಿ ಸಂದೇಹ ವಿಲ್ಲ. .ಹಾಗಾಗಿ ಕೆ.ಶ್ರೀನಿವಾಸ ವರ್ಗಾವಣೆ ಆದೇಶವನ್ನು ತಾವು ಕೂಡಲೇ ರದ್ದು ಮಾಡಿ ಮೊದಲಿದ್ದ ಜಾಗದಲ್ಲಿಯೇ ಅವರನ್ನು ಮುಂದುರವೆಸಬೇಕೆಂದು ಮನವಿಯ ಮೂಲಕ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಪುಂಡಲೀಕ ಗಡಾದಿ,ಬಾಳೇಶ ನಾಯಿಕ, ನಾಗರಾಜ್ ಸಂಬಾಳ, ಸುನೀಲ ಮೇಲ್ಮಟ್ಟಿ,ರಮೇಶ ನಾಯಿಕ, ಮುತ್ತೆಪ್ಪ ನಿಪ್ಪನ್ಯಾಳ,ಮನೋಜ ಜುರಳಿ,ಗೌಡಪ್ಟ ಪಾಟೀಲ್, ನಿಂಗಪ್ಪ ಧರ್ಮಟ್ಟಿ,ಸಾದಿಕ ಮುಲ್ಲಾ, ಲಕ್ಷ್ಮಣ ದೊಂಬರ, ಅನಿಲ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: